ವಿಟ್ಲಅರಮನೆಯ ಜನಾರ್ದನ ವರ್ಮ ಅರಸು ನಿಧನ

7:35 PM, Sunday, August 2nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

JanardhanVarmaವಿಟ್ಲ: ವಿಟ್ಲ ಅರಮನೆಯ ಜನಾರ್ದನ ವರ್ಮ ಅರಸರು (84) ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ.

ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲದ ಆನುವಂಶಿಕ ಮೊಕ್ತೇಸರಾಗಿ ದೇವಸ್ಥಾನದ ಬ್ರಹ್ಮಕಲಶ, ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ, ವಿಟ್ಲ ಶ್ರೀ ಜಠಾಧಾರಿ ದೈವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶಗಳು ಇವರ ಕಾಲದಲ್ಲಿ ನಡೆದಿತ್ತು.

ರವಿವಾರ ಮಧ್ಯಾಹ್ನ ಗಂಟೆ 12ಕ್ಕೆ ಅರಸುಮನೆತನದ ವಿಧಿ ವಿಧಾನಗಳ ಮೂಲಕ ಬಾಕಿಮಾರು ಗದ್ದೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಸಂತಾಪ: ಅರಸು ಮನೆತನದ ಜನಾರ್ದನ ವರ್ಮ ಅರಸರ ನಿಧನಕ್ಕೆ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ವಿಟ್ಲ ಬಿಲ್ಲವ ಸಂಘ, ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ, ವಿಟ್ಲ ಹವ್ಯಕ ವಲಯ, ವಿಟ್ಲ ಜಿಎಸ್ ಬಿ ಸಮಾಜ ಟ್ರಸ್ಟ್ ಮತ್ತು ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಂಜೆ 4 ಗಂಟೆಯ ಬಳಿಕ ವಿಟ್ಲ ವರ್ತಕರ ಸಂಘದ ವತಿಯಿಂದ ವಿಟ್ಲ ಪೇಟೆ ಬಂದ್ ಮಾಡಲಾಗುವುದು ಮತ್ತು ವಿಟ್ಲ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿ ಸಂಜೆ ಗಂಟೆ 4.30ಕ್ಕೆ ಸಂತಾಪ ಸೂಚಕ ಸಭೆ ನಡೆಯಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ.ವಿ.ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English