ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುವುದು ಹೇಗೆ ಮತ್ತು ಅದರಿಂದ ಸಿಗುವ ಪ್ರಯೋಜನಗಳು

7:00 AM, Thursday, July 30th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

varamahalakshmiಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150

ವರಮಹಾಲಕ್ಷ್ಮಿ ವ್ರತವನ್ನು ತಾವು ಈ ರೀತಿಯಾಗಿ ಆಚರಿಸಿ. ಶುಕ್ರವಾರದ ದಿವಸ ಸಂಜೆಯ ವೇಳೆ ತನಕ ಮನೆಯಲ್ಲಿನ ಯಾರಾದರೊಬ್ಬರು ಉಪವಾಸ ಇರಬೇಕು. ಕಳಶದಲ್ಲಿ ಅಕ್ಕಿ ತುಂಬಿಸಿ.

ದ್ರಾಕ್ಷಿ, ಬಾದಾಮಿ, ಕಲ್ಲುಸಕ್ಕರೆ, ಕರ್ಜೂರ, ಗೋಡಂಬಿ, ಐದು ಬಗೆಯ ಹಣ್ಣುಗಳನ್ನು ಇರಿಸುವ ಕಳಶವನ್ನು ಲಕ್ಷ್ಮಿ ಕಳಶವೆಂದು ಕರೆಯಲಾಗುತ್ತದೆ. ಆ ಕಳಶವನ್ನು ಚಿನ್ನ ಅಥವಾ ಬೆಳ್ಳಿಯಿಂದ ತಯಾರಿಸಿದ ಮುಖವಾಡವನ್ನಿಟ್ಟು ಹಾಗೂ ತೆಂಗಿನಕಾಯಿಯನ್ನು ಹಳದಿಯ ಹಿಟ್ಟಿನಿಂದ ಮೂಗು, ಕಣ್ಣು, ಕಿವಿಯನ್ನು ಮಾಡಬೇಕು. ಒಡವೆಗಳನ್ನು ಏರಿಸಿ ಸೀರೆ ಉಡಿಸಿ ಅಲಂಕೃತ ಗೊಳಿಸಬೇಕು.

ನವೀನ 12 ದಾರಗಳನ್ನು ತೆಗೆದುಕೊಂಡು 12 ಗಂಟನ್ನು ಹಾಕಿ ಅದನ್ನು ಹರಿಶಿನದ ನೀರಿನಲ್ಲಿ ಹಾಕಿ ನಂತರ ದೇವಿಯ ಪಕ್ಕದಲ್ಲಿ ಇರಿಸಬೇಕು. ಈ ಹನ್ನೆರಡು ದಾರಗಳಿಗೆ ಅರಿಶಿನ ಕುಂಕುಮ ಹೂಗಳಿಂದ ಪೂಜಿಸಿ ನೈವೇದ್ಯ ಮಾಡಬೇಕು ಹಾಗೂ ಇದಕ್ಕೆ ದ್ವಾದಶ ನಾಮಾವಳಿ ಯನ್ನು ಹೇಳಿ ಪೂಜಿಸಬೇಕು. ರಮೇಶ್, ಸರ್ವಮಂಗಳೆ, ಕಮಲವಾಸಿನೆ, ಮನ್ಮಥ ಜನನಿ, ವಿಷ್ಣು ವಲ್ಲಭೆ, ಕ್ಷೀರಾಬ್ದಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ, ವರಲಕ್ಷ್ಮಿ.

ನೈವೇದ್ಯ ರೂಪದಲ್ಲಿ ಸಿಹಿಯನ್ನು ಅರ್ಪಿಸಿ ದೇವಿಯ ಮೂರ್ತಿಯನ್ನು ಅರಿಶಿನ ಕುಂಕುಮ ಹೂಗಳಿಂದ ಮತ್ತು ಅಕ್ಷತೆಗಳಿಂದ ಪೂಜೆ ಸಲ್ಲಿಸಬೇಕು. ಪೂಜಿಸಿದ ಹೆಣ್ಣುಮಕ್ಕಳು ಆ ದಾರಗಳಿಗೆ ಹೂವುಗಳನ್ನು ಕಟ್ಟಿ ಮನೆಯ ಹಿರಿಯರಿಂದ ಕಂಕಣ ಕಟ್ಟಿಕೊಳ್ಳಬೇಕು. ಹಿರಿಯರಿಗೆ ನಮಸ್ಕರಿಸಿ ದಕ್ಷಿಣೆಯೊಂದಿಗೆ ತಾವು ದಾನವನ್ನು ಕೊಡುವುದು.

ಈ ಸಮಯದಲ್ಲಿ ಈ ಶ್ಲೋಕವನ್ನು ಹೇಳುವುದು ಶ್ರೇಷ್ಟ.
ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ:
ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ
ಈ ರೀತಿಯಾಗಿ ನೀವು ವರಮಹಾಲಕ್ಷ್ಮಿ ವ್ರತವನ್ನು ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ.

ಈ ರೀತಿಮಾಡಿದಲ್ಲಿ  ಧನಾಗಮನ, ಅಷ್ಟಐಶ್ವರ್ಯ ಪ್ರಾಪ್ತಿ, ಕಂಕಣಭಾಗ್ಯ, ವ್ಯವಹಾರದಲ್ಲಿ ಜಯಲಭಿಸುವುದು.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English