- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎಲ್ಲಾ ಬೂತ್‌ಗಳಲ್ಲಿಯೂ ಒಂದೇ ರೀತಿಯಲ್ಲಿ ಮತದಾನ ನಡೆದಿರುವ ಬಗ್ಗೆ ಅನುಮಾನವಿದೆ : ಡಿ.ಕೆ. ಶಿವಕುಮಾರ್

DK Shivakumar [1]ಮಂಗಳೂರು : ನಾವು ಯಾರಲ್ಲೂ ಕೇಳಿದರೂ ವಿದ್ಯಾವಂತರೆಲ್ಲಾ ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದಾಗಿ ಹೇಳುತ್ತಾರೆ. ಹಾಗಾಗಿ ಮತದಾರರು ಹೇಳಿದರಲ್ಲಿ ತಪ್ಪಿದೆಯಾ, ಮತದಾನ ಬಿದ್ದಿರುವುದರಲ್ಲಿ ತಪ್ಪಿದೆಯಾ ಎಂಬ ಬಗ್ಗೆ ವ್ಯಾಪಕವಾದ ತನಿಖೆ ನಮ್ಮ ವತಿಯಿಂದ ಮಾಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲನ್ನು ಒಪ್ಪಿದ್ದೇವೆ. ಆದರೆ ಚುನಾವಣೆಯಲ್ಲಿ ಯಾವ ರೀತಿ ಅಕ್ರಮವಾಗಿದೆ, ದುರುಪಯೋಗವಾಗಿದೆ, ಯಾವ ರೀತಿಯಲ್ಲಿ ಹಣ ಹಂಚಿಕೆಯಾಗಿದೆ ಎಂಬ ಕುರಿತಾದ ಎಲ್ಲಾ ರೀತಿಯ ಮಾಹಿತಿ ಇದೆ. ಅದರ ಬಗ್ಗೆ ವ್ಯಾಪಕವಾದ ಚರ್ಚೆ ಮಾಡುತ್ತೇವೆ ತನಿಖೆ ನಮ್ಮ ವತಿಯಿಂದ ಮಾಡಿಸಲಾಗುವುದು ಎಂದರು.

ಬಹಳಷ್ಟು ಮಂದಿ ಇವಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ತಜ್ಞರಲ್ಲಿ ಈ ಕುರಿತು ಚರ್ಚೆ ಮಾಡಲಾಗುವುದು. ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಎಲ್ಲಾ ಬೂತ್‌ಗಳಲ್ಲಿಯೂ ಒಂದೇ ರೀತಿಯಲ್ಲಿ ಮತದಾನ ನಡೆದಿರುವ ಬಗ್ಗೆ ಅನುಮಾನವಿದೆ ಎಂದು ಅವರು ಹೇಳಿದರು.

ಡಿ.ಕೆ.ಶಿವಕುಮಾರ್‌ರಿಂದ ಸಂಪತ್ ರಾಜ್ ರಕ್ಷಣೆಯೆಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ ವಿಚಾರ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಳಿನ್ ‌ಕುಮಾರ್ ಗೃಹ ಸಚಿವರೇ ಎಂದು ಪ್ರಶ್ನಿಸಿದ್ದಾರೆ.

ಡಿಕೆ ಶಿವಕುಮಾರ್ ಅವರನ್ನು ಈಗಾಗಲೇ ಬಂಧಿಸಿದ್ದಾರೆ. ಮತ್ತೆ ಬಂಧಿಸಬಹುದಲ್ಲಾ ? ತೊಂದರೆ ಕೊಡುವುದಕ್ಕಾಗಿಯೇ ಇದೆಲ್ಲಾ ಮಾಡುತ್ತಿರುವುದೆಂಬ ಅರಿವಿದೆ. ನೋಟಿಸುಗಳು ಮತ್ತೆ ಬಲಾರಂಭಿಸಿವೆ ಎಂದವರು ಹೇಳಿದರು.

ನಳಿನ್ ಕುಮಾರ್ ಹೇಳುವುದೆಲ್ಲಾ ಸುಳ್ಳಿನ ಕಂತೆ. ಅವರು ಬದುಕಿರುವವರೆಗೂ ಅವರದ್ದೇ. ಮಾನವ ಜೀವನ ಇರುವವರೆಗೂ ನಳಿನ್ ಕುಮಾರ್ ಪಕ್ಷವೇ ಇರಲಿದೆ. ಬರೇ 10 ವರ್ಷ ಯಾಕೆ, ನೂರಾರು ವರ್ಷ ಅವರೇ ಇರಲಿ ಎಂದು ಡಿಕೆಶಿ ಅವರು ನಳಿನ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.