- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗೋಲ್ಡ್ ಸ್ಮಗ್ಲರ್ ಸ್ವಪ್ನಾ ಸುರೇಶ್ ‌ ಗೆ ಮುಖ್ಯಮಂತ್ರಿ ಪಿಣರಾಯಿ ಜೊತೆ ನಂಟು, ಮಾಜಿ ಕಾರ್ಯದರ್ಶಿ ಮಾರ್ಗದರ್ಶಕ

pinarayi swapna [1]ಕೊಚ್ಚಿ : ಕೇರಳದ  ಮುಖ್ಯಮಂತ್ರಿ ಪಿಣರಾಯಿ ವಿಜಯ್‌ ಜೊತೆ ‘ಸಾಮಾನ್ಯ ಸಂಪರ್ಕ’ ಇದೆ ಎಂದು  ಬಹುಕೋಟಿ ಚಿನ್ನ ಕಳ್ಳಸಾಗಣೆ ಹಗರಣದ ರೂವಾರಿ ಸ್ವಪ್ನಾ ಸುರೇಶ್‌ ಒಪ್ಪಿಕೊಂಡಿದ್ದಾಳೆ.

ಹಗರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಕೋರ್ಟ್‌ಗೆ ಈ ವಿಷಯವನ್ನು ತಿಳಿಸಿದೆ. ಅದರೊಂದಿಗೆ, ಹಗರಣದಲ್ಲಿ ಕೇರಳದ ಮುಖ್ಯಮಂತ್ರಿ ಕೂಡ ಭಾಗಿಯಾದ್ದು, ಅವರು ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷಗಳ ಕೂಗಿಗೆ ಮತ್ತಷ್ಟು ಬಲ ಬಂದಂತಾಗಿದೆ.

ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್‌ ತನ್ನ ಮಾರ್ಗದರ್ಶಕ ಎಂದೂ ಹೇಳಿದ್ದಾಳೆ. ಕೊಚ್ಚಿ ವಿಮಾನನಿಲ್ದಾಣದಲ್ಲಿ ಜು.5ರಂದು ಸ್ವಪ್ನಾ ತಂದಿದ್ದ ರಾಜತಾಂತ್ರಿಕ ಬ್ಯಾಗೇಜ್‌ನಲ್ಲಿ 30 ಕೆ.ಜಿ. ಚಿನ್ನ ಸಿಕ್ಕಿತ್ತು.

ಅಕ್ರಮ ಚಿನ್ನ ಪತ್ತೆಯಾಗಿ ಜಪ್ತಿ ಮಾಡಿದಾಗ ಆಕೆ ತನ್ನ ನೆರವಿಗೆ ಬರುವಂತೆ ಶಿವಶಂಕರ್‌ ಅವರ ಫ್ಲ್ಯಾಟ್‌ಗೆ ಹೋಗಿ ಕೇಳಿದ್ದಳು. ಆದರೆ, ಶಿವಶಂಕರ್‌ ನೆರವು ನೀಡಿರಲಿಲ್ಲ ಎಂದು ಎನ್‌ಐಎ ತಿಳಿಸಿದೆ.

pinarayi swapna [2]