ಹೆಣ್ಣು ಮಗಳ ಮಾನ ಉಳಿಸಿದ ಆತ ಈಗ ಅಸಹಾಯಕ

7:25 PM, Wednesday, November 4th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

dinesh kottinja ಮಂಗಳೂರು : ಕುಂಪನಮಜಲು ಎಂಬಲ್ಲಿ ಹಿಂದೂ ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರಕ್ಕೆ ಮುಂದಾದ ನಾಲ್ವರು ನೀಚರ ಬಗ್ಗೆ ಪೊಲೀಸರಿಗೆ ಮಾಹಿತಿ  ನೀಡಿ ಮಾರಣಾಂತಿಕ ಹಲ್ಲೆ ಗೊಳಗಾದ ಫೋಟೋಗ್ರಾಫರ್ ದಿನೇಶ್ ಕೊಟ್ಟಿಂಜೆ ಈಗ ಎಲ್ಲವನ್ನು ಕಳಕೊಂಡು ಅಸಹಾಯಕರಾಗಿದ್ದಾರೆ.

ಅಕ್ಟೊಬರ್ 28ರಂದು ಫೋಟೋ ತೆಗೆಯುವ ನೆಪದಲ್ಲಿ ಸ್ಟುಡಿಯೋಗೆ  ಬಂದು ದಿನೇಶ್ ಅವರ ಹೊಟ್ಟೆಗೆ ಇರಿದು, ತಲೆಯಭಾಗಕ್ಕೆ ಹೊಡೆದು, ಅವರ ಬಲಗೈ ಹೆಬ್ಬೆರಳನ್ನು ಕತ್ತರಿಸಲಾಗಿತ್ತು. ಅವರು ಆಸ್ಪತ್ರೆಗೆ ದಾಖಲಾಗಿ ಆರುದಿನಗಳ ವರೆಗೆ ಅವರು ಬದುಕುಳಿಯುವ ಭರವಸೆ ಇರಲಿಲ್ಲ. ಈಗ ಚೇತರಿಸಿಕೊಂಡರು ಅವರು ಮುಂದಿನಂತಾಗಲು ಸಾಧ್ಯವಿಲ್ಲ. ಅವರು ಕೆಲಸ ಮಾಡಲು ಅಗತ್ಯವಿರುವ ಹೆಬ್ಬರಲೇ ಇಲ್ಲ. ಆರ್ಥಿಕವಾಗಿ ಹಿಂದುಳಿದ ಅವರ ಚಿಕಿತ್ಸೆಗೆ ಹಣದ ಕೊರತೆ ಕಾಡುತ್ತಿದೆ.

ಆಸ್ಪತ್ರೆಗೆ ದಾಖಲಾಗುವಾಗ ಎಂ ಎಲ್ ಎ  ಭರತ್ ಶೆಟ್ಟಿ ಯವರು 50 ಸಾವಿರ ಕೊಟ್ಟಿದ್ದರು, ಗೆಳೆಯರೆಲ್ಲ ಸೇರಿ ಒಂದು ಲಕ್ಷ ಸೇರಿಸಿದ್ದಾರೆ, ತಕ್ಷಣಕ್ಕೆ ಆಸ್ಪತ್ರೆಯ ಬಿಲ್ ಕಟ್ಟಲು ಐದು ಲಕ್ಷ ಬೇಕು. ಅವರು ಚೇತರಿಸಿದರೂ  ಅವರು ಬದುಕುಳಿಯಲು ಮುಂದಿನ ಚಿಕಿತ್ಸೆಗೆ ಹತ್ತು ಲಕ್ಷ ರೂಪಾಯಿಗಳು ಬೇಕು ಎಂದು  ಅವರ ಆಪ್ತ ಮೂಲಗಳು ಹೇಳಿದೆ.

ದಿನೇಶ್ ಅವರ ತಾಯಿ ಮಲಗಿದಲ್ಲಿಯೇ ಇದ್ದು  ಅವರನ್ನು ದಿನೇಶ್ ಅವರೇ ಸ್ನಾನ ಮಾಡಿಸಿ ಆರೈಕೆ ಮಾಡುತ್ತಿದ್ದರು. ಮಗ ಆಸ್ಪತ್ರೆ ಸೇರಿದ ನಂತರ ಅವರ ಸ್ಥಿತಿಯೂ ಚಿಂತಾಜನಕವಾಗಿದೆ. ಹೆಂಡತಿ ಕೇರಳದಲ್ಲಿ ಕೆಲಸಮಾಡುತ್ತಿದ್ದಾರೆ. ಮಗಳು ತ್ರಿಷಾ ಕೂಡ ಅಪ್ಪ ಜೊತೆಗಿಲ್ಲದೆ ಅಸಹಾಯಕಳಾಗಿದ್ದಾಳೆ.

ನೋಡಿ, ದುರುಳರ ಅಟ್ಟಹಾಸ ಒಂದು ಕುಟುಂಬವನ್ನು ಯಾವ ಸ್ಥಿತಿಗೆ ತಂದಿದೆ ಎಂದು. ಒಬ್ಬ ಹುಡುಗಿಯ ಮೇಲೆ ಅತ್ಯಾಚಾರ ಮಾಡುವುದನ್ನು ತಡೆದವರಿಗೆ ಈ ರೀತಿ ಶಿಕ್ಷೆಯಾದರೆ, ಸಮಾಜದಲ್ಲಿ ಹೆಣ್ಣು ಮಕ್ಕಳು ಬದುಕುವುದು ಹೇಗೆ ಎಂಬ ಪ್ರಶ್ನೆ ಮೂಡಿದೆ ಎಂದು ಅವರ ಗೆಳೆಯರು ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಆ ಕುಟುಂಬಕ್ಕೆ ಸಾಂತ್ವನ ದ ಜೊತೆಗೆ ಕೈ ಜೋಡಿಸಬೇಕಾದ ಅಗತ್ಯವಿರುವುದರಿಂದ ತಾವೆಲ್ಲರೂ ತಮ್ಮಿಂದ ಸಾಧ್ಯವಾದ ಮೊತ್ತವನ್ನು ಈ ಕೆಳಗಿನ ಖಾತೆಗೆ ಜಮಾ  ಮಾಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.

Ac no 09662010001020
Ifsc code ORBC0100966
Ac name dinesh R Shetty
Oriental bank of commerce
Google pay number..9449591780

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English