- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೆಸ್ಕಾಂ ಗುತ್ತಿಗೆ ಮೀಟರ್ ರೀಡರ್ ಗಳನ್ನು ಕೆಲಸದಿಂದ ವಜಾ : ಬಿಜೈ ಮೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ

mescom readers [1]ಮಂಗಳೂರು : ಮೆಸ್ಕಾಂ ಗುತ್ತಿಗೆ ಮೀಟರ್ ರೀಡರ್ ಗಳನ್ನು ಕೆಲಸದಿಂದ ಕೈ ಬಿಟ್ಟಿರುವುದನ್ನು ವಿರೋಧಿಸಿ ಮೀಟರ್ ರೀಡರ್‌ಗಳ ಕಾರ್ಮಿಕ ಸಂಘಟನೆ ಹಾಗೂ ಇಂಟಕ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದ ಬಿಜೈ ಮೆಸ್ಕಾಂ ಕಚೇರಿಯ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.

ಮೆಸ್ಕಾಂ ಮೀಟರ್ ರೀಡರ್‌ಗಳಾಗಿ ಕಳೆದ 17 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಬಂಟ್ವಾಳ ಮತ್ತು ಪುತ್ತೂರಿನ ಎರಡು ನೂತನ ಗುತ್ತಿಗೆದಾರ ಸಂಸ್ಥೆಗಳು ಕೆಲಸದಿಂದ ವಜಾಗೊಳಿಸಲು ಮುಂದಾಗಿರುವುದರ ವಿರುದ್ಧ ಮೆಸ್ಕಾಂ ಮೀಟರ್ ರೀಡರ್ ಗಳು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ ನೂತನ ಗುತ್ತಿಗೆ ಸಂಸ್ಥೆಗಳ ಗುತ್ತಿಗೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದೆ.

ಕಾರ್ಮಿಕ ಇಲಾಖೆಯಿಂದ ದೊರೆಯಬೇಕಾದ ಸೌಲಭ್ಯ ಗಳು ದೊರೆತಿಲ್ಲ ಎಂದು ಕಾರ್ಮಿಕರು ತಮ್ಮ ಅಳಲನ್ನು ತೋಡಿ ಕೊಂಡರು. ಅರ್ಜಿ ಸ್ವೀಕಾರ ಮಾಡಿದ ಮೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಹತ್ತು ದಿನಗಳ ಒಳಗೆ ಕಾರ್ಮಿಕರಿಗೆ ನ್ಯಾಯ ಸಿಗದಿದ್ದರೆ ಮೆಸ್ಕಾಂ ಕಚೇರಿಯ ಎದುರು ಅರೆಬೆತ್ತಲೆ ಪ್ರತಿಭಟನೆ ಮಾಡಲಾ ಗುವುದು ಎಂದು ಸಂಘಟನೆಯ ಸಲಹೆಗಾರ ದಿನಕರ ಶೆಟ್ಟಿ ತಿಳಿಸಿದ್ದಾರೆ.

ಪ್ರತಿಭಟನಾ ಪ್ರದರ್ಶನದಲ್ಲಿ ದ.ಕ. ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ ಶೆಟ್ಟಿ, ಕಾರ್ಮಿಕ ಸಂಘಟನೆಯ ಮುಖಂಡರಾದ ಜಯರಾಮ್, ಕರುಣಾಕರ, ಉದಯ, ಗೋಪಾಲಕೃಷ್ಣ, ಸದಾಶಿವ, ಗಣೇಶ್, ಚಂದ್ರಶೇಖರ, ಲೋಕೇಶ್, ಪುನೀತ್, ಸಿದ್ದೀಕ್, ಸಿರಾಜುದ್ದೀನ್ ಮತ್ತಿತರರು ಭಾಗವಹಿಸಿದ್ದರು.