- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೋನ ಸೋಂಕು : ದಕ್ಷಿಣ ಕನ್ನಡ ಜಿಲ್ಲೆ- 303, ನಾಲ್ಕು ಸಾವು, ಉಡುಪಿ – 319, ಕಾಸರಗೋಡು – 295

corona [1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 303 ಮಂದಿಗೆ ಕೊರೋನ ಸೋಂಕು ತಗುಲಿದ್ದು4 ಮಂದಿ ಮೃತಪಟ್ಟಿದ್ದಾರೆ. 194 ಮಂದಿ ಗುಣಮುಖ ರಾಗಿದ್ದಾರೆ. ಉಡುಪಿಯಲ್ಲಿ ಮತ್ತೆ 319 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಈವರೆಗಿನ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 1,99,759 ಮಂದಿಯ ಪರೀಕ್ಷೆ ಮಾಡಿಸಲಾಗಿದೆ. ಆ ಪೈಕಿ 1,72,927 ಮಂದಿಯ ವರದಿ ನೆಗೆಟಿವ್ ಮತ್ತು 26,832 ಮಂದಿಯ ವರದಿ ಪಾಸಿಟಿವ್ ಬಂದಿದೆ. ಅಲ್ಲದೆ ಒಟ್ಟು 609 ಮಂದಿ ಸಾವಿಗೀಡಾಗಿದ್ದಾರೆ. 21,938 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 4,285 ಸಕ್ರಿಯ ಪ್ರಕರಣಗಳಿವೆ.

ಉಡುಪಿಯಲ್ಲಿ ಮತ್ತೆ 319 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.  ಸೋಮವಾರದಂದು ಪತ್ತೆಯಾದ ಪಾಸಿಟಿವ್ ಕೇಸ್ ಗಳು-276,  ಇಂದು ಪತ್ತೆಯಾದ ನೆಗೆಟಿವ್ ಪ್ರಕರಣಗಳು-1905,  ಗುಣಮುಖರಾದವರು-276 ಮಂದಿ.  ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 166 ಮಂದಿ  ಸೋಂಕಿಗೆ ಬಲಿಯಾಯಾಗಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 1965 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರದಂದು 295 ಮಂದಿಗೆ ಪಾಸಿಟಿವ್ ದೃಢ ಪಟ್ಟಿದೆ.  ಏಳು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿದ್ದು,  253 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6,883 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಕೋವಿಡ್ ಮಾರ್ಗಸೂಚಿಯ ಹೊರತಾಗಿಯೂ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿದ ವ್ಯಕ್ತಿಗಳ ವಿರುದ್ಧ ಈವರೆಗೆ 6,883 ಪ್ರಕರಣ ದಾಖಲಿಸಲಾಗಿದ್ದು, 8,34,085 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.