ಧರ್ಮಸ್ಥಳ : ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳಿಂದ ಕನ್ನಡ ಭಾಷೆ, ಸಂಸ್ಕೃತಿ ಗಟ್ಟಿಯಾಗುತ್ತದೆ ಎಂದರು .ಈ ಜಗತ್ತಿನಲ್ಲಿ 6500ರಿಂದ 7000ದವರೆಗೆ ಭಾಷೆಗಳಿವೆ .ಭಾರತದಲ್ಲಿಯೇ 2500ಭಾಷೆಗಳಿವೆ.ಭಾಷಾ ಶ್ರೀಮಂತಿಕೆ ಇರುವ ದೇಶ ನಮ್ಮದು.ಬದುಕಿನ ಜೊತೆ ಭಾಷೆ ಹುಟ್ಟುತ್ತದೆ ,ಬೆಳೆಯುತ್ತದೆ.ಶ್ರೇಷ್ಠ ಭಾಷೆ ,ಕನಿಷ್ಠ ಭಾಷೆ ಎಂಬ ತಾರತಮ್ಯ ಸಲ್ಲದು.ಹತ್ತು ಜನ ಮಾತನಾಡಿದರೂ ಆ ಭಾಷೆಗೆ ವೈಶಿಷ್ಟ್ಯತೆ ಇದೆ .ಭಾಷೆ ಎಂದೂ ಸಾಯೊಲ್ಲ .ಆದರೆ ಸಾಯಿಸುವಂತಹ ಹುನ್ನಾರ ನಡೆಯಬಹುದು ಅಷ್ಟೇ ಎಂದರು.
ಭಾಷೆ ನಿಂತ ನೀರಲ್ಲ. ಸೋದರ ಭಾಷೆಯನ್ನು ಕಡೆಗಣಿಸಬಾರದು, ದ್ವೇಷಿಸಬಾರದು. ಸಂಖ್ಯೆ ಕಡಿಮೆಯಾದರೂ ಪ್ರತಿಯೊಂದು ಭಾಷೆಗೂ ತನ್ನದೇ ಆದ ಸತ್ವವಿದೆ ,ವಿಶಿಷ್ಟ ಸೊಗಡು ಇದೆ ಎಂದರು .ಭಾಷೆಯಿರುವುದು ವ್ಯವಹಾರಕ್ಕೆ ಬೇಕಾಗಿ.ಭಾಷೆಯನ್ನು ಇನ್ನೊಬ್ಬರ ಮೇಲೆ ಬಲವಂತದಿಂದ ಹೇರಬಾರದು .ಭಾಷೆ ಸೌಹಾರ್ದತೆಗೆ ದಾರಿ ಆಗಬೇಕೇ ವಿನಃ ಸಂಘರ್ಷಕ್ಕೆ ಕಾರಣವಾಗಬಾರದು ಎಂದರು.
ಸಾಹಿತ್ಯ ಕಾರ್ಯಕ್ರಮಗಳಿಗೆ ಲಕ್ಷ ಲಕ್ಷ ಜನರು ಬರೋದಿಲ್ಲ .ಆದರೆ ಲಕ್ಷ್ಯ ಕೊಟ್ಟು ಆಲಿಸುವ ಸಹೃದಯರು ಬರುತ್ತಾರೆಎಂದು ಬೇಂದ್ರೆಯವರ ಮಾತನ್ನು ನಾಡೋಜ ಡಾ ಮಹೇಶ್ ಜೋಶಿ ಅವರುಸಮಾರೋಪ ಸಮಾರಂಭದಲ್ಲಿ ನೆನಪಿಸಿದರು .ಹೀಗೆ ಬರುವ ಒಬ್ಬೊಬ್ಬರೂ ಲಕ್ಷಲಕ್ಷ ಜನರಿಗೆ ಸಮ ಎಂದು ಅಭಿಮಾನದಿಂದ ನುಡಿದರು .ಈ ಕಾರ್ಯಕ್ರಮವನ್ನು ಆಯೋಜಿಸಿದ ಸಂಘಟಕರನ್ನು ಮನಸಾರೆ ಹೊಗಳಿದ ಜೋಶಿಯವರು ಇದೊಂದು ಆನಂದದ ಕಾರ್ಯಕ್ರಮ ,ಹೃದಯ ಅರಳಿಸಿದ ಕಾರ್ಯಕ್ರಮ ಎಂದರು.ಓದಿದಂತೆ ಬರೆಯುವ ,ಬರೆದಂತೆಯೇ ಮಾತನಾಡುವ ಕನ್ನಡ ಪರಿಪೂರ್ಣ ಭಾಷೆ ಎಂದರು.ಆಚಾರ್ಯ ವಿನೋಬಾ ಭಾವೆಯವರು ಕನ್ನಡವನ್ನು ಲಿಪಿಗಳ ರಾಣಿ ಎಂದು ಹೇಳಿದ್ದನ್ನು ನೆನಪಿಸಿದ ಜೋಶಿಯವರು ಕನ್ನಡ ಹನುಮನ ಭಾಷೆ ,ಹಾಗಾಗಿ ಕನ್ನಡ ಚಿರಂಜೀವಿ ಭಾಷೆ ಎಂದರು. .
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಇಂ.ಕೆ ಪಿ ಮಂಜುನಾಥ್ ಸಾಗರ್ ಸ್ವಾಗತಿಸಿದರು .ಗೋ. ನಾ.ಸ್ವಾಮಿ ,ಡಾ ಸತೀಶ್ ಹೊಸಮನಿ ,ಮುಖ್ಯಮಂತ್ರಿ ಚಂದ್ರು ,ಡಾ ಮಹೇಶ್ ಜೋಷಿ ,ಶಿವರಾಜ್ ,ಶಾಸಕ ಯು ಟಿ ಖಾದರ್ ,ದಿಲೀಪ್ ಕುಮಾರ್ ಭಾಗವಹಿಸಿದರು .ಗೋ . ನಾ ಸ್ವಾ ಮಿ ವಂದಿಸಿದರು .
ಶಾಸಕ ಯು ಟಿ ಖಾದರ್ ಮಾತನಾಡಿ ಈ ಕಾರ್ಯಕ್ರಮವು ಮುಂದೆ ಇನ್ನಷ್ಟು ಕನ್ನಡಪರ ಕಾರ್ಯಕ್ರಮ ನಡೆಯಲು ಪ್ರೇರಣೆಯಾಗಲಿ ಎಂದರು .ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಬದುಕು ,ನಮ್ಮ ಸಂಸ್ಕೃತಿ ,ನಮ್ಮ ವ್ಯಕ್ತಿತ್ವ ಎಂದರು .ಬೆಂಗಳೂರು ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಡಾ.ಸತೀಶ್ ಕುಮಾರ್ ಹೊಸಮನಿ ಕರ್ನಾಟಕದಲ್ಲಿ ಲಭ್ಯವಿರುವ ಡಿಜಿಟಲ್ ಗ್ರಂಥಾಲಯದ ಪ್ರಯೋಜನವನ್ನು ಎಲ್ಲರೂ ಪಡೆಯಲು ಕರೆ ಇತ್ತರು.
Click this button or press Ctrl+G to toggle between Kannada and English