ಕಾಪುವಿನಲ್ಲಿ ಮೀನುಗಾರರ ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನು, ಮತ್ಸ್ಯಪ್ರಿಯರಿಗೆ ಫುಲ್ ಖುಷಿ

10:57 PM, Saturday, August 29th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

fish ಕಾಪು : ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನುಗಳನ್ನು ದಡಕ್ಕೆ ಎಳೆಯಲು ಮೀನುಗಾರರು ಬಹಳಷ್ಟು ಶ್ರಮಪಡುತ್ತಿದ್ದರು . ಭಾರೀ ಪ್ರಮಾಣದ ಮೀನಿನಿಂದಾಗಿ ಕೈರಂಪಣಿಯ ಬಲೆ ಹರಿದು, ಮೀನು ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ತೀರದಲ್ಲಿ ಮೀನುಗಳು ಮೇಲಕ್ಕೆ ಚಿಮ್ಮುತ್ತಿ ರುವ ದೃಶ್ಯಗಳು ಕಂಡುಬರುತ್ತಿದ್ದವು ಇದು ನಡೆದದ್ದು ಶುಕ್ರವಾರ ಕಟಪಾಡಿ ಮಟ್ಟು ಕಡಲ ತೀರದಲ್ಲಿ.

ಕಳೆದ ಎರಡು ದಿನಗಳಿಂದ ಮಟ್ಟು ಕಡಲತೀರದಲ್ಲಿ ರಾಶಿರಾಶಿಯಾಗಿ ಮೀನುಗಳು ಕಂಡುಬರುತ್ತಿದ್ದು. ಕೈರಂಪಣಿ ಬಲೆಗೆ  ಸಿಕ್ಕಿಬಿದ್ದ ಭಾರೀ ಪ್ರಮಾಣದ ಮೀನುಗಳನ್ನು ತೀರಕ್ಕೆ ಎಳೆದು ತರಲು ಮೀನುಗಾರರು ಹರ ಸಾಹಸಪಟ್ಟರು.

ಇಲ್ಲಿ ಹೆಜಮಾಡಿಯ ಮೀನುಗಾರರ ತಂಡ ಕೈರಂಪಣಿ ಬಲೆಯನ್ನು ಹಾಕಿದ್ದರು. ಬಲೆಗೆ ಬಿದ್ದ ಟನ್‌ಗಟ್ಟಲೆ ಮೀನುಗಳನ್ನು ದಡಕ್ಕೆ ಎಳೆಯಲು  ಸಂದರ್ಭ ಕೈರಂಪಣಿಯ ಬಲೆ ಹರಿದು, ಮೀನು ಚೆಲ್ಲಾಪಿಲ್ಲಿಯಾಯಿತ್ತೆನ್ನಲಾಗಿದೆ. ಹೀಗೆ ಬಲೆಯಿಂದ ಹೊರಗೆ ಬಂದು ಒದ್ದಾಡುತ್ತಿದ್ದ ಮೀನುಗಳು ಸಾರ್ವಜನಿಕರ ಪಾಲಾದವು. ಹೀಗೆ ತೀರದಲ್ಲಿ ಮೀನಿಾಗಿ ಜನಸ್ತೋಮವೇ ನೆರೆದಿತ್ತು.

ಬಂಗುಡೆ, ಬೊಳಿಂಜಿರ್, ಕಲ್ಲೂರು, ಬೂತಾಯಿ, ಕೊಂತಿ, ಎಟ್ಟಿಯಂತಹ ಮೀನುಗಳು ಭಾರೀ ಪ್ರಮಾಣದಲ್ಲಿ ಬಲೆಗೆ ಬಿದ್ದಿವೆ. ಒಟ್ಟಾರೆಯಾಗಿ ಇಲ್ಲಿ ಮೀನುಗಾರರ ಬಲೆಗೆ ಸುಮಾರು ಐದು ಟನ್‌ಗಳಷ್ಟು ಮೀನು ಸಿಕ್ಕಿದೆ. ಹೀಗಾಗಿ ಈ ಪರಿಸರದ ಮತ್ಸ್ಯಪ್ರಿಯರಂತೂ ಫುಲ್ ಖುಷಿಯಾಗಿದ್ದರು.

fish

Dharmasthala-Deepothsava  

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English