- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಲು ಮಧ್ಯವರ್ತಿಯಾಗಿದ್ದ ಮಹಿಳೆಯ ಬಂಧನ

Sunitha [1]ಕಾಸರಗೋಡು : ಮಹಿಳೆ ಯೊಬ್ಬಳು  ಮಧ್ಯವರ್ತಿ ಯಾಗಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಲು ಯುವಕರಿಬ್ಬರಿಗೆ ಸಹಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಕುಂಬ್ಳೆ ಪೊಲೀಸರು ಬಂಧಿಸಿದ್ದಾರೆ.

ಕಟ್ಟದಂಗಡಿ ಪೆರಿಯಡ್ಕದ ಕಾಲನಿಯ ಸುನಿತಾ (30) ಬಂಧಿತಳು.

ಘಟನೆ ಕುಂಬಳೆಯಿಂದ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದ್ದು, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕುಂಬಳೆಯಲ್ಲಿ ಉತ್ಸವ ನೋಡಲೆಂದು 2018 ರ ಡಿಸಂಬರ್ 18 ರಂದು ರಾತ್ರಿ ಬಾಲಕಿಯನ್ನು ಕರೆದೊಯ್ದು ನಿರ್ಜನ ಸ್ಥಳದಲ್ಲಿ ಕೃತ್ಯ ನಡೆಸಿದ್ದು, ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ರಾತ್ರಿ ಓರ್ವ ಆರೋಪಿಯ ಬೈಕ್ ನಲ್ಲಿ ಸುನಿತಾಳು ಬಾಲಕಿಯನ್ನು ಕರೆದುಕೊಂಡು ಹೋಗಿದ್ದು, ಕುಂಬಳೆ ಸರಕಾರಿ ಆಸ್ಪತ್ರೆ ತಲಪಿದಾಗ ಇನ್ನೋರ್ವ ಆರೋಪಿ ಕಾರಿನಲ್ಲಿ ಬಂದಿದ್ದು, ಬಳಿಕ ಯುವತಿ ಸೇರಿದಂತೆ ಮೂವರು ಬಾಲಕಿಯನ್ನು ಬಲವಂತವಾಗಿ ಕಾರಿಗೆ ಹತ್ತಿಸಿ ಕಾಡಿಗೆ ಕರೆದೊಯ್ದು ಇಬ್ಬರು ಕೃತ್ಯ ನಡೆಸಿರುವುದಾಗಿ ಪೊಲೀಸರಿಗೆ ಲಭಿಸಿದ ದೂರನಲ್ಲಿ ತಿಳಿಸಲಾಗಿದೆ.

ಕಳೆದ ತಿಂಗಳು ಈ ಬಾಲಕಿಗೆ ಬದಿಯಡ್ಕ ನಿವಾಸಿಯೋರ್ವ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ತನಿಖೆ ನಡೆಸಿದ್ದು, ಈ ಸಂದರ್ಭದಲ್ಲಿ ಕುಂಬಳೆಯಲ್ಲೂ ದೌರ್ಜನ್ಯಕ್ಕೆ ಒಳಗಾಗಿರುವ ಬೆಚ್ಚಿ ಬೀಳುವ ಅಂಶವು ಬೆಳಕಿಗೆ ಬಂದಿದೆ. ಇದೀಗ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.