ಮಂಗಳಾದೇವಿ ದೇವಸ್ಥಾನದಲ್ಲಿ ‘ಪಾಂಡೆಮಿಕ್’ ಕಿರುಚಿತ್ರ ಬಿಡುಗಡೆ

2:47 PM, Saturday, August 15th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

pandemic filmಮಂಗಳೂರು : ಇತಿಹಾಸ ಪ್ರಸಿದ್ದ ಮಹತೋಬಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಮೆಗಾಮೀಡಿಯಾ ಎಂಟರ್‌ಟೈನ್ ಮೆಂಟ್ ಇದರ ನಿರ್ಮಾಣದಲ್ಲಿ ಸಿದ್ದವಾದ ಕಿರುಚಿತ್ರ `ಪಾಂಡೆಮಿಕ್’ ಅನ್ನು ಮಂಗಳಾದೇವಿ ದೇವಸ್ಥಾನದ ಅಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಬಿಡುಗಡೆ ಮಾಡಿದರು.

ಉತ್ತಮ ಸಂದೇಶವಿರುವ ಚಿತ್ರವನ್ನು ಜನ ಇಷ್ಟ ಪಡುತ್ತಾರೆ. ಕೊರೋನದಂತಹ ಮಹಾಮಾರಿಯಿಂದ ಜನ ನಲುಗಿ ಹೋಗಿದ್ದಾರೆ, ಜನ ಅದಾಯವಿಲ್ಲದೆ ಸಂಕಷ್ಟಕ್ಕ ಕ್ಕೊಳಗಾಗಿದ್ದಾರೆ. ಮಕ್ಕಳವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ. ಇಂತಹ ಸಂದೇಶವಿರುವ ಚಿತ್ರಗಳು ಇನ್ನು ಬಂದಿಲ್ಲ, ನಿಮ್ಮ ಚಿತ್ರ ಯಶಸ್ವಿಯಾಗಲಿ ಎಂದು ರಮಾನಾಥ ಹೆಗ್ಡೆ ಹಾರೈಸಿದರು.

ಈ ಸಂದರ್ಭದಲ್ಲಿ ತುಳುನಾಡು ರಕ್ಷಣಾವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ, ರಂಜಿತ್ ಗುಜರನ್ ಮಂಗಳಾದೇವಿ, ಸುಭಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಈ ಕಿರುಚಿತ್ರವು ಮೆಗಾಮೀಡಿಯಾ ಎಂಟರ್‌ಟೈನ್ ಮೆಂಟ್ ಸಂಸ್ಥೆಯ ಚಿತ್ರ. ಚಿತ್ರದ ಕಥೆ, ಸಂಭಾಷಣೆ ಮತ್ತು ನಿರ್ದೇಶನ ಮೆಗಾ ಮೀಡಿಯಾ ನ್ಯೂಸ್ ಸಂಪಾದಕ ಶಿವಪ್ರಸಾದ್ ತೌಡುಗೋಳಿ ಅವರದ್ದು, ಸಂಗೀತ, ಸಂಕಲನ ಮತ್ತು ದೃಶ್ಯ ಸಂಯೋಜನೆ  ಅವಿನಾಶ್ ನಾಯ್ಕ್ ನಚ್ಚ, ಇಂಗ್ಲೀಷ್ ಭಾಷಾಂತರ ಸರಿಕಾ ಕೇಶವ್ ಅತ್ತಾವರ್, ನಟರಾಗಿ, ಸಹರ್ಷ್ ಎಸ್, ದೈವಿಕ್ ಕುಮಾರ್, ಆಶು, ಆಕಾಶ್, ಪ್ರಕೃತಿ, ಪ್ರತೀಕ್, ಕರಣ್, ಯಶ್ ಮುಂತಾದವರು ನಟಿಸಿದ್ದಾರೆ.

pandemic filmಸರಿತಾ ಶಿವಪ್ರಸಾದ್, ಜೊವಿಟಾಪ್ರಕಾಶ್ ವಸ್ತ್ರಾಂಕಾರ ಮಾಡಿದ್ದಾರೆ, ಚಿತ್ರ ಮಂಗಳೂರಿನ ಅತ್ತಾವರ ಬಾಬುಗುಡ್ಡ ಪ್ರದೇಶದಲ್ಲಿ ಚಿತ್ರೀಕರಣಮಾಡಲಾಗಿದೆ.

ಹರಿಶ್ ಕುಮಾರ್ ಪುರೋಹಿತ್, ಸರಿಕಾ ಕೇಶವ್ ಅತ್ತಾವರ, ಸರೋಜ್ ಕುಮಾರ್, ಜೊವಿಟಾಪ್ರಕಾಶ್, ವಿಶ್ವನಾಥ್, ಅಮೃತಾ, ಮಿತಾ, ಪ್ರಶಾಂತ್, ಬಸಂತ್ ಮೊದಲಾದವರು ಸಹಕರಿಸಿದ್ದಾರೆ.

ನಿರ್ಮಾಣ ಮೆಗಾಮೀಡಿಯಾ ಎಂಟರ್‌ಟೈನ್ ಮೆಂಟ್, ನಿರ್ಮಾಪಕರು ಸರಿತಾ ಶಿವಪ್ರಸಾದ್ ಮತ್ತು ಶಿವಪ್ರಸಾದ್ ತೌಡುಗೋಳಿ.

ಚಿತ್ರ ಆಗಸ್ಟ್ 15 ಸಂಜೆ 6.10 ಕ್ಕೆ ಮೆಗಾ ಮೀಡಿಯಾ ನ್ಯೂಸ್ ನ ಯುಟ್ಯೂಬ್ ಚಾನಲ್‌ನಲ್ಲಿ ಪ್ರಸಾರಗೊಳ್ಳಲಿದೆ. ವೀಕ್ಷಕರು ಈ https://www.youtube.com/c/MegaMediaNewsMangalore ಲಿಂಕನ್ನು ಬಳಸಿ ಚಿತ್ರ ವೀಕ್ಷಿಸಬಹುದು. ದಯಮಾಡಿ ಸಬ್ ಸ್ಕ್ರೈಬ್ ಮಾಡಿ ಅನಂತರ ಚಿತ್ರ ವೀಕ್ಷಿಸಿ, ನಂತರ ಕಮೆಂಟ್ (ಅಭಿಪ್ರಾಯ ತಿಳಿಸಲು) ಮತ್ತು ಹೆಚ್ಚು ಜನರಿಗೆ ತಲುಪಲು ಲಿಂಕ್ ಗಳನ್ನು ಶೇರ್ ಮಾಡಲು ವಿನಂತಿಸಲಾಗಿದೆ.

ಪೂರ್ತಿ ಫಿಲ್ಮ್ ನೋಡಿ

pandemic film

pandemic film

pandemic film

pandemic film

 

1 ಪ್ರತಿಕ್ರಿಯೆ - ಶೀರ್ಷಿಕೆ - ಮಂಗಳಾದೇವಿ ದೇವಸ್ಥಾನದಲ್ಲಿ ‘ಪಾಂಡೆಮಿಕ್’ ಕಿರುಚಿತ್ರ ಬಿಡುಗಡೆ

  1. Nemu kottary, Gujjarakere%20mangaladevi

    Historical Lake named Gujjarakere

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English