- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದ.ಕ. ಜಿಲ್ಲೆಯಲ್ಲಿ ಭಾರಿ ಮಳೆ ಸಂಪರ್ಕ ರಸ್ತೆ, ಮನೆಗಳು ಕುಸಿತ, ಹಲವೆಡೆ ಜಲಾವೃತ

neerumarga [1]ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕಳೆದ 24ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ  ನಗರ ಹೊರವಲಯದ ನೀರುಮಾರ್ಗ ಮತ್ತು ಬಜ್ಪೆ ಸಮೀಪದ ಆದ್ಯಪಾಡಿ ಎಂಬಲ್ಲಿ ಭೂ ಕುಸಿದ ಪರಿಣಾಮ ಸಂಪರ್ಕ ರಸ್ತೆ ಕಡಿದು ಹೋಗಿದೆ.‌ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ . ಅದಲ್ಲದೆ ಸರಿಪಳ್ಳ ಎಂಬಲ್ಲಿ ಮನೆ ಯೊಂದು ಕುಸಿದ ಪರಿಣಾಮ ಇಬ್ಬರಿಗೆ‌ ಗಾಯವಾಗಿದ್ದು, ಅವರನ್ನು‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ಜಪ್ಪಿನಮೊಗರು, ಕುದ್ರೋಳಿ ಮತ್ತಿತರ ಕಡೆ ನೀರು ನಿಲುಗಡೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ನಗರದ ಫಳ್ನೀರ್ ರಸ್ತೆಯ ಪಕ್ಕ ‌ಮರವೊಂದು ಉರುಳಿ ಬಿದ್ದ ಬಗ್ಗೆ ಅಗ್ನಿಶಾಮಕ ಠಾಣೆಯ ಮೂಲಗಳು ತಿಳಿಸಿವೆ. ಶನಿವಾರ‌ ಮುಂಜಾನೆ ಆರಂಭಗೊಂಡ ಗಾಳಿ, ಮಳೆಯು ತನ್ನ ತೀವ್ರತೆ‌ ಹೆಚ್ಚಿಸಿದ್ದು ರಾತ್ರಿಯಿಡೀ ಬಿರುಸಿನ ಮಳೆಯಾಗಿದೆ.

Rain [2]ನಂದಿನಿ ಮತ್ತು ಶಾಂಭವಿ ನದಿಗಳು ತುಂಬಿಹರಿಯುತ್ತಿದ್ದು, ಕಿಲೆಂಜೂರು, ಪಂಜ, ಬಾಳ್ಕುಂಜೆ, ಅತ್ತೂರು ಮತ್ತು ಕಿನ್ನಿಗೋಳಿ ಬಳಿಯ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.

ಮುಲ್ಕಿ-ಬಾಳ್ಕುಂಜೆ ಮಾರ್ಗದಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿದ್ದು, ರಕ್ಷಣಾ ಕಾರ್ಯಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.

ಸರಿಪಲ್ಲದಲ್ಲಿ ಮನೆ ಕುಸಿದು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತ್ತಾವರ ಬಾಬುಗುಡ್ಡೆಯ ಏಳನೇ ರಸ್ತೆಯ ಮನೆಯೊಂದು ಭಾಗಷ ಕುಸಿದಿದ್ದು ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರವಾಹ ಪೀಡಿತ ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಿಸಲು ಎನ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸಲಾಗಿದೆ.

Attavara [3]

Attavara [4]

Rain [5]