- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕಿ ಅನಿತಾ ರವಿಶಂಕರ್ ಲೋಕಾಯುಕ್ತ ಬಲೆಗೆ

Mangalore University Professor [1]ಮಂಗಳೂರು :ಮಂಗಳೂರು ವಿಶ್ವ ವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಅನಿತಾ ರವಿಶಂಕರ್ ರವರನ್ನು ಲಂಚ ಸ್ವೀಕಾರದ ಹಿನ್ನಲೆಯಲ್ಲಿ ಮಂಗಳವಾರ ಬಂಧಿಸಿದ್ದಾರೆ. ಪ್ರಾಧ್ಯಾಪಕಿ ಅನಿತಾ ರವಿಶಂಕರ್ ಪಿಎಚ್‌ಡಿ ಆಕಾಂಕ್ಷಿ ವಿದ್ಯಾರ್ಥಿಗಳಿಂದ ತಲಾ 5 ಸಾವಿರ ರೂಪಾಯಿಗಳನ್ನು ಸ್ವೀಕರಿಸುತ್ತಿದ್ದರೆನ್ನಲಾಗಿದೆ.

ಈ ಹಿನ್ನಲೆಯಲ್ಲಿ ಪಿಎಚ್‌ಡಿ ಆಕಾಂಕ್ಷಿ ಪ್ರೇಮ ಡಿಸೋಜ ಎಂಬವರು ಪಿಎಚ್‌ಡಿಗಾಗಿ ವಿದ್ಯಾರ್ಥಿಗಳಿಂದ ಲಂಚ ಸ್ವೀಕರಿಸುವ ಉಪನ್ಯಾಸಕರಿಗೆ ಸರಿಯಾಗಿ ಪಾಠ ಕಲಿಸಬೇಕೆಂದು ಈ ಬಗ್ಗೆ
ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರೇಮ ಅವರಿಗೆ ಧ್ವನಿ ರೆಕಾರ್ಡ್‌ರ್ ಮತ್ತು ನೋಟಿನ ಕಂತೆಗೆ ರಾಸಾಯನಿಕ ಬೆರೆಸಿ ನೀಡಿದ್ದರು. ಇದರಿಂದ ಉಪನ್ಯಾಸಕಿ ಮಂಗಳವಾರ ಲಂಚ ಸ್ವೀಕರಿಸುವಾಗ ದಾಖಲೆಗಳ ಸಮೇತ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ದಾಖಲೆಗಳ ಸಮೇತ ವಶಕ್ಕೆ ತೆಗೆದುಕೊಂಡ ಲೋಕಾಯುಕ್ತ ಪೊಲೀಸರು ಇವರನ್ನು ಸೆಶನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ದಾಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಮೋಹನ್‌ದಾಸ್ ಪೆ, ಡಿವೈಎಸ್ಪಿ ವಿಠಲದಾಸ ಪೆ, ಇನ್‌ಸ್ಪೆಕ್ಟರ್ ಉಮೇಶ್ ಶೇಟ್, ದಿಲೀಪ್ ಕುಮಾರ್, ಸಿಬ್ಬಂದಿ ಸುದರ್ಶನ್, ಶರತ್, ಬಾಸ್ಕರ್, ಶಿವಪ್ರಸಾದ್, ಸಲೀಂ, ಹರಿಶ್ಚಂದ್ರ, ಜಾರ್ಜ್, ಪ್ರಮೋದ್, ಮಧು ಮತ್ತು ಸುಧಾಕರ್ ಭಾಗವಹಿಸಿದ್ದರು.