- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೊನಾ ಸೋಂಕಿತನಿಗೆ ಯುನಿಟಿ ಆಸ್ಪತ್ರೆ ನೀಡಿದ ಬಿಲ್ 2.97,518 ರೂ‌. ಆದರೆ ಪಿಪಿಇ ಕಿಟ್ ಉಚಿತ !

ppeKit [1]ಮಂಗಳೂರು: ನಗರದ ಯುನಿಟಿ ಆಸ್ಪತ್ರೆ ಕೊರೊನಾ ಸೋಂಕಿತರೋರ್ವರಿಗೆ  11 ದಿನಗಳ ಕಾಲ ಚಿಕಿತ್ಸೆ ನೀಡಿ 2.97,518 ರೂ‌. ಬಿಲ್ ನೀಡಿದೆ. ಆದರೆ ಪಿಪಿಇ ಕಿಟ್ ಉಚಿತ  ಎಂದು 45,110 ರೂ‌. ರಿಯಾಯಿತಿ ನೀಡಿದ ಬಿಲ್ ಹಾಕಿ ಮತ್ತೆ ವಿನಾಯಿತಿ ಎಂದು ತೋರಿಸಿದೆ.

ಸರ್ಕಾರದ ನಿಯಮವನ್ನೂ ಮೀರಿ ಖಾಸಗಿ ಆಸ್ಪತ್ರೆ ಗಳು ಸೋಂಕಿತರಿಂದ ವಸೂಲಿ ಮಾಡಲು ಇದು ಸುವರ್ಣಾವಕಾಶ ಎಂಬಂತೆ ವರ್ತಿಸಲಾರಂಭಿಸಿದೆ, ದೇಶದಲ್ಲಿ ಸಾಂಕ್ರಾಮಿಕ ರೋಗಗಳು ಬಂದಾಗ ಉಚಿತ ಚಿಕಿತ್ಸೆ ನೀಡಿ ಸರಕಾರದೊಂದಿಗೆ ಕೈಜೋಡಿಸಬೇಕಾದ ಖಾಸಗಿ ಆಸ್ಪತ್ರೆಗಳು, ಇದೆ ಸದಾವಕಾಶ ಎಂದು ರೋಗಿಗಳಿಂದ ದೋಚಲು ಆರಂಭಿಸಿದೆ.

ಸರ್ಕಾರದ ನಿಯಮದಂತೆ ಕೊರೊನಾ ಸೋಂಕಿತರಿಗೆ ದಿನವೊಂದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 12 ಸಾವಿರ ರೂ. ನಿಗದಿ ಪಡಿಸಲಾಗಿದೆ. ಆದರೆ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ 11 ದಿನಗಳ ಕಾಲ ದಾಖಲಾದ ಸೋಂಕಿತರೋರ್ವರಿಗೆ 2.97,518 ರೂ‌. ಬಿಲ್ ನೀಡಿದೆ.

ಯಾವುದೇ ಮದ್ದಿಲ್ಲದೆ ಇರುವ ರೋಗಕ್ಕೆ ಸರಕಾರ ಅಷ್ಟೊಂದು ಹಣ ನಿಗದಿ ಮಾಡಿರುವುದರ ಹಿಂದೆಯೂ ಕಮಿಷನ್ ಲಾಬಿ ಇದೆ ಎನ್ನಲಾಗುತ್ತಿದೆ.

ಕೊರೊನಾ ಸೋಂಕಿತರೋರ್ವರು ನಗರದ ಯುನಿಟಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ 11 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದರು. ಇವರಿಗೆ ಸಣ್ಣ ಮಟ್ಟಿನ ನ್ಯುಮೋನಿಯಾ ಹಾಗೂ ರಕ್ತದಲ್ಲಿ ಆಮ್ಲಜನಕದ ಪ್ರಮಾಣ 90ಕ್ಕಿಂತ ಕಡಿಮೆಯಾಗಿತ್ತು. ಆದರೆ ಸರ್ಕಾರಿ ನಿಯಮದಂತೆ ಪ್ರತ್ಯೇಕ ಕೊಠಡಿಗೆ ದಿನಕ್ಕೆ 12 ಸಾವಿರ ರೂ. ನಂತೆ 11 ದಿನಕ್ಕೆ 1.32 ಲಕ್ಷ ರೂ‌. ಆಗಬೇಕಿತ್ತು. ಆದರೆ ಯುನಿಟಿ ಆಸ್ಪತ್ರೆಯಲ್ಲಿ ವಾರ್ಡ್ ಸರ್ವೀಸ್ ಎಂದು 44 ಸಾವಿರ ರೂ., ಲ್ಯಾಬ್ ಚಾರ್ಜ್ 16 ಸಾವಿರ ರೂ., ಎಕ್ಸ್ ರೇ 2.50 ಸಾವಿರ ರೂ., 1.02 ಲಕ್ಷ ರೂ. ದರ ವಿಧಿಸಲಾಗಿದೆ.

ಆಸ್ಪತ್ರೆಯ ಆಡಳಿತ ಮಂಡಳಿ  ಆಸ್ಪತ್ರೆ ಬಿಲ್ ಅಷ್ಟು ವಿಧಿಸಿ, ಉಚಿತ ಪಿಪಿಇ ಕಿಟ್ ದರ ಎಂದು 45,110 ರೂ‌. ರಿಯಾಯಿತಿ ನೀಡಿದೆ‌. ಕೊರೊನಾ ಸೋಂಕಿತರಿಗಾಗಿಯೇ ಪ್ಯಾಕೇಜ್ ಇರುವಾಗ  ಸರ್ಕಾರದ ಆದೇಶವಿದ್ದರೂ ಈ ರೀತಿಯಲ್ಲಿ ದುಬಾರಿ ಬಿಲ್  ವಿಧಿಸಿರುವುದರ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದು ಸಂಶಯ ಗೊಂಡಿದೆ ಎಂದು ಚಿಕಿತ್ಸೆ ಪಡೆದ ರೋಗಿಯ ಸಂಭಂದಿಕರು ಹೇಳಿದ್ದಾರೆ.

unity [2]