- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೊನಾ ಸೋಂಕು ಆಗಸ್ಟ್ 8 : ದಕ್ಷಿಣ ಕನ್ನಡ 194, ಸಾವು 6, ಉಡುಪಿ ಜಿಲ್ಲೆ 314, ಸಾವು 5, ಕಾಸರಗೋಡು 73

corona-virus [1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 194 ಕೊರೊನಾ ಸೋಂಕು  ಪ್ರಕರಣಗಳು, ಆರು ಸಾವು.  ಉಡುಪಿ ಜಿಲ್ಲೆಯಲ್ಲಿಂದು 314 ಮಂದಿಗೆ ಕೊರೊನಾ ಸೋಂಕು ಮತ್ತು ಐದು ಸಾವು ಶನಿವಾರ ವರದಿಯಾಗಿದೆ.

ಶನಿವಾರ ಮಂಗಳೂರಿನಲ್ಲಿ 129, ಬಂಟ್ವಾಳದಲ್ಲಿ 15, ಬೆಳ್ತಂಗಡಿಯಲ್ಲಿ 16, ಪುತ್ತೂರಿನಲ್ಲಿ 16, ಸುಳ್ಯದಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 11 ಮಂದಿಗೆ ಪಾಸಿಟಿವ್‌ ಆಗಿದೆ.  ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7075 ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಶನಿವಾರ 183 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 3487 ಕ್ಕೆ ಏರಿಕೆಯಾಗಿದೆ.

ಶನಿವಾರ ಮಂಗಳೂರಿನಲ್ಲಿ ಆರು ಮಂದಿ ಸೋಂಕಿತರು ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಈವರೆಗೆ 214 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಹಾಗೆಯೇ ಪ್ರಸ್ತುತ 3374 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ 98 ಐಎಲ್‌ಎ, 12 ಎಸ್‌ಎಆರ್‌ಐ ಪ್ರಕರಣಗಳಾಗಿದ್ದು 15 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಇನ್ನು 69 ಮಂದಿಗೆ ಸೋಂಕು ತಗುಲಿರುವ ಸಂಪರ್ಕದ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಉಡುಪಿ  ಜಿಲ್ಲೆಯಲ್ಲಿ 314 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಅತಿ ಹೆಚ್ಚು ಪಾಸಿಟಿವ್‌ ವರದಿಯಾದ ದಿನ ಇದಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,919 ಕ್ಕೆ ಏರಿಕೆಯಾಗಿದೆ. ಇಂದು ಐದು ಮಂದಿ ಸಾವನ್ನಪ್ಪಿದ್ದು ಇದುವರೆಗೆ ಒಟ್ಟು 60 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

ಮೊದಲ ಬಾರಿಗೆ ಶನಿವಾರ ಒಂದೇ ದಿನದ ಗಂಟಲುದ್ರವ ಮಾದರಿ ಸಂಗ್ರಹ 2 ಸಾವಿರ ದಾಟಿದ್ದು 2,030 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. 1,540 ವರದಿ ಇನ್ನಷ್ಟೇ ಲಭಿಸಬೇಕಿದೆ. ಹಾಗೆಯೇ ಇಂದು 314 ಮಂದಿಗೆ ಪಾಸಿಟಿವ್‌ ಆದರೆ 1,379 ಮಂದಿಗೆ ನೆಗೆಟಿವ್‌ ಆಗಿದೆ.

ಉಡುಪಿ ತಾಲೂಕಿನ 76 ವರ್ಷ, 77 ವರ್ಷ, 65 ವರ್ಷದವರು, 50 ವರ್ಷದ ಮಹಿಳೆ, ಕುಂದಾಪುರ ತಾಲೂಕಿನ 56 ವರ್ಷದವರು ಕೋವಿಡ್ ಸೋಂಕಿನಿಂದ ಮೃತಪಟ್ಟರು. ಇವರೆಲ್ಲರಿಗೂ ಬೇರೆ ಆರೋಗ್ಯದ ಸಮಸ್ಯೆಗಳಿದ್ದವು ಎಂದು ತಿಳಿದು ಬಂದಿದೆ.

ಶನಿವಾರ ಉಡುಪಿ ತಾಲೂಕಿನ 192, ಕುಂದಾಪುರ ತಾಲೂಕಿನ 87, ಕಾರ್ಕಳ ತಾಲೂಕಿನ 30, ಹೊರ ಜಿಲ್ಲೆಯ ಐವರಿಗೆ ಸೋಂಕು ದೃಢಪಟ್ಟಿದೆ. 89 ಮಂದಿ ಗುಣಮುಖರಾಗಿದ್ದು ಈ ಪೈಕಿ 59 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 30 ಮಂದಿ ಹೋಮ್‌ ಐಸೊಲೇಶನ್‌ಗೆ ಒಳಪಟ್ಟಿದ್ದರು. ಪ್ರಸ್ತುತ 1,287 ಮಂದಿ ಆಸ್ಪತ್ರೆಗಳಲ್ಲಿ, 1,225 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 73 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 70 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಹೊರರಾಜ್ಯದಿಂದ ಬಂದ ಮೂವರಿಗೆ ಸೋಂಕು ಪತ್ತೆಯಾಗಿದೆ .

33 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು 4504 ಮಂದಿ ನಿಗಾದಲ್ಲಿದ್ದಾರೆ.