- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೋನಾ ಸೋಂಕು : ದಕ್ಷಿಣ ಕನ್ನಡ – 380, ಉಡುಪಿ – 293, ಕಾಸರಗೋಡು – 208

Corona [1]ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ರವಿವಾರದಂದು 380 ಏರಿಕೆಯಾಗಿದೆ . ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರ ದಾಟಿದೆ.

ರವಿವಾರದಂದು ದ.ಕ. ಜಿಲ್ಲೆಯಲ್ಲಿ 127 ಮಂದಿಯಲ್ಲಿ ಪ್ರಾಥಮಿಕ  ಸಂಪರ್ಕದಿಂದ ಸೋಂಕು ದೃಢಪಟ್ಟಿದೆ. 139 ಮಂದಿಯಲ್ಲಿ ಐಎಲ್ ಐ ಕೇಸ್ ದೃಢಪಟ್ಟಿದೆ. 8 ಮಂದಿಯಲ್ಲಿ ಸಾರಿ ಕೇಸ್ ಪತ್ತೆಯಾಗಿದ್ದು, 106 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.

ರವಿವಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 293 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಪಾಸಿಟಿವ್ ಬಂದಿರುವ ಒಟ್ಟು ಪ್ರಕರಣಗಳ ಸಂಖ್ಯೆ 15,391ಕ್ಕೇರಿದೆ. ಅಲ್ಲದೇ ಇಂದು 920 ಮಂದಿಯ ಗಂಟಲುದ್ರವ ಮಾದರಿ ಫಲಿತಾಂಶ ನೆಗೆಟಿವ್ ಬಂದಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ರವಿವಾರ ಪಾಸಿಟಿವ್ ಬಂದ 293 ಮಂದಿಯಲ್ಲಿ ಉಡುಪಿ ತಾಲೂಕಿನ 123 ಮಂದಿ, ಕುಂದಾಪುರ ತಾಲೂಕಿನ 95 ಹಾಗೂ ಕಾರ್ಕಳ ತಾಲೂಕಿನ 70 ಮಂದಿ ಸೇರಿದ್ದು, ಹೊರಜಿಲ್ಲೆಯಿಂದ ಉಡುಪಿ, ಮಣಿಪಾಲಕ್ಕೆ ಚಿಕಿತ್ಸೆಗೆಂದು ಬಂದ 5 ಮಂದಿಯಲ್ಲೂ ಕೊರೋನ ಪಾಸಿಟಿವ್ ಪತ್ತೆಯಾಗಿದೆ ಎಂದು ತಿಳಿಸಿದರು.

ಇಂದಿನ 293 ಮಂದಿಯಲ್ಲಿ ಮಕ್ಕಳು ಸೇರಿದಂತೆ 173 ಮಂದಿ ಪುರುಷರು ಹಾಗೂ 120 ಮಂದಿ ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 73 ಪುರುಷರು ಹಾಗೂ 64 ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಾ.ಸೂಡ ಹೇಳಿದರು.

ಕಾಸರಗೋಡು ಜಿಲ್ಲೆಯಲ್ಲಿ ರವಿವಾರ 208 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದೆ.

ಸೋಂಕಿತರ ಪೈಕಿ 203 ಮಂದಿಗೆ ಸಂಪರ್ಕದಿಂದ ಹಾಗೂ ವಿದೇಶದಿಂದ ಬಂದ ಇಬ್ಬರು, ಹೊರರಾಜ್ಯಗಳಿಂದ ಆಗಮಿಸಿದ ಮೂವರಿಗೆ ಸೋಂಕು ದೃಢಪಟ್ಟಿದೆ. 173 ಮಂದಿ ಗುಣಮುಖರಾಗಿದ್ದಾರೆ. ಆರು ಮಂದಿ ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ದ್ರಢಪಟ್ಟಿದೆ. ಇದುವರೆಗೆ 8404 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 663 ಮಂದಿ ವಿದೇಶಗಳಿಂದ 493 ಮಂದಿ ಹೊರ ರಾಜ್ಯಗಳಿಂದ ಮರಳಿದವರಾಗಿದ್ದಾರೆ.