- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೋನ ಸೋಂಕು ಸೆ. 29 : ದಕ್ಷಿಣ ಕನ್ನಡ -362, ಒಂಬತ್ತು ಸಾವು, ಉಡುಪಿ – 319, ಎರಡು ಸಾವು

corona [1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 362 ಮಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೋನ ಸೋಂಕಿನಿಂದಾಗಿ ಮತ್ತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ 232 ಮಂದಿ ಗುಣಮುಖರಾಗಿದ್ದಾರೆ.  ಕೊರೋನದಿಂದ 9 ಮಂದಿ ಮೃತಪಟ್ಟಿದ್ದು, 190 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ಸಿಬ್ಬಂದಿಯು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಈಗಾಗಲೇ ಒಂದು ವಾರ ಪೂರೈಸಿದೆ. ಇದರಿಂದ ಮಂಗಳವಾರವೂ ದ.ಕ. ಜಿಲ್ಲೆಯ ಕೋವಿಡ್ ಬುಲೆಟಿನ್ ಪ್ರಕಟವಾಗಿಲ್ಲ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 319 ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಪಾಸಿಟಿವ್ ದೃಢಪಟ್ಟವರ ಸಂಖ್ಯೆ 17 ಸಾವಿರ ದಾಟಿದ್ದು, ಒಟ್ಟು 17,005ಕ್ಕೇರಿದೆ. ಅಲ್ಲದೇ ದಿನದಲ್ಲಿ 69 ಮಂದಿ ಸೋಂಕಿ ನಿಂದ ಗುಣಮುಖರಾಗಿ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದು, ಈವರೆಗೆ ಬಿಡುಗಡೆ ಗೊಂಡವರ ಒಟ್ಟು ಸಂಖ್ಯೆ 14,781ಕ್ಕೇರಿದೆ.

ಅಲ್ಲದೇ ಜಿಲ್ಲೆಯಲ್ಲಿ ಇಂದಿಗೆ ಒಟ್ಟು 2078 ಸಕ್ರೀಯ ಕೋವಿಡ್ ಪ್ರಕರಣ ಗಳಿವೆ. ಮಂಗಳವಾರ ಕೋವಿಡ್‌ಗೆ ಒಟ್ಟು ಇಬ್ಬರು ಬಲಿಯಾಗಿದ್ದು, ಇದರಿಂದ ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ವುೃತಪಟ್ಟವರ ಸಂಖ್ಯೆ 146ಕ್ಕೇರಿದೆ. ಅಲ್ಲದೇ ಜಿಲ್ಲೆಯಲ್ಲಿ ಇಂದಿಗೆ ಒಟ್ಟು 2078 ಸಕ್ರೀಯ ಕೋವಿಡ್ ಪ್ರಕರಣ ಗಳಿವೆ.

ಮಂಗಳವಾರ ಕೋವಿಡ್‌ಗೆ ಒಟ್ಟು ಇಬ್ಬರು ಬಲಿಯಾಗಿದ್ದು, ಇದರಿಂದ ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 146ಕ್ಕೇರಿದೆ. ಉಡುಪಿಯ 71 ಮತ್ತು 81 ವರ್ಷ ಪ್ರಾಯದ ಇಬ್ಬರು ಹಿರಿಯ ನಾಗರಿಕರು ಅನ್ಯ ಸಮಸ್ಯೆಗಳೊಂದಿಗೆ ಕೋವಿಡ್ ಪಾಸಿಟಿವ್ ಬಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಜ್ವರ, ಕೆಮ್ಮು ಹಾಗೂ ಉಸಿರಾಟ ಸಮಸ್ಯೆ ಇದ್ದ 71 ವರ್ಷದ ವೃದ್ಧರು 24ಕ್ಕೆ ಚಿಕಿತ್ಸೆಗೆ ದಾಖಲಾಗಿ 27ಕ್ಕೆ ಮೃತಪಟ್ಟರೆ, 81 ವರ್ಷ ಪ್ರಾಯದ ವೃದ್ಧರು 13ರಂದು ವಿವಿಧ ಸಮಸ್ಯೆಗಳಿಗಾಗಿ ಸೆ.13ಕ್ಕೆ ಆಸ್ಪತ್ರೆಗೆ ದಾಖಲಾಗಿ ಸೆ.24ರಂದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಬೇಡಿಕೆ ಈಡೇರಿಕೆ ಬಗ್ಗೆ ಸರಕಾರದ ಮಟ್ಟದಲ್ಲಿ ಇನ್ನೂ ತೀರ್ಮಾನ ಆಗಿಲ್ಲ. ಹಾಗಾಗಿ ಜಿಲ್ಲಾ ಬುಲೆಟಿನ್ ಲಭ್ಯವಾಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.