ಮುಂಬೈಯಲ್ಲಿ ಉಗ್ರರು ಹಲವಾರು ಮಂದಿಯನ್ನು ಬಲಿ ಪಡೆದ ದಿನವೇ ಮಂಗಳೂರಿನಲ್ಲಿ ಗೋಡೆ ಬರಹ : ಎಬಿವಿಪಿ ಖಂಡನೆ

11:18 PM, Saturday, November 28th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Abvp Protest ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಅಪಾರ್ಟ್‌ಮೆಂಟ್‌ನ ಆವರಣ ಗೋಡೆಯಲ್ಲಿ ಉಗ್ರ ಸಂಘಟನೆಗಳ ಪರ ಬರಹ ಪ್ರಕರಣವನ್ನು ಖಂಡಿಸಿ ನಗರದ ಸರ್ಕೀಟ್ ಹೌಸ್ ಮುಂಭಾಗ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ದೊಂದಿ ಹಿಡಿದು ದೇಶದ್ರೋಹಿಗಳ ವಿರುದ್ಧ ಘೋಷಣೆ ಕೂಗಿದರು.

2008 ನ.26ರಂದು ಪಾಕಿಸ್ತಾನದ ಲಷ್ಕರ್ ಇ ತೊಯ್ಬಾ ಉಗ್ರರ ಕೃತ್ಯದಿಂದ ಮುಂಬೈ ಮಹಾನಗರದಲ್ಲಿ ಸೈನಿಕರು, ಪೊಲೀಸರು ಸೇರಿ ಹಲವಾರು ಮಂದಿ ಮೃತಪಟ್ಟ ದಿನ. ಅದೇ ದಿನ ದೇಶದ್ರೋಹಿಗಳು ಉಗ್ರರ ಪರ ಬರಹ ಪ್ರಕಟಿಸಿರುವುದು ಸಂಶಯಕ್ಕೀಡು ಮಾಡಿದೆ. ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕಾದ ದಿನ ಉಗ್ರರ ಪರ ಗೋಡೆ ಬರಹದ ಮೂಲಕ ದೇಶದ್ರೋಹಿಗಳು ಮಂಗಳೂರಿನ ಶಾಂತಿ ಕದಡುವ ವಿಕೃತಿ ಮೆರೆದಿದ್ದಾರೆ. ಘಟನೆಯ ಹಿಂದೆ ಇರುವವರನ್ನು ತಕ್ಷಣ ಬಂಧಿಸದೇ ಇದ್ದಲ್ಲಿ ಮುಂದೆ ಇಂತಹ ಘಟನೆಗಳು ಮರುಕಳಿಸಿ ದೊಡ್ಡ ಅನಾಹುತವೇ ಸಂಭವಿಸಬಹುದು. ಈ ನಿಟ್ಟಿನಲ್ಲಿ ವಿಶೇಷ ತಂಡ ರಚಿಸಿ ಘಟನೆಗೆ ಕಾರಣರಾದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ನಗರ ಕಾರ್ಯದರ್ಶಿ ಮಣಿಕಂಠ ಕಳಸ, ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಸಂದೇಶ್ ರೈ ಮಜಕ್ಕಾರ್, ಜಿಲ್ಲಾ ಸಂಚಾಲಕ ಹರ್ಷಿತ್ ಕೊಯ್ಲ, ನಗರ ಸಂಘಟನಾ ಕಾರ್ಯದರ್ಶಿ ಅಜಯ್ ಪ್ರಭು, ರಾಜ್ಯ ಕಾರ್ಯಕಾರಿಣಿ ಸದಸ್ಯ ನಿಷಾನ್ ಆಳ್ವ, ವಿದ್ಯಾರ್ಥಿ ನಾಯಕರಾದ ದಿನೇಶ್, ಅಖಿಲೇಶ್, ಆದಿತ್ಯ ಕೆ.ಆರ್., ಕಿರಣ್, ಸಂತೋಷ್, ಆದಿತ್ಯ ಶೆಟ್ಟಿ, ಕೀರ್ತನ್, ಆಕಾಶ್ ಮುಂತಾದವರು ಉಪಸ್ಥಿತರಿದ್ದರು.

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English