ತಾಳ್ಮೆಯ ಹೆಣ್ಣು- ಅದ್ಧುತ ನಟಿ ಅವಳು

1:29 PM, Wednesday, September 9th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Tayiತಾಳಿ ಕೊರಳೊಳಗೆ.
ತಾಳ್ಮೆ ಎದೆಯೊಳಗೆ.
ಮಾತು ಮನದೊಳಗೆ.
ನೋವು ಒಡಲೊಳಗೆ.

ಉಸಿರು ಮಕ್ಕಳಿಗಾಗಿ.
ತನುವು. ಗಂಡನಿಗಾಗಿ.
ಮನವು. ಪಾಲನೆಗಾಗಿ.
ಹೆಸರು. ಹೆತ್ತವರಿಗಾಗಿ.
ಬದುಕು. ಕುಟುಂಬಕ್ಕಾಗಿ.

ಇಷ್ಟೆ. ಹೆಣ್ಣಿನ ಜೀವನ.
ಅದರಲ್ಲೆ ಅವಳು ಪಾವನ.
ಅಲ್ಪ ತೃಪ್ತಳು ಅವಳು.
ಅದ್ಧುತ. ನಟಿ ಅವಳು.
ಸಂಬಳ ಇಲ್ಲದ ಕೆಲಸ.
ಅವಳಲ್ಲೆ ಮನೆಯವರ ಸಂತಸ.

ಒಲಿದರೆ ಎಲ್ಲರೂ ನನ್ನವರೆನ್ನುವ ನಾರಿ.
ಮುನಿದರೆ ಆಗುವಳು ಮಾರಿ.
ಅವಳಿಗೂ ಹೃದಯವಿದೆ ದಯೆ ತೋರಿ.
ಬಯಸಬೇಡಿ ಅವಳಿಂದ ಬರಿ ಚಾಕರಿ.
ಕಳೆದುಕೊಂಡ ಮೇಲೆ ಸಿಗಳು. ಶ್ರೀಮತಿ.
ಅರಿತು ಕೊಂಡರೆ ಜೀವ ಕೊಡುವ ಗರತಿ.

HariGanesh

 

ಪದ್ಯದ. ಹೆಸರು :- ತಾಳ್ಮೆಯ ಹೆಣ್ಣು.

ರಚನೆ. :- ಹರಿ ಗಣೇಶ್ ಎಸ್ ರಾವ್.
9743978945.
hariganeshsraok@gmail.com.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English