- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ಪ್ರಥಮ ಹಿಂದು ದೇವಾಲಯ ನಿರ್ಮಾಣ

Hindu Temple [1]ಅಬುಧಾಬಿ: ಮುಸ್ಲಿಂ ರಾಷ್ಟ್ರ ಅಬುಧಾಬಿಯಲ್ಲಿ ನಿರ್ಮಾಣವಾಗುತ್ತಿರುವ ಪ್ರಥಮ ಹಿಂದು ದೇವಾಲಯ ಅಂತಿಮ ರೂಪ ಪಡೆದಾಗ ಹೇಗಿರಲಿದೆ ಎಂದು ತಿಳಿಯುವಂತಾಗಲು ದೇವಳದ ಅಂತಿಮ ವಿನ್ಯಾಸದ ಚಿತ್ರಗಳನ್ನು ಆಡಳಿತ ಮಂಡಳಿ- ಬಿಎಪಿಎಸ್ ಹಿಂದು ಮಂದಿರ್ ಬಿಡುಗಡೆಗೊಳಿಸಿದೆ.

ಈ ಕುರಿತಾದ ವೀಡಿಯೋವೊಂದು ದೇವಳ ನಿರ್ಮಾಣದ ಆರಂಭದಿಂದ ಹಿಡಿದು ಪ್ರಸಕ್ತ ನಿರ್ಮಾಣ ಹಂತದ ತನಕದ ಚಿತ್ರಣವನ್ನು ನೀಡುತ್ತದೆ.

ಅಬುಧಾಬಿಯ ಅಬು ಮುರೇಖಾಹ್ ಪ್ರದೇಶದಲ್ಲಿ ತಲೆಯೆತ್ತುತ್ತಿರುವ ಈ ದೇವಸ್ಥಾನದ ಎದುರುಗಡೆ ದೊಡ್ಡ ಸಭಾಂಗಣವಿರಲಿದ್ದು ಜತೆಗೆ ಅಲ್ಲಿ ಗ್ರಂಥಾಲಯ,  ಧಾರ್ಮಿಕ ಸಭಾಂಗಣ  ಹಾಗೂ ಸಮುದಾಯ ಕೇಂದ್ರವೂ ಇರಲಿದೆ. ದೇವಳದ ಪ್ರವೇಶದ್ವಾರದ ಮೆಟ್ಟಿಲುಗಳ ಸುತ್ತ ನೀರಿನ ಝರಿ ಹಾಗೂ ದೇವಳ ಕಾಂಪ್ಲೆಕ್ಸ್ ಸುತ್ತಲೂ ಕೊಳಗಳಿವೆ.

ರಾಜಸ್ಥಾನ ಹಾಗೂ ಗುಜರಾತ್ ರಾಜ್ಯದ ಕುಶಲಕರ್ಮಿಗಳು ಈ ದೇವಳಕ್ಕಾಗಿ ಆಕರ್ಷಕ ಕಲ್ಲಿನ ಕೆತ್ತನೆ ನಡೆಸಿದ್ದಾರೆ.

ಹಿಂದು ಧರ್ಮಗ್ರಂಥಗಳು, ಭಾರತದ ಪೌರಾಣಿಕ ಪ್ರಸಂಗಗಳನ್ನಾಧರಿಸಿದ ಕೆತ್ತನೆಗಳಿಂದ ಈ ಅಬುಧಾಬಿಯ ಹಿಂದು ದೇವಳ ಕಂಗೊಳಿಸಲಿದೆ.

Hindu Temple [2]

Hindu Temple [3]