ಆಗಸ್ಟ್ 21ರಂದು ಗೌರಿ ಹಬ್ಬ, ಶನಿವಾರ ಗಣೇಶೋತ್ಸವ; ಆದರೆ ಸಂಭ್ರಮವಿಲ್ಲ

5:37 PM, Friday, August 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ganeshaotsava ಮಂಗಳೂರು  :  ನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಗಣೇಶೋತ್ಸವದ ತಯಾರಿ ಸಂಭ್ರಮವಿಲ್ಲ. ತರಕಾರಿ, ಕಬ್ಬು ಹೂ ಹಣ್ಣುಗಳ ಬೇಡಿಕೆಗಳು ಕಡಿಮೆಯಾಗಿದೆ.

ಮಂಗಳೂರು ನೆಹರೂ ಮೈದಾನದಲ್ಲಿ ಹಿಂದೂ ಯುವ ಸೇನೆ ಏಳು ದಿನದ ಕಾಲ ಆಚರಿಸುತ್ತಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಅನುಮತಿ ಇಲ್ಲದೆ ಇರುವುದರಿಂದ ಸರಳವಾಗಿ ಬಾಳಂಭಟ್ಟ ಹಾಲಿನಲ್ಲಿ ಕೇವಲ ಒಂದೇ ದಿನ ಆಚರಿಸಲು ನಿರ್ಧರಿಸಲಾಗಿದೆ.

ಅದೇ ರೀತಿ ಮಂಗಳಾದೇವಿ ಗಣೇಶೋತ್ಸವ ಸಮಿತಿ , ಕೆಏಸ್ಆರ್ಟಿಸಿ, ಪೊಲೀಸ್ ಲೈನ್,  ಸಿದ್ಧಿವಿನಾಯಕ ಪ್ರತಿಷ್ಠಾನಗಳಲ್ಲೂ ಸರಳವಾಗಿ ಒಂದೇ ದಿನ ಆಚರಿಸಲಾಗುತ್ತಿದೆ. ಸಂಘನಿಕೇತನದಲ್ಲಿ ಸರಳವಾಗಿ ಐದು ದಿನಗಳ ಕಾಲ ಗಣೇಶ ನ ಆರಾಧನೆ ನಡೆಯಲಿದೆ.

ಸರಕಾರದ ಮಾರ್ಗಸೂಚಿಯಂತೆ  ಕೊರೊನಾ ವೈರಸ್‌ ಸೋಂಕಿನ ಕಾರಣದಿಂದ ಅದ್ದೂರಿ ಗಣೇಶೋತ್ಸವದ ಬದಲಾಗಿ ಸರಳವಾಗಿ  ನಡೆಯಲಿದೆ.

ganeshaotsava ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮಾರ್ಗದರ್ಶನ ನೀಡಲಾಗಿದೆ. ನಿಯಮಗಳನ್ನು ಸಾರ್ವಜನಿಕರು ಹಾಗೂ ಮಾರಾಟಗಾರರು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಲ್ಲಂಘಿಸುವವರ ವಿರುದ್ಧ ಪರಿಸರ (ಸಂರಕ್ಷಣಾ) ಅಧಿನಿಯಮ 1986 ರಡಿ ಹಾಗೂ ಜಲ ಕಾಯ್ದೆ 1974 ಅಡಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕ ಗಣೇಶ ಉತ್ಸವ ಹಾಗೂ ಮೆರವಣಿಗೆಯನ್ನು ರದ್ದು ಮಾಡಲಾಗಿದೆ.  ಕೋವಿಡ್ ಸೋಂಕು ಹರಡುವ ಭೀತಿಯ ಕಾರಣ ಹೆಚ್ಚು ಜನರು ಸೇರುವಂತಿಲ್ಲ ಎಂದು ಸರ್ಕಾರ ಹೇಳಿದೆ.

ಆಗಸ್ಟ್ 21ರಂದು ಗೌರಿ ಹಬ್ಬವಿದ್ದು, ಆಗಸ್ಟ್ 22ರ ಶನಿವಾರ ಗಣೇಶ ಚತುರ್ಥಿ ಇದೆ.

* ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪನೆ, ಮೆರವಣಿಯನ್ನು ನಿಷೇಧಿಸಲಾಗಿದೆ.

* ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ತಮ್ಮ ಮನೆಯಲ್ಲಿಯೇ ಆಚರಿಸುವುದು.

* ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ(ರಸ್ತೆ, ಗಲ್ಲಿ, ಓಣಿ, ಮೈದಾನ ಇತ್ಯಾದಿ) ಸ್ಥಳಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವಂತಿಲ್ಲ.

* ಯಾವುದೇ ಕಾರಣಕ್ಕೂ ನದಿ, ಕೆರೆ, ಕೊಳ, ಬಾವಿ ಮತ್ತು ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡುವಂತಿಲ್ಲ.

* ಗಣೇಶ ಮೂರ್ತಿಯನ್ನು ವಿಸರ್ಜಿಸುವಾಗ ಯಾವುದೇ ಕಾರಣಕ್ಕಾಗಿ ಮೆರವಣಿಗೆ ಮಾಡುವಂತಿಲ್ಲ. ಮೆರವಣಿಗೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

* ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯನ್ನು ಮನೆ ಆವರಣದಲ್ಲಿಯೇ ವಿಸರ್ಜನೆ ಮಾಡಬೇಕು.

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

ganeshaotsava

prashanth-bhat

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English