- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಶ್ಲೇಷ ಬಲಿ ಪೂಜಾ ಸಂಕಲ್ಪದಿಂದ ಸಿಗುವ ಪ್ರಯೋಜನಗಳು

Aslesha pooja [1]ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150.

ಆಶ್ಲೇಷ ಬಲಿ ಪೂಜಾ ಸಂಕಲ್ಪ ಮಾಡುವ ವಿಧಾನ

ಸಂಕಲ್ಪದ ದಿನದಂದು ಕುಟುಂಬಸ್ಥರು ಉಪವಾಸ ಮತ್ತು ಮಡಿಯಿಂದ ಇರತಕ್ಕದ್ದು. ಪರಿಣಿತ ವೈದಿಕರೊಂದಿಗೆ ಆಶ್ಲೇಷ ಬಲಿ ಪೂಜಾ ಕಾರ್ಯವನ್ನು ನಡೆಸಲಾಗುತ್ತದೆ.

ಗಣಪತಿಯ ಪೂಜಾ ಆರಾಧನೆಯಿಂದ ಬಲಿ ವಿಧಾನ ಪ್ರಾರಂಭವಾಗುವುದು. ಸರ್ಪ ಮಂಡಲವನ್ನು ಚಿತ್ತಾರದ ರೂಪದಲ್ಲಿ ಬರೆಯಲಾಗುತ್ತದೆ, ಇದರಲ್ಲಿ ವಾಸುಕಿ, ಅನಂತ, ಶೇಷ, ಕಪಿಲ, ನಾಗ, ಕುಳಿಕ, ಶಂಕಪಾಲ, ಭೂಧರ, ತಕ್ಷಕ ಹಾಗೂ ಎಲ್ಲಾ ಸರ್ಪಕುಲ ಗಳನ್ನು ಆಹ್ವಾನಿಸಲಾಗುತ್ತದೆ.

ವಾಸುಕಿ ಸರ್ಪವನ್ನು ಧ್ಯಾನಿಸಿ ನಂತರ ಕಲ್ಪೋಕ್ತ ಆಸನ, ಪಾಧ್ಯ, ಸ್ವಾಗತ, ಅರ್ಘ್ಯ, ಅಚಮನಿಯ, ಮಧುಪರ್ಕ, ಸ್ನಾನ, ವಸನ, ಆಭರಣ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ ಗಳ ಮೂಲಕ ಪೂಜೆಯನ್ನು ಮಾಡಲಾಗುತ್ತದೆ.

ಕ್ಷೀರ, ಶರ್ಕರ, ಕದಳಿ, ಮಧು, ಆಜ್ಯ, ಹರಿದ್ರಾಯುಕ್ತ ಪಿಂಡಗಳನ್ನು ಸರ್ಪಗಳಿಗೆ ಸಮರ್ಪಿಸಲಾಗುವುದು. ದೀಪಗಳನ್ನು ಬೆಳಗಿ ಮಹಾಮಂಗಳಾರತಿಯನ್ನು ಹಾಗೂ ಪುಷ್ಪಾರ್ಚನೆಯನ್ನೂ ಸಮರ್ಪಿಸುವರು. ಹೀಗೆ ಈ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ನಿಮ್ಮಲ್ಲಿ ಇರುವಂತಹ ಸರ್ಪದೋಷ ಗಳನ್ನು ಹಾಗೂ ಪೂರ್ವಜರಿಂದ ಬಂದಿರುವಂತಹ ಕರ್ಮ ದೋಷವನ್ನು ಕಳೆಯಬೇಕಾಗುತ್ತದೆ.

ಈ ಪೂಜೆಯಿಂದ ಆರೋಗ್ಯ, ಆಯುಷ್ಯ, ಸಂತಾನ, ಮದುವೆ, ಐಶ್ವರ್ಯ ಹೀಗೆ ಎಲ್ಲ ಕೃಪೆಗಳಿಗೆ ಪಾತ್ರರಾಗುವಿರಿ.

ಕೊನೆಯಲ್ಲಿ ಅರ್ಘ್ಯದಾನ, ವಾಯನಗಳ ದಾನ ನೀಡಿ ಪ್ರಸಾದವನ್ನು ವಿತರಿಸುವರು, ನಂತರ ವಿಸರ್ಜನ ಪೂಜೆಯನ್ನು ಮಾಡಿ ಆಶ್ಲೇಷಬಲಿ ವಿಧಾನವನ್ನು ಸಮಾಪ್ತಿ ಮಾಡಲಾಗುತ್ತದೆ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ಸಮಾಲೋಚನೆಗಾಗಿ ಕರೆ ಮಾಡಿ.
9945410150