- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಡವರ್ಗಕ್ಕೆ ಆರ್ಥಿಕ ನೆರವು ನೀಡುವ ಮುಂಚೂಣಿ ಸಂಘಟನೆ ಬಿರುವೆರ್ ಕುಡ್ಲ

Biruver Kudla [1]ಮಂಗಳೂರು : ಕಳೆದ ಆರು ವರ್ಷಗಳಲ್ಲಿ ಜಾತಿ ಬೇದವಿಲ್ಲದೆ ನೂರಾರು ಕುಟುಂಬಗಳಿಗೆ 1.80 ಕೋಟಿಗೂ ಮಿಕ್ಕಿ ಆರ್ಥಿಕ  ನೆರವು ನೀಡುವ ಮೂಲಕ ಅಲ್ಪಾವಧಿಯಲ್ಲಿ ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಸಂಘಟನೆ ಮುಂಚೂಣಿಯಲ್ಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರಿನಲ್ಲಿ ಸಂಘಟನೆ ವತಿಯಿಂದ ಮೂರು ಕುಟುಂಬಗಳಿಗೆ ಆರ್ಥಿಕ  ನೆರವು ವಿತರಿಸಿ ಮಾತನಾಡಿದರು.

ಶಾಸಕ ಡಾ.ಭರತ್ ಶೆಟ್ಟಿ ವೈ ಮಾತನಾಡಿ, ಅನಾರೋಗ್ಯ ಪೀಡಿತರಿಗೆ, ಮಕ್ಕಳ ಶಿಕ್ಷಣಕ್ಕಾಗಿ, ಅಂಗವಿಕಲರಿಗೆ ಸಲಕರಣೆ ಸಹಿತ ಹಲವು ಸೌಲಭ್ಯವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸಹಿತ ಎಲ್ಲಾ ಕುಟುಂಬಗಳಿಗೆ ವಿತರಿಸಿ ಅರ್ಹವಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ. ಇವರ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದರು. ಮೇಯರ್ ದಿವಾಕರ ಪಾಂಡೇಶ್ವರ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಅವರು ಶುಭಕೋರಿದರು.

ಕಾಲು ಮತ್ತು ಸೊಂಟದ ಸಮಸ್ಯೆ ಬಳಲುತ್ತಿರುವ ಲೋಕೇಶ್, ಕಿಡ್ನಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಬದ್ರುದ್ದೀನ್, ಪುರಂದರ ಅವರಿಗೆ ಒಟ್ಟು 1.5 ಲಕ್ಷ ರೂ. ನೆರವು ವಿತರಿಸಲಾಯಿತು.

ಉದ್ಯಮಿ ವೆಂಕಟೇಶ್ ಭಂಡಾರಿ, ಕುದ್ರೋಳಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಸಾಯಿ ರಾಮ್, ಉದ್ಯಮಿ ರವೀಂದ್ರ ನಿಕ್ಕಮ್, ಬಿರುವೆರ್ ಕುಡ್ಲ ಸ್ಥಾಪಕ ಉದಯಪೂಜಾರಿ ಬಳ್ಳಾಲ್ಬಾಗ್, ಕೇಂದ್ರ ಘಟಕದ ಅಧ್ಯಕ್ಷ ರಾಕೇಶ್ ಪೂಜಾರಿ ಬಳ್ಳಾಲ್ಬಾಗ್ , ಮಂಗಳೂರು ಘಟಕದ ಅಧ್ಯಕ್ಷ ರಾಕೇಶ್ ಸಾಲಿಯಾನ್,ವೆಂಕಟೇಶ್ ಭಂಡಾರಿ, ಅನಿಲ್ ಸುವರ್ಣ ಬೋಳೂರು,ಕಿಶೋರ್ ಬಾಬು, ವಿನ್ನು ಶೆಟ್ಟಿ ತಲಪಾಡಿ, ಮನೋಜ್ ಕುಮಾರ್, ಅಶ್ರಫ್ ಅಲಿ ಕಾರ್ಕಳ, ಸುರೇಶ್ ಪೂಜಾರಿ, ಉದ್ಯಮಿ ಬಾಬ ಅಲಂಕಾರ್, ಮಾಧವ ಸುವರ್ಣ, ಶೇಖರ ಪೂಜಾರಿ, ವಸಂತ ಜೆ.ಪೂಜಾರಿ, ಲಕ್ಷ್ಮೀಶ್ ಸುವರ್ಣ, ಲಿಖಿತ್ ಕೋಟ್ಯಾನ್ ಕಾವೂರು, ಅಮಿತ್ ರಾಜ್ ಕೋಡಿಕಲ್, ಸೂರಜ್ ಕಲ್ಯ, ಲತೀಶ್ ಪೂಜಾರಿ ಬಳ್ಳಾಲ್ಬಾಗ್ ,ಲೋಹಿತ್ ಗಟ್ಟಿ, ರಾಮ್ ಎಕ್ಕೂರು ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.