- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟ ರೂ.850.27 ಕೋಟಿ ವಹಿವಾಟು ಮಾಡಿ ರೂ.707.16ಲಕ್ಷ ನಿವ್ವಳ ಲಾಭ

Raviraja Hegde [1]ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಉತ್ಪಾದಕರ ಒಕ್ಕೂಟ ನಿ, ಕುಲಶೇಖರ, ಮಂಗಳೂರು  ಒಕ್ಕೂಟದ ಸರ್ವ ಸದಸ್ಯರ (ವರ್ಚುವಲ್ ಕಾನ್ಫ್ಪರೆನ್ಸ್) ವಾರ್ಷಿಕ ಸಾಮಾನ್ಯ ಸಭೆ ದಿನಾಂಕ 05-12-20220 ರಂದು ನಡೆಯಿತು .

ಒಕ್ಕೂಟದ ಅಧ್ಯಕರಾದ ಶ್ರೀ ರವಿರಾಜ ಹೆಗ್ಡೆಯವರು ಸಭೆಯ ಅಧ್ಯಕ್ಷತೆಯನ್ನು  ವಹಿಸಿ ಮಾತಾನಾಡುತ್ತಾ, ವರದಿ ಸಾಲಿನಲ್ಲಿ ಒಕ್ಕೂಟವು ಅಭಿವೃದ್ಧಿ ಪಥದತ್ತ ಸಾಗುವ ಬಗ್ಗೆ ವಿವರಿಸುತ್ತಾ, 2019-20 ನೇ ಸಾಲಿನಲ್ಲಿ ಸರಾಸರಿ 602 ಕೆ.ಜಿ.ಯಂತೆ 726  ಸಂಘಗಳಿಂದ ದಿನಂಪ್ರತಿ 436936 ಕೆ.ಜಿ. ಹಾಲಿನ ಸಂಗ್ರಹಣೆ ಮಾಡಲಾಗಿದೆ. ಒಟ್ಟಾರೆ ಶೇ. 4.25 ರ ಪ್ರಗತಿಯೊಂದಿಗೆ ರೂ.850.27 ಕೋಟಿ ವಹಿವಾಟು ಮಾಡಿ ರೂ.707.16  ಲಕ್ಷ ನಿವ್ವಳ ಲಾಭ ಗಳಿಸಿ ಶೇ.12 ರಷ್ಟು ಡಿವಿಡೆಂಡ್ ಮತ್ತು ಶೇ.25 ರ ಬೋನಸ್ ನ್ನು ಸದಸ್ಯರಿಗೆ ನೀಡಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಶ್ರೀ ರವಿರಾಜ ಹೆಗ್ಡೆಯವರು ತಿಳಿಸಿದರು.

ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಉಡುಪಿ ಡೈರಿ ನಿರ್ಮಾಣಕ್ಕೆ ರೂ.10.00 ಕೋಟಿ ಅನುದಾನದ ಮೊತ್ತದಲ್ಲಿ ಬಾಕಿ ಉಳಿದಿರುವ ರೂ.2.50 ಕೋಟಿ ಮೊತ್ತವನ್ನು  2019-20 ನೇ ಸಾಲಿನಲ್ಲಿ ಬಿಡುಗಡೆಗೊಳಿಸಿದಕ್ಕೆ, ಕ.ಹಾ.ಮ. ದ ಆಧ್ಯಕ್ಷರು, ಆಡಳಿತ ಮಂಡಲಿ ಸದಸ್ಯರು ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಸಮಸ್ತ ಹಾಲು ಉತ್ಪಾದಕರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಭೆಯಲ್ಲಿ ತಿಳಿಸಿದರು.

2019-20 ನೇ ಸಾಲಿನಲ್ಲಿ ತಾಲೂಕುವಾರು ಮತ್ತು ಜಿಲ್ಲಾವಾರು ಉತ್ತಮ ಸಂಘಗಳಿಗೆ, ಜಿಲ್ಲಾವಾರು ಒಕ್ಕೂಟದ ಉತ್ತಮ ಮಹಿಳಾ ಸಂಘಗಳು, ಜಿಲ್ಲಾವಾರು ಉತ್ತಮ ಬಿ.ಎಂ.ಸಿ., ಒಕ್ಕೂಟದ ಉತ್ತಮ ಹೈನುಗಾರರು, ಒಕ್ಕೂಟದ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರು, ಉತ್ತಮ ಗುಣಮಟ್ಟದ ಸಂಘಗಳು (ತಾಲೂಕುವಾರು), ಮಧ್ಯಮ ವರ್ಗದ ಉತ್ತಮ ಹೈನುಗಾರರು (ತಾಲೂಕುವಾರು), ಹಸಿರುವ ಮೇವು ಅಭಿವೃದ್ಧಿ ಪಡಿಸಿದ ಉತ್ತಮ ಹೈನುಗಾರರಿಗೆ (ತಾಲೂಕುವಾರು) ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ವಿತರಿಸಲಾಯಿತು.

1.ತಾಲೂಕುವಾರು ಉತ್ತಮ ಸಂಘಗಳು ಕ್ರ.ಸಂ ತಾಲೂಕು ಶ್ರೇಣಿ ವಿವರ
೧. ಮಂಗಳೂರು ಪ್ರಥಮ ಕಡಂದಲೆ ಹಾಲು ಉತ್ಪಾದಕರ ಸಹಕಾರ ಸಂಘ – ಕಡಂದಲೆ
೧. ದ್ವಿತೀಯ ತಾಕೊಡೆ ಹಾಲು ಉತ್ಪಾದಕರ ಸಹಕಾರ ಸಂಘ – ತಾಕೊಡೆ
೨. ಬಂಟ್ವಾಳ ಪ್ರಥಮ ವಗ್ಗ ಹಾಲು ಉತ್ಪಾದಕರ ಸಹಕಾರ ಸಂಘ – ವಗ್ಗ
೧. ದ್ವಿತೀಯ ರಾಯಿ ಹಾಲು ಉತ್ಪಾದಕರ ಸಹಕಾರ ಸಂಘ – ರಾಯಿ
೩. ಪುತ್ತೂರು ಪ್ರಥಮ ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘ – ಚಾರ್ವಾಕ
೧. ದ್ವಿತೀಯ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘ – ಪಾಣಾಜೆ
೪. ಬೆಳ್ತಂಗಡಿ ಪ್ರಥಮ ಪದ್ಮುಂಜ ಹಾಲು ಉತ್ಪಾದಕರ ಸಹಕಾರ ಸಂಘ – ಪದ್ಮುಂಜ
೧. ದ್ವಿತೀಯ ಗುಂಡೂರಿ ಹಾಲು ಉತ್ಪಾದಕರ ಸಹಕಾರ ಸಂಘ – ಗುಂಡೂರಿ
೫. ಸುಳ್ಯ ಪ್ರಥಮ ಎಡಮಂಗಲ ಹಾಲು ಉತ್ಪಾದಕರ ಸಹಕಾರ ಸಂಘ – ಎಡಮಂಗಲ
೧. ದ್ವಿತೀಯ ಕುಕ್ಕುಜಡ್ಕ ಹಾಲು ಉತ್ಪಾದಕರ ಸಹಕಾರ ಸಂಘ – ಕುಕ್ಕುಜಡ್ಕ
೬. ಉಡುಪಿ ಪ್ರಥಮ ತೆಂಕಎರ್ಮಾಳು ಹಾಲು ಉತ್ಪಾದಕರ ಸಹಕಾರ ಸಂಘ- ತೆಂಕಎರ್ಮಾಳು
೧. ದ್ವಿತೀಯ ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘ – ಇನ್ನಂಜೆ
೭. ಕುಂದಾಪುರ ಪ್ರಥಮ ಅಮಾಸೆಬೈಲು ಹಾಲು ಉತ್ಪಾದಕರ ಸಹಕಾರ ಸಂಘ – ಅಮಾಸೆಬೈಲು
೧. ದ್ವಿತೀಯ ಸಿದ್ದಾಪುರ ಹಾಲು ಉತ್ಪಾದಕರ ಸಹಕಾರ ಸಂಘ – ಸಿದ್ದಾಪುರ
೮. ಕಾರ್ಕಳ ಪ್ರಥಮ ಹಾಳೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ – ಹಾಳೆಕಟ್ಟೆ
ದ್ವಿತೀಯ ಕಾಂತಾವರ ಹಾಲು ಉತ್ಪಾದಕರ ಸಹಕಾರ ಸಂಘ – ಕಾಂತಾವರ

2. ಜಿಲ್ಲಾವಾರು ಉತ್ತಮ ಸಂಘಗಳು
ಉಡುಪಿ ಜಿಲ್ಲೆ ಶಿವಪುರ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಕಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರ ಸಂಘ ಬೆಳ್ತಂಗಡಿ ತಾಲೂಕು

ಒಕ್ಕೂಟದ ಅತ್ಯುತ್ತಮ ಸಂಘವಾಗಿ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಸಂಘವನ್ನು ಆಯ್ಕೆ ಮಾಡಲಾಗಿದೆ.
3. ಜಿಲ್ಲಾವಾರು ಒಕ್ಕೂಟದ ಉತ್ತಮ ಮಹಿಳಾ ಸಂಘಗಳು:
೧. ಬಂಡ್ಸಾಲೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ – ಉಡುಪಿ ತಾಲೂಕು – ಉಡುಪಿ ಜಿಲ್ಲೆ
೨. ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ – ಬೆಳ್ತಂಗಡಿ ತಾಲೂಕು – ದ.ಕ. ಜಿಲ್ಲೆ
4. ಜಿಲ್ಲಾವಾರು ಉತ್ತಮ ಬಿ.ಎಂ.ಸಿ.
೧. ಉಡುಪಿ ಜಿಲ್ಲೆ : ಬಾರ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘ – ಉಡುಪಿ ತಾಲೂಕು
೨. ದ.ಕ. ಜಿಲ್ಲೆ : ಕುಕ್ಕೇಡಿ ಹಾಲು ಉತ್ಪಾದಕರ ಸಹಕಾರಿ ಸಂಘ – ಬೆಳ್ತಂಗಡಿ ತಾಲೂಕು
5. ಒಕ್ಕೂಟದ ಉತ್ತಮ ಹೈನುಗಾರರು
೧. ಶ್ರೀ ರವಿರಾಜ್ ಶೆಟ್ಟಿ – ಅಸೋಡು ಹಾಲು ಉತ್ಪಾದಕರ ಸಹಕಾರಿ ಸಂಘ – ಕುಂದಾಪುರ ತಾಲೂಕು
೨. ಶ್ರೀ ವಿಲಿಯಂ ಲೋಬೋ – ತಣ್ಣೀರುಪಂಥ ಹಾಲು ಉತ್ಪಾದಕರ ಸಹಕಾರಿ ಸಂಘ – ಬೆಳ್ತಂಗಡಿ ತಾಲೂಕು
೩. ಶ್ರೀಮತಿ. ನಳಿನಿ ಲೋಕಪ್ಪಗೌಡ – ಕರೆಮನೆಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ – ಪುತ್ತೂರು
ತಾಲೂಕು
6. ಒಕ್ಕೂಟದ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರು
ಅ. ಒಕ್ಕೂಟದ ಆಯ್ಕೆಯಾದ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರ ಹೆಸರು
೧. ಶ್ರೀ. ವಿಶ್ವನಾಥ -ಖಂಬದಕೋಣೆ ಹಾಲು ಉತ್ಪಾದಕರ ಸಹಕಾರಿ ಸಂಘ – ಕುಂದಾಪುರ ತಾಲೂಕು.
೨. ಶ್ರೀಮತಿ. ಜಯಂತಿ – ಕಾಂತಾವರ ಹಾಲು ಉತ್ಪಾದಕರ ಸಹಕಾರಿ ಸಂಘ – ಕಾರ್ಕಳ ತಾಲೂಕು
ಆ) ದ.ಕ. ಜಿಲ್ಲೆಯ ಆಯ್ಕೆಯಾದ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರ ಹೆಸರು.
೧. ಶ್ರೀ. ಪ್ರಫುಲ್ಲನಾಥ ರೈ- ಭಕ್ತಕೋಡಿ ಹಾಲು ಉತ್ಪಾದಕರ ಸಹಕಾರಿ ಸಂಘ- ಪುತ್ತೂರು ತಾಲೂಕು.
೨. ಶ್ರೀಮತಿ. ಶೋಭ ಶೆಟ್ಟಿ-ವಾಮದಪದವು ಹಾಲು ಉತ್ಪಾದಕರ ಸಹಕಾರಿ ಸಂಘ-ಬಂಟ್ವಾಳತಾಲೂಕು
ಇ) ಉಡುಪಿ ಜಿಲ್ಲೆಯ ಆಯ್ಕೆಯಾದ ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರ ಹೆಸರು.
೧. ಶ್ರೀ. ಸಂತೋಷ – ಅಚ್ಲಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ- ಉಡುಪಿ ತಾಲೂಕು
೨. ಶ್ರೀಮತಿ. ಶೈಲಜ -ಹೇರಂಜಾಲು ಹಾಲು ಉತ್ಪಾದಕರ ಸಹಕಾರಿ ಸಂಘ- ಕುಂದಾಪುರ ತಾಲೂಕು
7. ಉತ್ತಮ ಗುಣಮಟ್ಟದ ಸಂಘಗಳು (ತಾಲೂಕುವಾರು)
೧. ಮಂಗಳೂರು ಕೂಳೂರು ಹಾಲು ಉತ್ಪಾದಕರ ಸಹಕಾರಿ ಸಂಘ
೨. ಬಂಟ್ವಾಳ ಪಿಲಾತಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ
೩. ಪುತ್ತೂರು ಮಾಡ್ನೂರು ಹಾಲು ಉತ್ಪಾದಕರ ಸಹಕಾರಿ ಸಂಘ
೪. ಬೆಳ್ತಂಗಡಿ ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ
೫. ಸುಳ್ಯ ಕಡಿಯಾಲ ಹಾಲು ಉತ್ಪಾದಕರ ಸಹಕಾರಿ ಸಂಘ
೬. ಉಡುಪಿ ಕೂರಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ
೭. ಕುಂದಾಪುರ ಕೊಮೆ ಹಾಲು ಉತ್ಪಾದಕರ ಸಹಕಾರಿ ಸಂಘ
೮. ಕಾರ್ಕಳ ನೀರೆಬೈಲೂರು ಹಾಲು ಉತ್ಪಾದಕರ ಸಹಕಾರಿ ಸಂಘ

8.ಮಧ್ಯಮ ವರ್ಗದ ಉತ್ತಮ ಹೈನುಗಾರರು (ತಾಲೂಕುವಾರು)
೧. ಮಂಗಳೂರು ಬೆಳುವಾಯಿ ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀಮತಿ. ವಸಂತಿ .ಪಿ. ಜೈನ್
೨. ಬಂಟ್ವಾಳ ಕೊರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀ. ರಾಜೇಶ ಡಿ’ಸೋಜಾ
೩. ಪುತ್ತೂರು ಏಣಿತಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀಮತಿ. ವಿಮಲ ಏಣಿತಡ್ಕ
೪. ಬೆಳ್ತಂಗಡಿ ಸೂಳೆಬೆಟ್ಟು ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀಮತಿ. ಸುಶೀಲ
೫. ಸುಳ್ಯ ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀ. ಬೆಳ್ಳಿಯಪ್ಪ ಗೌಡ
೬. ಉಡುಪಿ ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀ. ವಿನ್ಸೆಂಟ್ ಡಿ’ಸೋಜಾ
೭. ಕುಂದಾಪುರ ಕಾಲ್ತೋಡು ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀಮತಿ. ವಿಜಯಲಕ್ಷ್ಮೀ
೮. ಕಾರ್ಕಳ ಕೆರ್ವಾಸೆ ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀ. ಸಂದೀಪ ನಾಯ್ಕ

9. ಹಸಿರುಮೇವು ಅಭಿವೃದ್ಧಿ ಪಡಿಸಿದ ಉತ್ತಮ ಹೈನುಗಾರರು (ತಾಲೂಕುವಾರು)
೧. ಮಂಗಳೂರು ಮುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀ. ವಿದ್ಯಾಧರ ಹೆಗ್ಡೆ
೨. ಬಂಟ್ವಾಳ ಬಿಳಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀ. ವೇಣುಗೋಪಾಲ ಶೆಟ್ಟಿ
೩. ಪುತ್ತೂರು ಕಡಬ ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀ. ಜಯಚಂದ್ರ ರೈ
೪. ಬೆಳ್ತಂಗಡಿ ಮಲವಂತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀ. ಲಕ್ಷ್ಮಣ ಗೌಡ
೫. ಸುಳ್ಯ ಚೊಕ್ಕಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀಮತಿ. ಸುಶೀಲ .ಎ.
೬. ಉಡುಪಿ ಪಡುಮುಂಡು ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀಮತಿ. ಇಂದಿರಾ
೭. ಕುಂದಾಪುರ ಮಾರಣಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀಮತಿ. ವನಜ ಶೆಡ್ತಿ
೮. ಕಾರ್ಕಳ ಅಂಡಾರು ಹಾಲು ಉತ್ಪಾದಕರ ಸಹಕಾರಿ ಸಂಘ ಶ್ರೀಮತಿ. ಶಕುಂತಲಾ

2019-20 ರ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ, ಉಪಾಧ್ಯಕ್ಷರಾದ ಶ್ರೀ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ನಿರ್ದೇಶಕರುಗಳಾದ ಶ್ರೀ ಕಾಪು ದಿವಾಕರ ಶೆಟ್ಟಿ, ಶ್ರೀ ಎ. ಜಗದೀಶ ಕಾರಂತ, ಶ್ರೀ ಕೆ.ಪಿ. ಸುಚರಿತ ಶೆಟ್ಟಿ, ಶ್ರೀ ಹದ್ದೂರು ರಾಜೀವ ಶೆಟ್ಟಿ, ಶ್ರೀ ಕೆ. ನಾರಾಯಣ ಪ್ರಕಾಶ್, ಶ್ರೀ ಪದ್ಮನಾಭ ಶೆಟ್ಟಿ ಅರ್ಕಜೆ, ಶ್ರೀ ಎಸ್.ಬಿ. ಜಯರಾಮ ರೈ, ಶ್ರೀ ಬಿ. ಸುಧಾಕರ ರೈ, ಶ್ರೀ ಸುಧಾಕರ ಶೆಟ್ಟಿ, ಶ್ರೀ ನರಸಿಂಹ ಕಾಮತ್, ಶ್ರೀಮತಿ ಸುಭದ್ರಾ ರಾವ್, ಶ್ರೀಮತಿ ಸ್ಮಿತಾ ಆರ್. ಶೆಟ್ಟಿ, ಶ್ರೀಮತಿ ಸವಿತ ಎನ್. ಶೆಟ್ಟಿ, ಶ್ರೀ ನರಸಿಂಹ ಕಾಮತ್, ಶ್ರೀ ಗೋಪಾಲ ಕೃಷ್ಣ ಕಾಮತ್, ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಪ್ರವೀಣ್ ಬಿ. ನಾಯಕ್, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕರಾದ ಡಾ:ಪ್ರಸನ್ನ ಕುಮಾರ್ ಟಿ.ಜಿ., ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ:ಎಸ್.ಟಿ.ಸುರೇಶ್ ಹಾಜರಿದ್ದು, ಸಭೆಗೆ ಆಗಮಿಸಿದ ಎಲ್ಲಾ ಸದಸ್ಯ ಸಂಘಗಳ ಪ್ರತಿನಿಧಿಗಳಿಗೆ ಉಪಾಧ್ಯಕ್ಷರಾದ ಶ್ರೀ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರು ಸ್ವಾಗತಿಸಿದರು. ನಿರ್ದೇಶಕರಾದ ಶ್ರೀ ಕೆ.ಪಿ. ಸುಚರಿತ ಶೆಟ್ಟಿಯವರು ವಂದನಾರ್ಪಣೆಯನ್ನು ಸಲ್ಲಿಸಿದರು.