- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಲೇಡಿಸ್ ಪಿಜಿಗೆ ನುಗ್ಗಿ ಒಳವಸ್ತ್ರಗಳನ್ನು ಕದಿಯುತ್ತಿದ್ದವನಿಗೆ ಥಳಿಸಿದ ಯುವತಿಯರು

ladise PG [1]ಮಂಗಳೂರು: ಶರವು ದೇವಸ್ಥಾನದ ಬಳಿ ಇರುವ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯರ ಒಳವಸ್ತ್ರಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಹಿಡಿದು ಥಳಿಸಿರುವ ಘಟನೆ  ನಡೆದಿದೆ.

ಮಹಿಳಾ ಪಿಜಿಗೆ ರಾತ್ರಿ ವೇಳೆ ನುಗ್ಗಿದ ಕಾಮುಕನೊಬ್ಬ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ. ಈಗಾಗಲೇ ಅನೇಕ ಬಾರಿ ಈ ರೀತಿಯ ಕೆಲಸ ಮಾಡಿದ್ದ ಈತನಿಗೆ ಬುದ್ದಿ ಕಲಿಸಬೇಕು ಎಂದು ಅಲ್ಲಿದ್ದ ಕೆಲಸಗಾರರ ಜೊತೆ ಸೇರಿ ಯುವತಿಯರು ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ.

ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ