- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಂಗನವಾಡಿ ಕಾರ್ಯಕರ್ತೆಯನ್ನು ನಂಬಿಸಿ 50 ಲಕ್ಷ ನಗದು ಮತ್ತು 22.75 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ ಪಕ್ಕದ ಮನೆ ಗ್ಯಾಂಗ್

benedict [1]ಮಂಗಳೂರು : ಅಂಗನವಾಡಿ ಟೀಚರನ್ನು ನಂಬಿಸಿ ಪಕ್ಕದ ಮನೆಯವರೇ ಹಂತ ಹಂತವಾಗಿ 50 ಲಕ್ಷ ನಗದು ಮತ್ತು 22.75 ಲಕ್ಷ ಮೌಲ್ಯ ದ ಚಿನ್ನಾಭರಣ ವನ್ನು ಲೂಟಿ ಮಾಡಿದ ಘಟನೆ ಮುತ್ತೂರು ಗ್ರಾಮದ ಕುಪ್ಪೆಪದವು ಎಂಬಲ್ಲಿ ನಡೆದಿದೆ.

ಪಾಂಡೆಮಿಕ್’ ಕಿರು ಚಿತ್ರ ಆಗಸ್ಟ್ 15 ರಂದು ಮೆಗಾ ಮೀಡಿಯಾ ನ್ಯೂಸ್ ಯೌಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ  [2]-ಇಲ್ಲಿ ವೀಕ್ಷಿಸಿ

ಬೆನಡಿಕ್ಟ ಲೋಬೊ, ಕುಪ್ಪೆಪದವು ಮುರ ಎಂಬಲ್ಲಿ ವಾಸವಾಗಿದ್ದರು ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಆಕೆಯ ಪಕ್ಕದ ಮನೆಯಲ್ಲಿ ಫರಿದಾ ಬೇಗಮ್, ಜೋಹರ, ಲತೀಫ್ ಎಂಬವರು ಇದ್ದರು. ಹೇಗಿದ್ದರೂ ಪಕ್ಕದ ಮನೆಯವರು ಕಷ್ಟಕ್ಕೆ ಆಗುವವರು ಎಂಬ ಮಾತಿದೆ. ಒಂದು ದಿನ ಫರಿದಾ ಬೆನಡಿಕ್ಟ ಲೋಬೊ ಅವರನ್ನು ನಂಬಿಕೆ ಬರುವಂತೆ ನಟಿಸಿ ಕಳೆದ ವರ್ಷ ಜೂನ್ ತಿಂಗಳಲ್ಲಿ ಏಕಾಏಕಿ ಬಂದು ತನಗೆ ಹಣದ ತುರ್ತು ಅಗತ್ಯವಿದ್ದು ಸಹಾಯ ಮಾಡುವಂತೆ ಕೇಳಿಕೊಂಡಿರುತ್ತಾಳೆ ಜೊತೆಗೆ ಆಕೆಯ ಗಂಡನೂ ಫೋನ್ ಮಾಡಿ ನಿಮ್ಮ ಮಗಳಂತೆ ಅವಳಿಗೆ ಸಹಾಯ ಮಾಡಿ ಎಂದಿದ್ದಾನೆ. ಈ ಕಿಲಾಡಿಗಳ ಮಾತುಗಳಿಗೆ ಮರುಳಾಗಿ ಬೆನಡಿಕ್ಟ ಲೋಬೊ, 60 ಸಾವಿರ ಕೊಟ್ಟರು. ನಂತರ ಇವರನ್ನು ಮರುಳು ಮಾಡಿ ಚಿನ್ನಾಭರಣ ಪಡೆದುಕೊಂಡರು ನಂತರ ಬೆನಡಿಕ್ಟ್ ಇವರ ಮಾತುಗಳನ್ನು ನಂಬುವಂತೆ ಮಾಡಿ ಅವರ ಸಂಬಂದಿಕರ ಪರಿಚಯದವರ ಹಣವನ್ನೆಲ್ಲ ತಂದು ಕೊಡುತ್ತಾರೆ. ಹಾಗೆ ಅವರು ಕೊಟ್ಟದ್ದು50 ಲಕ್ಷ ನಗದು ಮತ್ತು 22.75 ಮೌಲ್ಯದ ಚಿನ್ನಾಭರಣ.

ಘಟನೆ ನಡೆದದ್ದು ಹೀಗೆ ನನಗೆ ನನ್ನ ಪಕ್ಕದ ಮನೆಯ ಫರಿದಾ ಬೇಗಮ್, ಜೋಹರ, ಲತೀಫ್ ಅವಳ ಪರಿಚಯವು ಸುಮಾರು ವರ್ಷಗಳಿಂದ ಇದ್ದು, ಅವಳು ನನಗೆ ಅವಳ ಮೇಲೆ ತುಂಬಾ ನಂಬಿಕೆ ಹಾಗೂ ವಿಶ್ವಾಸ ಬರುವಂತೆ ನಟನೆ ಮಾಡಿ ಹಣ ಚಿನ್ನಾಭರಣ ಕಿತ್ತುಕೊಂಡಿದ್ದಾರೆ. ಫರಿದಾಳಿಗೆ ರಮೀಜ್ ರಾಝ ಎಂಬುವವರೊಂದಿಗೆ ವಿವಾಹವಾಗಿದ್ದು, ವಿವಾಹಕ್ಕೆ ಮುನ್ನ ಹಲವು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದುದ್ದರಿಂದ ನನಗೆ ಇಬ್ಬರ ಪರಿಚಯವು ಇರುತ್ತದೆ. ಹೀಗಿರುವಲ್ಲಿ, ಕಳೆದ ವರ್ಷ ಜೂನ್ ತಿಂಗಳಲ್ಲಿ ನನ್ನಲ್ಲಿ ಫರಿದಾಳು ಏಕಾಏಕಿ ಬಂದು ತನಗೆ ಹಣದ ತುರ್ತು ಅಗತ್ಯವಿದ್ದು ಸಹಾಯ ಮಾಡುವಂತೆ ಕೇಳಿಕೊಂಡಿರುತ್ತಾಳೆ. ನಾನು ನಿರಾಕರಿಸಿದಾಗ ರಮೀಜ್‌ರವರು ನನಗೆ ಕರೆ ಮಾಡಿ, ಫರಿದಾಳು ನಿಮ್ಮ ಮಗಳಂತೆ. ದಯವಿಟ್ಟು ಸಹಾಯ ಮಾಡಿ. ನಾನು ಎರಡು ತಿಂಗಳಿನಲ್ಲಿ ಸಂಪೂರ್ಣ ಹಣವನ್ನು ನೀಡುತ್ತೇನೆ ಎಂದು ಆಶ್ವಾಸನೆಯನ್ನು ನೀಡಿದರು. ಹಾಗೂ ಫರಿದಾಳು ಪ್ರತಿ ದಿನ ಬಂದು ನನ್ನಲ್ಲಿ ಕಾಡಿ ಬೇಡಿ ಪ್ರಾರಂಭದಲ್ಲಿ ೬೦ ಸಾವಿರವನ್ನು ಪಡಕೊಂಡಳು. ತದನಂತರ ರಮೀಜ್ ರಾಝ ಹಾಗೂ ಫರಿದಾ ಬೇಗಮ್ ನನ್ನ ಮನಸ್ಸು ಮಂಕು ಬಡಿದವಳಂತೆ ಮಾಡಿಸಿ ನನ್ನಿಂದ ಆಗಾಗ ಹಣ ಹಾಗೂ ಚಿನ್ನವನ್ನು ಕೇಳಿ ಪಡೆಯುತ್ತಿದ್ದಳು. ನಾನು ನನ್ನ ಕುಟುಂಬದವರಿಂದ, ನನ್ನ ನೆರೆಕರೆಯವರಿಂದ ಹಾಗೂ ಪರಿಚಿತರಿಂದ ಹಣ ಹಾಗೂ ಬಂಗಾರವನ್ನು ತೆಗೆದುಕೊಳ್ಳಲು ಹೇಳಿ ನನ್ನಿಂದ ಪಡೆದು ಸರಾಗವಾಗಿ ಹೋಗಿರುತ್ತಾಳೆ. ನಾನು ಯಾರ್‍ಯಾರಿಂದ ಹಣ ಹಾಗೂ ಚಿನ್ನವನ್ನು ಪಡೆದಿದ್ದೆ ಎಂದು ಈ ಕೆಳಗೆ ತಪಶೀಲಿನಲ್ಲಿ ವಿವರಿಸಿದ್ದೇನೆ. ಈ ರೀತಿಯಲ್ಲಿ ಐವತ್ತು ಲಕ್ಷ ರೂಪಾಯಿಗಳನ್ನು ನಗದಾಗಿ ಆರೋಪಿಗಳಿಗೆ ಕೊಟ್ಟಿರುತ್ತೇನೆ. 749 ಗ್ರಾಂ ಬಂಗಾರವನ್ನು ಕೊಟ್ಟಿರುತ್ತೇನೆ. ಪ್ರತಿ ಬಾರಿ ನನ್ನಿಂದ ಹಣವನ್ನು ಪಡೆಯುತ್ತಿದ್ದು, ನನ್ನ ಮಗ, ಸೊಸೆ, ಅಣ್ಣಂದಿರು, ತಮ್ಮಂದಿರು, ಕುಟುಂಬಸ್ಥರು ಹಾಗೂ ಊರವರಲ್ಲಿ ಹಣ ಹಾಗೂ ಚಿನ್ನಾಭರಣವನ್ನು ತೆಗೆದುಕೊಳ್ಳಲು ಹೇಳಿ ಫರಿದಾ, ರಮೀಜ್ ರಾಝ ನನ್ನಿಂದ ಪಡೆದಿರುತ್ತಾರೆ. ನನಗೆ ಪ್ರತಿ ಬಾರಿ ಮಾತಿನಲ್ಲಿ ಮರಳು ಮಾಡಿ ಒತ್ತಡ ಹಾಕಿ ಬ್ಲ್ಯಾಕ್‌ಮೇಲ್ ಮಾಡಿ ಹಣವನ್ನು ಪಡೆಯುತ್ತಿದ್ದು, ನನ್ನಲ್ಲಿ ಇಲ್ಲದಿದ್ದಾಗ ಬೇರೆಯವರಿಂದ ಪಡೆದು ನೀಡುವಂತೆ ಮಾಡಿರುತ್ತಾಳೆ. ಅದಲ್ಲದೆ, ಹಣವಿಲ್ಲದಿದ್ದಾಗ ಒಡವೆಗಳನ್ನು ಪಡೆದಿರುತ್ತಾಳೆ. ಹೀಗೆ ನಾನು ನನ್ನ ಹಾಗೂ ನನ್ನ ಪರಿಚಯಸ್ಥರ 749 ಗ್ರಾಂ, ದಿನಾಂಕ 18.03.2018 ರ ಆಭರಣ ಮೌಲ್ಯ (ಸುಮಾರು 22.75.496 ಲಕ್ಷ ಮೌಲ್ಯ)ದ ಚಿನ್ನಾಭರಣವನ್ನು ನನ್ನಿಂದ ಪಡೆದಿರುತ್ತಾಳೆ. ನಾನು ಹಣವನ್ನು ವಾಪಾಸು ನೀಡುವಂತೆ ಕೇಳಿದಾಗ ಫರೀದಾಳ ತಂದೆ ಲತೀಫ್, ತಾಯಿ ಜೋಹರ ಹಾಗೂ ರಮೀಜ್ ರಾಝನ ತಂದೆ ಉಬೆದುಲ್ಲ ಭರವಸೆಯನ್ನು ನೀಡುತ್ತಾರೆ. ಪ್ರತೀ ಬಾರಿಯು ಅವಳ ಗಂಡ ರಮೀಜ್ ರಾಝ, ಲತೀಫ್ ಫೋನ್ ಮಾಡಿ ಸಮಂಜಯಿಸಿ ನೀಡಿರುತ್ತಾರೆ. ಹಾಗೂ ರಮೀಜ್ ರಾಝ ಹಾಗೂ ಫರಿದಾ ಹಣ ಹಾಗೂ ಚಿನ್ನ ಕೊಡದಿದ್ದಲ್ಲಿ ನಾವು ಕೊಡುತ್ತೇವೆ ಎಂದು ಭರವಸೆ ನೀಡಿ ನನಗೆ ಮೋಸ ಮಾಡಿದ್ದಾರೆ ಎಂದು ಬೆನಡಿಕ್ಟ ಲೋಬೊ, ಹೇಳಿದ್ದಾರೆ.

benedict [3]ನಾನು ಬೆರಿಯವರಿಂದ ಚಿನ್ನಾಭರಣ, ಹಣ ಪಡೆದಿರುತ್ತೇನೆ, ಅವರೆಲ್ಲ ನನಗೆ ವಾಪಾಸು ನೀಡುವಂತೆ ಕೇಳಿಕೊಂಡಾಗ ನಾನು ಫರಿದಾ ಹಾಗೂ ರಮೀಜ್ ರಾಝ, ಜೋಹರ ಮತ್ತು ಲತೀಫ್, ಉಬೆದುಲ್ಲರವರ ಬಳಿ ಹಣ ಹಾಗೂ ಒಡವೆಗಳನ್ನು ಮರಳಿಸಬೇಕೆಂದು ಒತ್ತಾಯಿಸುತ್ತಿದ್ದೆ. ಆ ಸಮಯದಲ್ಲಿ ಫರಿದಾ ಮತ್ತು ರಮೀಜ್ ರಾಝರವರು ನನ್ನಲ್ಲಿ ಉಡಾಫೆಯಿಂದ ಮಾತನಾಡುವುದು, ನನ್ನ ಕರೆಗಳನ್ನು ಸ್ವೀಕರಿಸದೆ ಇರುವುದು ಹಾಗೂ ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಲು ಪ್ರಾರಂಭಿಸಿದರು. ಇದಲ್ಲದೆ, ಹಣವನ್ನು ಏನು ಮಾಡಿದರೂ ಹಿಂತಿರುಗಿಸುವುದಿಲ್ಲ ಎಂದು ಹೇಳಲು ಪ್ರಾರಂಭಿಸಿದರು. ಈ ಬಗ್ಗೆ ಕೆಲ ಊರಿನ ಹಿರಿಯರ ಮುಖಾಂತರ ಮಾತುಕತೆ ನಡೆಸಿ ರಾಜಿ ಪಂಚಾಯಿತಿಕೆ ಮಾಡಿದಾಗ ತಾನು ಐವತ್ತು ಲಕ್ಷ ರೂಪಾಯಿ ನಗದು ಹಣದ ಪೈಕಿ ಕೇವಲ ೧೫ ಲಕ್ಷ ರೂಪಾಯಿ ಹಣ ಮತ್ತು 749ಗ್ರಾಂ ಚಿನ್ನಾಭರಣವನ್ನು ಮರುಪಾವತಿಸುವುದಾಗಿ ತಿಳಿಸಿರುತ್ತಾರೆ. ನನಗೆ ಬೇರೆ ಉಪಾಯವಿಲ್ಲದೆ ನನಗೆ ಐವತ್ತು ಲಕ್ಷ ರೂಪಾಯಿ ನಗದು ಹಣ ಬಾಕಿ ಇದ್ದರೂ, ಆರೋಪಿಗಳು 31.10.2019 ಒಳಗೆ ಚಿನ್ನಾಭರಣಗಳನ್ನು ಮರಳಿಸುತ್ತಾರೆ ಎಂದು ತಿಳಿಸಿದ್ದರಿಂದ ನಾನು ಅವುಗಳನ್ನು ಯಾರಿಂದ ಪಡೆದೆನೋ ಅವರಿಗೆ ಮರುಕಳಿಸುವ ತರ್ತು ಇರುವುದರಿಂದ ಒತ್ತಡದಲ್ಲಿ ಆರೋಪಿಗಳು ತಯಾರಿಸಿದ ಕರಾರು ಪತ್ರಕ್ಕೆ ಸಹಿ ಮಾಡಿರುತ್ತೇನೆ. ಅದರ ಪ್ರಕಾರ ಸದ್ರಿಯವರು ೩೧.೧೦.೨೦೧೯ರಂದು ಎಲ್ಲರ ಚಿನ್ನಾಭರಣಗಳನ್ನು ಹಿಂತಿರುಗಿಸಲು ಒಪ್ಪಿರುತ್ತಾರೆ ಮತ್ತು 15 ಲಕ್ಷ ರೂಪಾಯಿಗಳನ್ನು30.06.2020 ರ ಒಳಗೆ ಮರುಪಾವತಿಸಲು ಒಪ್ಪಿರುತ್ತಾರೆ ಹಾಗೂ ನನಗೆ ವಾಮಂಜೂರು ಶಾಖೆ, ಕಾರ್ಪೊರೇಷನ್ ಬ್ಯಾಂಕ್‌ನ ಅಕೌಂಟ್ ನಂ. 5201910011457, ಚೆಕ್ ನಂಬ್ರ 565841 ದಿನಾಂಕ  04.08.2020 ರೂ.10,00,000/-,ಚೆಕ್ ನಂಬ್ರ 565842 ದಿನಾಂಕ 04.08.2020 ರೂ.15,00,000/-,ಚೆಕ್ ನಂಬ್ರ 565843 ದಿನಾಂಕ 04.08.2020 ರೂ..12,75,462/-,, ಚೆಕ್ ಕೂಡ ನೀಡಿರುತ್ತಾರೆ. ಬ್ಯಾಂಕಿಗೆ ಚೆಕ್ ಹಾಕಿದಾಗ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲ. ಚೆಕ್ ಬೌನ್ಸ್ ಆಗಿದೆ. ಆದರೆ ಇಂದಿನವರೆಗೂ ಹಣವಾಗಲಿ, ಆಭರಣವಾಗಲೀ ಹಿಂತಿರುಗಿಸಿರುವುದಿಲ್ಲ. ಈ ಬಗ್ಗೆ ನಾನು ಕೇಳಿದಾಗಲೆಲ್ಲಾ ಇವತ್ತು ನಾಳೆ ಕೊಡುತ್ತೇನೆ ಎಂದು ಹೇಳುತ್ತಾ ಇದ್ದಾರೆ. ಈ ದಿನ ಆರೋಪಿಗಳಾದ ರಮೀಜ್ ರಾಝರವರನ್ನು ಈ ಬಗ್ಗೆ ವಿಚಾರಿಸಿದಾಗ ಕೆಲವು ಗೂಂಡಾಗಳ ಸಹಾಯ ಪಡೆದು ನನ್ನ ಹಾಗೂ ನನ್ನ ಪತಿ ಉಬಾಲ್ಡ್ ಲೋಬೋಗೆ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ನಮಗೆ ಬರಬೇಕಾದ ಚಿನ್ನಾಭರಣ ಅಥವಾ ಹಣವನ್ನು ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂಬ ಜೀವ ಬೆದರಿಕೆಯನ್ನು ಕೊಟ್ಟಿರುತ್ತಾರೆ ಎಂದು ದೂರಿದ್ದಾರೆ.

ಫರಿದಾ ಬೇಗಮ್ ಹಾಗೂ ರಮೀಜ್ ರಾಝರವರು ಲತೀಫ್ ಹಾಗೂ ಜೋಹರರವರ ಸಹಕಾರದೊಂದಿಗೆ ನನ್ನನ್ನು ನಂಬಿಸಿ, ನನ್ನಿಂದ ಹಣ ಮತ್ತು ಚಿನ್ನಾಭರಣಗಳನ್ನು ಮೋಸದಿಂದ ಪಡೆದು ಈಗ ವಂಚಿಸಿದ್ದಾರೆ. ಹಾಗಾಗಿ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾಯೋಗಿಶ್ ಶೆಟ್ಟಿ ಜಪ್ಪುರವರ  ಸಹಾಯದಿಂದ  ಪೊಲೀಸ್ ಆಯುಕ್ತರಾದ ಶ್ರೀಯುತ ವಿಕಾಸ್ ಕುಮಾರ್‌ರವರನ್ನು ಭೇಟಿ ಮಾಡಿ ದೂರು ಸಲ್ಲಿಸಿರುವದಾಗಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ.