- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಸರಗೋಡು – ಮಂಗಳೂರು ಕೆ.ಎಸ್.ಆರ್.ಟಿ.ಸಿ ಅಂತರ್ ರಾಜ್ಯ ಬಸ್ ಸರ್ವಿಸ್ ಶೀಘ್ರ ಪ್ರಸ್ತಾಪಿಸುವಂತೆ ಆಗ್ರಹಿಸಿ ಮನವಿ

Manjeshwara Bjp [1]ಮಂಜೇಶ್ವರ:- ಕಾಸರಗೋಡು – ಮಂಗಳೂರು ಕೆ.ಎಸ್.ಆರ್.ಟಿ.ಸಿ ಅಂತರ್ ರಾಜ್ಯ ಬಸ್ ಸರ್ವಿಸ್ ಶೀಘ್ರ ಪುನಃ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕೆ.ಎಸ್.ಆರ್.ಟಿ.ಸಿ ಮೆನೇಜಿಂಗ್ ಡೈರೆಕ್ಟರ್ ರವರಿಗೆ ಬಿಜೆಪಿ ಮಂಜೇಶ್ವರದ ನಿಯೋಗದವರು ಭೇಟಿಯಾಗಿ ಮನವಿ ಸಲ್ಲಿಸಿದರು. ಓಬಿಸಿ ಮೋರ್ಚಾ ಕೇರಳ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ ಯವರು ಮನವಿ ಸಲ್ಲಿಸಿದರು. ಈ ವೇಳೆ ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ, ಓಬಿಸಿ ಮೋರ್ಚಾ ಮಂಜೇಶ್ವರ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾ ಪ್ರಸನ್ನ ಆಚಾರ್ಯ, ಯುವಮೋರ್ಚಾ ಮಂಜೇಶ್ವರ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ ಮಂಜೇಶ್ವರ, ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಕಾರ್ಯದರ್ಶಿ ಯಶ್ ರಾಜ್ ಉದ್ಯಾವರ ಓಬಿಸಿ ಮೋರ್ಚಾ ಮೀಡಿಯಾ ಸೆಲ್ ಕನ್ವಿನರ್ ರತನ್ ಕುಮಾರ್ ಹೊಸಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಕಳೆದ 6 ತಿಂಗಳಿನಿಂದ ಲಾಕ್ ಡೌನ್ ನಿಮ್ಮಿತ ಬಸ್ ಸಂಚಾರ ಸ್ಥಗಿತಗೊಂಡಿದ್ದರು ಇದೀಗ ಲಾಕ್ ಡೌನ್ ಸಡಿಲಗೊಂಡರೂ, ಅಂತರ್ ರಾಜ್ಯ ಗಡಿ ತೆರವುಗೊಳಿಸಿದರು ಬಸ್ ಸಂಚಾರ ಪ್ರಾರಂಭವಾಗಿಲ್ಲ. ಇದರಿಂದಾಗಿ ಮಂಗಳೂರನ್ನು ಅವಲಂಬಿಸಿರುವ ನಿತ್ಯ ಉದ್ಯೋಗಸ್ಥರು ಸಂಕಷ್ಟಕ್ಕೀಡಾಗಿದ್ದರೆ. ಅನಾರೋಗ್ಯ ಪೀಡಿತರಿಗೂ ಮಂಗಳೂರು ಆಸ್ಪತ್ರೆಯನ್ನ ಆಶ್ರಯಿಸುವ ರೋಗಿಗಳು ಸಂಕಷ್ಟಕ್ಕೀಡಾಗಿದ್ದರೆ. ಅಲ್ಲದೇ ಶಾಲಾ – ಕಾಲೇಜ್ ನ ಮಕ್ಕಳು ಕೂಡ ಬಸ್ ಸಂಚಾರವಿಲ್ಲದೆ ಸಂಕಷ್ಟಕ್ಕೀಡಾಗಿದ್ದರೆ.

ಆ ಬಳಿಕ ಮನವಿಯನ್ನು ಬೆಂಗಳೂರು ಸೀನಿಯರ್ ಮೆನೇಜರ್, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಹಾಗೂ ಕಾಸರಗೋಡು ಜಿಲ್ಲಾಧಿಕಾರಿ, ಕೇರಳ ರಾಜ್ಯ ಕೆ.ಎಸ್.ಆರ್.ಟಿ.ಸಿಯ ತಿರುವನಂತಪುರ ಮೆನೇಜಿಂಗ್ ಡೈರೆಕ್ಟರ್, ಕೇರಳ ರಾಜ್ಯ ರಸ್ತೆ ಸಾರಿಗೆ ಪ್ರಿನ್ಸಿಪಾಲ್ ಕಾರ್ಯದರ್ಶಿ, ಕಾಸರಗೋಡು ಸೀನಿಯರ್ ಮೆನೇಜರ್ ಕಾಸರಗೋಡು ಡಿಪ್ಪೋ, ಕೆ.ಎಸ್.ಆರ್.ಟಿ.ಸಿ ಮಂಗಳೂರು ಡಿಪ್ಪೋ, ಮೆನೇಜಿಂಗ್ ಡೈರೆಕ್ಟರ್ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೆಂಟ್ರಲ್ ಆಫೀಸ್ ಬೆಂಗಳೂರು ಮುಂತಾದವರಿಗೆ ನೀಡಲಾಯಿತು.