- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಾಟಕಕಾರ, ತುಳುರಂಗ ಭೂಮಿಯ ಹಿರಿಯ ನಟ ನಿರ್ದೇಶಕ ಮಾಧವ ಜಪ್ಪು ಪಟ್ನ ನಿಧನ

Madhava jappu patna [1]ಮಂಗಳೂರು : ತುಳು ರಂಗ ಭೂಮಿಯ ಹಿರಿಯ ನಟ, ನಿರ್ದೇಶಕ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ಮೊಕ್ತೇಸರ ಮಾಧವ ಜಪ್ಪು ಪಟ್ನ (66 ವ.) ಗುರುವಾರ ನಿಧನರಾದರು.

ಜಪ್ಪು ಪಟ್ನ ಅವರಿಗೆ ಜ್ವರಕಾಣಿಸಿಕೊಂಡು ಆಮ್ಲಜನಕದ ಮಟ್ಟ ಕಡಿಮೆಯಾಗಿ ಇಂಡಿಯಾನ ಆಸ್ಪತ್ರೆಗೆ ದಾಖಲಾಗಿ ಕಳೆದ 24 ದಿನಗಳಿಂದ  ಚಿಕಿತ್ಸೆ ಪಡೆಯುತ್ತಿದ್ದರು, ಅದಾಗಲೇ ಕೋವಿಡ್ ಸೋಂಕಿನಿಂದ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಗುರುವಾರ ಇಹಲೋಗ ತ್ಯಜಿಸಿದರು.

ಮಾಧವ ಜಪ್ಪು ಪಟ್ನ ಅವರು ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಕುದ್ರೋಳಿ ಶ್ರೀ ಭಗವತೀ ತೀಯಾ ಸೇವಾ ಸಂಘದ , ನವನಿಧಿ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾಗಿ ಸೇವೆಸಲ್ಲಿಸುತಿದ್ದು, ತುಳು ರಂಗ ಭೂಮಿಯ ಹಿರಿಯ ಕಲಾವಿದರಾಗಿ ಅಸಂಖ್ಯ ಪ್ರತಿಭೆಗಳನ್ನು ಬೆಳಕಿಗೆ ತಂದು ರಾಜ್ಯ ಪ್ರಶಸ್ತಿ ಯನ್ನೊಳಗೊಂಡಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಿರುದುಗಳನ್ನು ಪಡೆದಿದ್ದಾರೆ.

ಹನ್ನೆರಡು ವರ್ಷದ  ವಿದ್ಯಾರ್ಥಿ ದೆಸೆಯಲ್ಲಿ ಜಿಲ್ಲಾಮಟ್ಟದ  ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಭಕ್ತ ಮಾರ್ಕಂನ್ಡೇಯ  ನಾಟಕದಲ್ಲಿ ಅಭಿನಯಿಸಿದ ಯಮನ ಪಾತ್ರಕ್ಕೆ ಅತ್ಯುತ್ತಮ ನಟ ಗೌರವ  ಪ್ರಶಸ್ತಿ ಸಿಕ್ಕಿತ್ತು.

ಮಾಧವ ಜಪು ಪಟ್ನ ಅವರು 8 ನಾಟಕಗಳನ್ನು ರಚಿಸಿದ್ದು ಪೆದ್ದ ಗುಂಡೆ, ಪೂರಾ ಡೋಂಗಿಲು, ಈ ಬಲ್ಲ್ ಯಾವ, ಪೊರ್ಲುಗು ಮಾರ್ಲಾಂಡ, ಸಜ್ಜಿಗೆ ಬಜಿಲ್,  ಅಂಡೆ  ಪಿರ್ಕಿಲು, ಬಂಗಾರ್ ಕಂಡನಿ, ಲೆಕ್ಕತತ್ತುಂಡ್,  ಪ್ರಮುಖ ನಾಟಕಗಳು.

ಪೆದ್ದ ಗುಂಡ ನಾಟಕದಲ್ಲಿ ಪೆದ್ದಗುಂಡನ ಪಾತ್ರ,  ಮಸ್ಕಿರಿ ಮಲ್ಪೋರ್ಚಿ ನಾಟಕದಲ್ಲಿ ಸಂಕುವಿನ ಪಾತ್ರ, ಕರಿಯೇ ಕಟ್ಟಿ ಕರಿಮಣಿ ನಾಟಕದಲ್ಲಿ ಕರಿಯನ ಪಾತ್ರ, ಬಂಗಾರ್ ಕಂಡನಿ  ನಾಟಕದಲ್ಲಿ ಕುಡುಕ ಬಾಬುವಿನ ಪಾತ್ರ, ಈ ಬಲ್ಲ್  ಯಾವ ನಾಟಕದಲ್ಲಿ ಕಿಟ್ಟನ ಪಾತ್ರ ಮೂಲಕ ತುಳು ನಾಟಕಗಳ ಪಾತ್ರಗಳಿಗೆ ಜೀವ ತುಂಬಿದ್ದರು.

ಬಂಗಾರ್ ಪಟ್ಲೇರ್ ತುಳು ಸಿನಿಮಾದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪಾತ್ರವನ್ನು ನಿರ್ವಹಿಸಿ ಜನ ಮೆಚ್ಚುಗೆ ಪಡೆದಿದ್ದರು.

ಸಾಲಿಯಾನ್ ಕುಟುಂಬದ ಗುಳಿಗಜ್ಜ ದೈವದ ಕಟ್ಟುಕಟ್ಟಳೆಗಳನ್ನು ಅವರು ಪ್ರಮುಖವಾಗಿ ನಿರ್ವಹಿಸುತ್ತಿದ್ದರು.

ಮೃತರು ಪತ್ನಿಹೇಮಲತಾ, ಇಬ್ಬರು ಮಕ್ಕಳಾದ ಪವನ್, ಪ್ರಣಾಮ್ ಸೊಸೆ ಅರ್ಚನಾ, ಇಬ್ಬರು ಅಣ್ಣಂದಿರು, ಓರ್ವ ತಮ್ಮ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ

ಮೃತರ ಪಾರ್ಥಿವ ಶರೀರದ ಅಂತ್ಯ ಕ್ರಿಯೆ ಇಂದು ಅಪರಾಹ್ನ 1  ಗಂಟೆಗೆ ನಂದಿ ಗುಡ್ಡೆ ರುದ್ರ ಭೂಮಿಯಲ್ಲಿ ನಡೆಯಲಿದೆ.

Madhava jappu patna [2]

Madhava jappu patna [3]