- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಮುದ್ರ ತೀರಕ್ಕೆ ತೇಲಿ ಬಂದ ಕ್ಷಿಪಣಿ ಮಾದರಿಯ ವಸ್ತು

misile [1]ಬೈಂದೂರು: ಶಿರೂರು ಕರಾವಳಿ ಸಮುದ್ರ ತೀರದಲ್ಲಿ ಕ್ಷಿಪಣಿ ಮಾದರಿಯ ವಸ್ತುವೊಂದು ಮಂಗಳವಾರ ಮುಂಜಾನೆ ತೇಲಿ ಬಂದಿದೆ.

ಸುಮಾರು 10ರಿಂದ 15 ಅಡಿ ಉದ್ದದ ಕೆಂಪು ಬಣ್ಣದ ವಸ್ತು ಇದಾಗಿದ್ದು, ಕಬ್ಬಿಣದಿಂದ ತಯಾರಿಸಲಾಗಿದೆ. ಸ್ಥಳೀಯರಿಗೆ ಈ ಕ್ಷಿಪಣಿ ಮಾದರಿಯ ವಸ್ತು ಕುತೂಹಲಕ್ಕೆ ಕಾರಣವಾಗಿದೆ.

ಕರಾವಳಿ ಮೀಸಲು ಪಡೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.