- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು : ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.

Teachers Day [1]ಮಂಗಳೂರು : ದಕ್ಷಿಣ ಕನ್ನಡ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ. ಜಿಲ್ಲಾ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಮಂಗಳೂರು ಉತ್ತರ ವಲಯ ಶಿಕ್ಷಕರ ದಿನಾಚರಣೆ ಸಮಿತಿ ಮತ್ತು ಶಿಕ್ಷಕರ ಕಲ್ಯಾಣ ನಿಧಿ,ಬೆಂಗಳೂರು  ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನೋತ್ಸವ ಹಾಗೂ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಉರ್ವ ಕೆನರಾ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು.

ಮಕ್ಕಳಿಗೆ ಶಿಕ್ಷಕರೇ ಹೀರೋಗಳು, ಪ್ರತಿಯೋರ್ವರ ಯಶಸ್ಸಿನ ಹಿಂದೆ ಗುರುಗಳ ಪಾತ್ರ ಇದ್ದೇ ಇರುತ್ತದೆ. ಹಾಗಾಗಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಭಿಪ್ರಾಯಿಸಿದ್ದಾರೆ.

ಅವರು ಇಂದು  ನಡೆದ  ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತಮ ಶಿಕ್ಷಕರನ್ನು ಹೊಂದಿರುವ ಶಾಲೆ ಆ ಶಾಲೆ ಉತ್ತಮ ಶಾಲೆ ಎಂದು ಪರಿಗಣಿಸಲ್ಪಡುತ್ತದೆ.ಅದರ ಬದಲಾಗಿ ಶಾಲಾ ಕಟ್ಟಡದಿಂದ ಉತ್ತಮ ಶಾಲೆ ಎಂದು ಹೇಲಾಗದು ಎಂದು ಅವರು ಹೇಳಿದರು. ಶಾಸಕ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮ ದಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಅಳಕೆಮಜಲು ದ.ಕ.ಜಿ.ಪಂ.ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ಕೆ. ಇಸ್ಮಾಲಿ, ಬೆಳ್ತಂಗಡಿ ತಾಲೂಕಿನ ರಕ್ತೇಶ್ವರಿ ಪದವು ದ.ಕ.ಜಿ.ಪಂ.ಕಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಚೈತ್ರಪ್ರಭಾ ಶ್ರೀಶಾಂ, ಮಂಗಳೂರು ಉತ್ತರವಲಯ ತಣ್ಣೀರು ಬಾವಿಯ ಸ.ಕಿ.ಪ್ರಾ.ಶಾಲೆಯ ಸಹಶಿಕ್ಷಕಿ ಹರಿಣಾಕ್ಷಿ, ಮಂಗಳೂರು ದಕ್ಷಿಣ ವಲಯದ ಮಾಲಾರ್ ದ.ಕ.ಜಿ.ಪಂ.ಹಿ.ಶಾಲೆಯ ರಾಧಾಕೃಷ್ಣ ರಾವ್, ಮೂಡುಬಿದಿರೆ ವಲಯದ ಕಡಂದಲೆ ಸ.ಕಿ.ಪ್ರಾ.ಶಾಲೆಯ ಅನಂತ ಪದ್ಮನಾಭ ಜೆನ್ನಿ, ಪುತ್ತೂರು ತಾಲೂಕಿನ ಕುಂಡಾಜೆ ಸ.ಕಿ.ಪ್ರಾ. ಶಾಲೆಯ ಸಹ ಶಿಕ್ಷಕ ಪಿ.ಎಸ್. ನಾರಾಯಣ, ಸುಳ್ಯ ತಾಲೂಕಿನ ಬಾನಡ್ಕ ಸ.ಕಿ.ಪ್ರಾ. ಶಾಲೆ ಸಹ ಶಿಕ್ಷಕಿ ಜಾನಕಿ ಅವರಿೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಾಥಮಿಕ ಶಾಲಾ ವಿಭಾಗ (ಹಿರಿಯ)ದಲ್ಲಿ ಬಂಟ್ವಾಳ ತಾಲೂಕು ಮಜಿ ದ.ಕ.ಜಿ.ಪಂ.ಸ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಸಂಗೀತಾ ಶರ್ಮಾ, ಬೆಳ್ತಂಗಡಿ ತಾಲೂಕು ಕುಂಜತ್ತೋಡಿ ಸ.ಉ.ಪ್ರಾ. ಶಾಲೆಯ ಸಹ ಶಿಕ್ಷಕಿ ಸಬೀನಾ, ಮಂಗಳೂರು ಉತ್ತರ ವಲಯ ಗಾಂಧೀನಗರ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕಿ ಇಂದ್ರಾವತಿ ಎನ್., ಉಳ್ಳಾಲ ಕೋಟೆಪುರ ಟಿಪ್ಪು ಸುಲ್ತಾನ್ ಹಿ.ಪ್ರಾ.ಶಾಲೆಯ ಎಂ.ಎಚ್. ಮಲಾರ್, ಮೂಡುಬಿದಿರೆ ವಲಯದ ಮಾಂಟ್ರಾಡಿ ಸ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ಜಾನೆಟ್ ಲೋಬೊ, ಪುತ್ತೂರು ತಾಲೂಕು ಹಾರಾಡಿ ಸ.ಮಾ.ಹಿ.ಪ್ರಾ. ಶಾಲೆಯ ಸಹ ಶಿಕ್ಷಕ ಪ್ರಶಾಂತ್ ಪಿ.ಎಲ್., ಸುಳ್ಯ ತಾಲೂಕು ಇಡ್ಯಡ್ಕ ಸ.ಉ.ಹಿ.ಪ್ರಾ.ಶಾಲೆಯ ಸಹ ಶಿಕ್ಷಕಿ ರೇಖಾ ಸರ್ವೋತ್ತಮ ಶೇಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರೌಢ ಶಾಲಾ ವಿಭಾಗದಲ್ಲಿ ಬಂಟ್ವಾಳ ತಾಲೂಕು ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಹ ಶಿಕ್ಷಕ ರಾಧಾಕೃಷ್ಣ ಬಾಳಿಗ, ಬೆಳ್ತಂಗಡಿ ತಾಲೂಕು ಕೊಕ್ರಾಡಿ ಸ.ಪ್ರೌ.ಶಾಲೆಯ ಸಹ ಶಿಕ್ಷಕಿ ಅಕ್ಕಮ್ಮ, ಮಂಗಳೂರು ಉತ್ತರ ವಲಯದ ಬಡಗ ಎಕ್ಕಾರು ಸ.ಪ್ರೌ.ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಉಸ್ಮಾನ್ ಜಿ., ಮಂಗಳೂರು ದಕ್ಷಿಣ ವಲಯ ಕಿನ್ನಿಕಂಬಳ ಸ.ಪ್ರೌ.ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಜಯಶ್ರೀ, ಮೂಡುಬಿದಿರೆ ವಲಯ ಅಳಿಯೂರು ಸ.ಪ್ರೌ.ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ವಸಂತ, ಪುತ್ತೂರು ತಾಲೂಕಿನ ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢ ಶಾಲೆಯ ಸಹ ಶಿಕ್ಷಕ ವೆಂಕಟೇಶ್ ದಾಮ್ಲೆ, ಸುಳ್ಯ ತಾಲೂಕಿನ ಪಂಜ ಸ.ಪ.ಪೂ. ಕಾಲೇಜು (ಪ್ರೌ.ಶಾ.ವಿ) ಸಹ ಶಿಕ್ಷಕ ಟೈಟಸ್ ವರ್ಗಿಸ್ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಸಹನಿರ್ದೇಶಕ ಸಿಪ್ರಿಯನ್ ಮೊಂತೆರೋ, ಜಿ.ಪಂ. ಸದಸ್ಯರಾದ ಜನರ್ದಾನ ಗೌಡ, ಧನಲಕ್ಷ್ಮೀ ಶೆಟ್ಟಿ, ತಾ.ಪಂ. ಸದಸ್ಯರಾದ ವಜ್ರಾಕ್ಷಿ ಶೆಟ್ಟಿ, ರಶ್ಮಿ ಆಚಾರ್ಯ, ಶಶಿಕಲಾ, ಮಂಗಳೂರು ವಲಯ ಬಿಇಒ ಸದಾನಂದ ಪೂಂಜಾ, ಕಾರ್ಪೊರೇಟರ್ ಸಂಧ್ಯಾ ಮೋಹನ ಆಚಾರ್ಯ, ಕೆನರಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ನಮಿತಾ ಪ್ರಕಾಶ್ ಉಪಸ್ಥಿತರಿದ್ದರು.

ಶಿಕ್ಷಣಾಧಿಕಾರಿ ದಯಾವತಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಮತ್ತು ರವೀಂದ್ರನಾಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಮಂಗಳೂರು ದಕ್ಷಿಣ ವಲಯದ ವಾಮಂಜೂರಿನ ಅನುದಾನಿತ ಮಂಗಳ ಜ್ಯೋತಿ ಸಮಗ್ರಪ್ರೌಢ ಶಾಲೆಯ ಯೋಗ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶೇಖರ್ ನಾಯ್ಕ (ಕಡ್ತಲ) ಅವರಿಗೆ ಜಿಲ್ಲಾ ಮಟ್ಟದ ವಿಶೇಷ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಈ ಬಾರಿಯ ರಾಷ್ಟ್ರಪ್ರಶಸ್ತಿ ವಿಜೇತ ಯಾಕೂಬ್, ಕಳೆದ ಬಾರಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸಮ್ಮಾನಿಸಲಾಯಿತು.