- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದ್ವೀಪ ಪ್ರದೇಶ ಬಡ್ಡ ಕುದ್ರು ನಿವಾಸಿಗಳಿಂದ ತೂಗು ಸೇತುವೆಗೆ ಮನವಿ, ಡಾ.ಭರತ್ ಶೆಟ್ಟಿ ವೈ ಸ್ಪಂದನೆ

Badda Kudru [1]ಕಾವೂರು : ದ್ವೀಪ ಪ್ರದೇಶ ಬಡ್ಡ ಕುದ್ರುವಿಗೆ ತೂಗು ಸೇತುವೆ ಮಾಡಿಕೊಡಿ, ನಮ್ಮ ಹಿರಿಯ ಕಾಲದಿಂದಲೂ ಇಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ಅನಾರೋಗ್ಯ ಬಂದರೆ ಚಿಕಿತ್ಸೆಗೂ ಪರದಾಟ, ಮಕ್ಕಳಿಗೆ ಶಾಲೆಗೆ ತೆರಳಲು ಸಮಸ್ಯೆ, ಮಳೆಗಾಲದಲ್ಲಿ ನದಿ ಉಕ್ಕಿ ಹರಿದಾಗ ದೋಣಿಯಲ್ಲೂ ದಾಟಲು ಆಗದ ಸ್ಥಿತಿ. ಕಳೆದ ಐವತ್ತು ವರ್ಷಗಳಲ್ಲಿ ಯಾರೊಬ್ಬರೂ ನಮ್ಮ ಅಹವಾಲು ಆಲಿಸಲು ಬರಲಿಲ್ಲ.ನೀವಾದರೂ ಮಾಡಿಕೊಡಿ. ಇದು ದ್ವೀಪ ಪ್ರದೇಶದ ನಿವಾಸಿಗಳ ಮನವಿ.

ಮಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟ ಮರಕಡ ವಾರ್ಡ್ 14 ರ ಬಡ್ಡಕುದ್ರುವಿಗೆ ಶನಿವಾರ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ದೋಣಿಯಲ್ಲಿ ಪ್ರಯಾಣಿಸಿ ದ್ವೀಪದ ಜನರ ಅಹವಾಲು ಆಲಿಸಿದ ಸಂದರ್ಭ ಮನವಿಗಳ ಮಹಾಪೂರ ಹರಿದು ಬಂತು. ಈ ಸಂದರ್ಭ ಸಮಸ್ಯೆಯನ್ನು ಹಿರಿಯರಾದ ಸದಾಶಿವ ಪೂಜಾರಿ ಅವರು ಶಾಸಕರಿಗೆ ವಿವರಿಸಿದರು. ಮಂಗಳೂರು ಮಹಾನಗರ ಪಾಲಿಕೆ ಇದೀಗ ತ್ಯಾಜ್ಯ ತೆರಿಗೆ ಹಾಕುತ್ತಿದೆ. ಆದರೆ ಅವರು ಹೇಗೆ ತ್ಯಾಜ್ಯ ಸಂಗ್ರಹಿಸುತ್ತಾರೆ. ಬರಲು ವ್ಯವಸ್ಥೆಗಳಿಲ್ಲ.ನಮ್ಮಲ್ಲಿ ತ್ಯಾಜ್ಯವೂ ಸಂಗ್ರವಾಗುತ್ತಿಲ್ಲ. ತೆರಿಗೆ ಭಾರ ಮಾತ್ರ ತಪ್ಪದೆ ಹಾಕುತ್ತಾರೆ.ಇದನ್ನು ಸರಿಪಡಿಸಿ.ಪ್ರಥಮ ಬಾರಿ ಶಾಸಕರೊಬ್ಬರು ಭೇಟಿ ನೀಡಿ ಅಹವಾಲು ಆಲಿಸಿರುವುದಕ್ಕೆ ಸಂತಸವಾಗಿದೆ ಎಂದರು.

Badda Kudru [2]ಇದಕ್ಕುತ್ತರಿಸಿದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ತೂಗು ಸೇತುವೆ ನಿರ್ಮಾಣಕ್ಕೆ ತಾಂತ್ರಿಕ ಸಲಹೆಯ ಅಗತ್ಯವಿದೆ. ತಜ್ಞ ಎಂಜಿನಿಯರ್ಗಳಲ್ಲಿ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ತ್ಯಾಜ್ಯ ತೆರಿಗೆಯಲ್ಲಿ ವಿನಾಯಿತಿ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ವಾಮನ ಪೂಜಾರಿ ಅವರು ನಮ್ಮ ಯುವ ಪೀಳಿಗೆಗೆ ಇಲ್ಲಿನ ಸಮಸ್ಯೆ ಬಗೆ ಹರಿಸಬೇಕಿದೆ. ಶಾಸಕರಾದ ಡಾ.ಭರತ್ ಶೆಟ್ಟಿ ಅವರು ಆಗಮಿಸಿ ಸ್ಪಂದಿಸಿದ್ದಾರೆ. ಆದಷ್ಟು ಶೀಘ್ರ ನಮ್ಮ ನಿರೀಕ್ಷೆ ನೆರವೇರುವಂತಾಗಲಿ ಎಂದು ಆಶಿಸಿದರು.

ಈ ಸಂದರ್ಭ ಸ್ಥಳೀಯ ಮನಪಾ ಸದಸ್ಯರಾದ ಲೋಹಿತ್ ಅಮೀನ್. ಹಾಗೂ ಭಾಜಪ ಉತ್ತರ ಮಂಡಲದ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ. ಪ್ರಧಾನ ಕಾರ್ಯದಶರ್ಿ ರಾಜೇಶ್ ಕೊಟ್ಟಾರಿ, ಪಕ್ಷದ ಪ್ರಮುಖರಾದ ಹರೀಶ್ ಶೆಟ್ಟಿ, ಅಮರೇಶ್ ಬೇಕಲ್ ಹಾಗೂ ಕಾರ್ಯಕರ್ತರಾದ ಸುನೀಲ್, ಧನಂಜಯ್, ಶ್ರವಣ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Badda Kudru [3]