ದೇವರಗುಂಡಿ ಫಾಲ್ಸ್​​​ನಲ್ಲಿ ಅರೆಬೆತ್ತಲೆ ಫೋಟೊ ಶೂಟ್, ಸ್ಥಳೀಯರ ಆಕ್ರೋಶ

10:28 PM, Thursday, October 29th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Devaragundi ಸುಳ್ಯ: ಸಾಕ್ಷಾತ್ ಶಿವನೇ ಸ್ನಾನಕ್ಕೆ ಬರುತ್ತಿದ್ದ ಎನ್ನುವ ನಂಬಿಕೆ ಇರುವ  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದಲ್ಲಿರುವ ದೇವರಗುಂಡಿ ಫಾಲ್ಸ್ನಲ್ಲಿ ಬೆಂಗಳೂರು ಮೂಲದ ಇಬ್ಬರು ಮಾಡೆಲ್ಗಳು ಅರೆಬೆತ್ತಲೆಯಾಗಿ ಫೋಟೊ ಶೂಟ್ ನಡೆಸಿರುವ ಆರೋಪ ಕೇಳಿಬಂದಿದೆ.

ಈ ಫೋಟೊಗಳು  ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸುಳ್ಯದ ತೋಡಿಕಾನ ಸಮೀಪ ಇರುವ ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನ ಬಳಿ ಇರುವ ಈ ದೇವರಗುಂಡಿ ಫಾಲ್ಸ್ನಲ್ಲಿ ಮಾಡೆಲ್ಗಳು ಫೋಟೊ ಶೂಟ್ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಐತಿಹ್ಯಗಳ ಪ್ರಕಾರ ದೇವರಗುಂಡಿಯಲ್ಲಿ ಸಾಕ್ಷಾತ್ ಶಿವನೇ ಸ್ನಾನಕ್ಕೆ ಬರುತ್ತಿದ್ದ ಎನ್ನುವ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಭಕ್ತರಾಗಲಿ ಅಥವಾ ಸ್ಥಳೀಯರಾಗಲಿ ಈ ಫಾಲ್ಸ್ನಲ್ಲಿ ಸ್ನಾನ ಮಾಡುವುದಿಲ್ಲ.

ಇಂತಹ ಪವಿತ್ರ ಸ್ಥಳದಲ್ಲಿ ಬೆಂಗಳೂರಿನ ಇಬ್ಬರು ಮಾಡೆಲ್ ಅರೆಬೆತ್ತಲಾಗಿದ್ದಕ್ಕೆ ಸ್ಥಳೀಯರು ಕಿಡಿಕಾರಿದ್ದಾರೆ. ಈ ಕುರಿತಾಗಿ ಸ್ಥಳೀಯರು ದೇಗುಲದ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆದರೆ ಆ ಜಾಗ ದೇವಸ್ಥಾನದ ವ್ಯಾಪ್ತಿಗೆ ಬರುವುದಿಲ್ಲವೆಂದು ಆಡಳಿತ ಮಂಡಳಿಯವರು ಸ್ಪಷ್ಟಪಡಿಸಿದ್ದಾರೆ.

Devaragundi

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English