- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಡಿಸೆಂಬರ್ 31ರ ಒಳಗೆ ನಿಮ್ಮ ಡ್ರೈವಿಂಗ್ ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ನವೀಕರಿಸಿ

driving licencce [1]ನವದೆಹಲಿ : ನಿಮ್ಮ ಡ್ರೈವಿಂಗ್ ಲೈಸೆನ್ಸ್, ಫಿಟ್ನೆಸ್ ಸರ್ಟಿಫಿಕೇಟ್ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಎಕ್ಸ್‌ಪೈರ್‌ ಆಗಿದ್ದರೆ, ನೀವು ಜಾಗರೂಕರಾಗಿರಬೇಕು, ಇಲ್ಲವಾದಲ್ಲಿ ನೀವು ದಂಡ ತೆರಲು ಸಿದ್ದರಾಗಿರಬೇಕಾಗಿದೆ.

ಕರೋನ ಸಾಂಕ್ರಮಿಕ ರೋಗದ ಕಾರಣದಿಂದಾಗಿ ವಾಹನ ಸಂಬಂಧಿತ ದಾಖಲೆಗಳಿಗೆ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರ ಹಲವು ಬಾರಿ ವಿಸ್ತರಣೆ ಮಾಡಿತ್ತು. ಕೇಂದ್ರ ಸರ್ಕಾರ ಈ ಹಿಂದೆ ಅವಧಿ ಮೀರಿದ್ದ ವಾಹನದ ದಾಖಲೆಗಳನ್ನು ಮೇ ನಿಂದ ಡಿಸೆಂಬರ್ 31ರವರೆಗೆ ವಿಸ್ತರಿಸಿದೆ.

2020ರ ಫೆಬ್ರವರಿ 1ರಿಂದ ಅವಧಿಯಲ್ಲಿ ಮುಗಿದಿರುವ ಅಥವಾ 2020ರ ಡಿಸೆಂಬರ್ 31ರ ವರೆಗೆ ಅವಧಿ ಮುಕ್ತಾಯಗೊಳ್ಳುವ ಎಲ್ಲಾ ಸಂಬಂಧಿತ ದಾಖಲೆಗಳು 2020ರ ಡಿಸೆಂಬರ್ 31ರ ವರೆಗೆ ಸಿಂಧುತ್ವವನ್ನು ಹೊಂದಿರುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಹಿಂದೆ ತಿಳಿಸಿತ್ತು.

‘ಮೋಟಾರು ವಾಹನ ಕಾಯ್ದೆ 1988 ಮತ್ತು ಕೇಂದ್ರ ಮೋಟಾರು ವಾಹನ ನಿಯಮ 1989ರ ಅನ್ವಯ ಫಿಟ್ ನೆಸ್ , ಪರ್ಮಿಟ್ , ಲೈಸೆನ್ಸ್ , ನೋಂದಣಿ ಅಥವಾ ಇತರೆ ದಾಖಲೆಗಳ ಸಿಂಧುತ್ವವನ್ನು 2020ರ ಡಿಸೆಂಬರ್ 30ರ ವರೆಗೆ ವಿಸ್ತರಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ’ ಎಂದು ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಿತ್ತು.

ಡಿಸೆಂಬರ್ 31ರ ನಂತರ, ನಿಮ್ಮ ಬಳಿ ಚಾಲನಾ ಪರವಾನಗಿ ಅಥವಾ ಇತರ ಯಾವುದೇ ವಾಹನ ದಾಖಲೆಇಲ್ಲದಿದ್ದರೆ, ನೀವು ಭಾರಿ ದಂಡ ತೆರಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕಳೆದ ಒಂಬತ್ತು ತಿಂಗಳಿನಿಂದ ಈ ವಿನಾಯಿತಿ ನಡೆಯುತ್ತಿತ್ತು, ಆದರೆ ಈಗ ಆ ವಿನಾಯಿತಿ ವಿನಾಯಿತಿ ಕೊನೆಯಾಗಲಿದೆ.