ಉಡುಪಿ ಗುಣಪಾಲ ಅಭಿನಂದನ ಸಮಿತಿಯಿಂದ “ಕಲಾರಂಗದ ಭೀಷ್ಮ” ಬಿರುದು ಅಬಿನಂದನೆ , ’ರಂಗ ಗುಣದರ್ಶನ’ ಗ್ರಂಥ ಲೋಕಾರ್ಪಣೆ

3:15 PM, Wednesday, December 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Udupi Gunapala ಮುಂಬಯಿ : ಸಂಪತ್ತು ಇದ್ದವರು ಎಷ್ಟು ಎತ್ತರಕ್ಕೆ ಬೆಳೆದರು ಆತನ ಬದುಕು ದುಃಖದಿಂದ ಕೂಡಿರುತ್ತದೆ ಆದರೆ ಕಲಾವಿದ ಮತ್ತು ಸಾಹಿತ್ಯ ಎತ್ತರಕ್ಕೆ ಬೆಳೆದಷ್ಟು ಸಂತೋಷದಲ್ಲಿ ಇರುತ್ತಾನೆ. ಲಕ್ಷ್ಮಿ ಸಂಪಾದಿಸಿಕೊಂಡ ವನ್ನು ಸಂಸಾರ ಸದಾ ದುಃಖದಲ್ಲಿ ಇರುತ್ತದೆ ಆದ್ದರಿಂದ ಕಲಾವಿದರು ದುಃಖದಲ್ಲಿ ಇರಬಾರದು . ಪ್ರತಿಯೊಬ್ಬ ಕಲಾವಿದನ ಸಾಧನೆಗಳು ಗ್ರಂಥವಾಗಿ ಬಂದಾಗ ಮಾತ್ರ ಆತನ ಪ್ರತಿಭೆ ಶಾಶ್ವತವಾಗಿ ಉಳಿಯಲು ಸಾಧ್ಯ ಉಡುಪಿ ಗುಣಪಾಲ ರ ಕಲಾಸೇವೆ ಗ್ರಂಥದ ಮೂಲಕ ಅಜರಾಮರವಾಗಿ ಉಳಿಯಲಿದೆ ಎಂದು ಮೀರಾ ಡಹಾಣು ಬಂಡ್ಸ್ ಗೌರವ ಅಧ್ಯಕ್ಷ ಡಾ. ವಿರಾರ್ ಶಂಕರ್ ಶೆಟ್ಟಿ ನುಡಿದರು

ಅವರು ಡಿ. 20 ರಂದು ಅಪರಾಹ್ನ ಮೀರಾರೋಡ್ ಪೂರ್ವ, ಜಹಾಂಗೀರ್ ಸರ್ಕಲ್, ಪೂನಮ್ ಟವರ್ಸ್ ನಲ್ಲಿರುವ ಶ್ರೀ ಗುರುನಾರಾಯಣ ಮಂದಿರ ಹಾಲ್ ನಲ್ಲಿ ನಡೆದ.ರಂಗಭೂಮಿ, ಚಲನಚಿತ್ರ ಹಾಗೂ ಸಮಾಜಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮುಂಬಯಿ ಮಹಾನಗರದಲ್ಲಿ ದೀರ್ಘಕಾಲದಿಂದ ಸೇವೆ ಮಾಡುತ್ತಾ ಬಂದಿರುವ ಉಡುಪಿ ಗುಣಪಾಲ ಇವರ ಅಬಿನಂದನಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಉಡುಪಿ ಗುಣಪಾಲ ಅವರ ಸಾಧನೆಯ ’ರಂಗ ಗುಣದರ್ಶನ’ ಸ್ಮರಣ ಸಂಚಿಕೆ ಯನ್ನು ಲೋಕಾರ್ಪಣೆ ಮಾಡಿ” ಕಲಾ ರಂಗ ಭೀಷ್ಮ” ಎಂಬ ಬಿರುದು ಸನ್ಮಾನ ನೆರವೇರಿಸಿ ಮಾತನಾಡಿದರು

ಉಡುಪಿ ಗುಣ ಪಾಲರು ಬಹಳ ವರ್ಷಗಳಿಂದ ಆತ್ಮೀಯ ಗೆಳೆಯ ರಾಗಿದ್ದಾರೆ ಅವರ ಅಭಿಮಾನಿಗಳು ಕೊರೋನಾದ ಸಂದರ್ಭದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿ ಬಹಳಷ್ಟು ಅಭಿಮಾನಿಗಳನ್ನು ಈ ಕಾರ್ಯಕ್ರಮದಲ್ಲಿ ಸೇರಿಸಿಕೊಂಡಿದ್ದಾರೆ ಕಲಾವಿದನ ಪ್ರತಿಭೆಗೆ ಪ್ರೋತ್ಸಾಹ ನೀಡುವ ಸೇವಾ ಕಾರ್ಯಗಳು ನಮ್ಮಿಂದ ಆಗಬೇಕು ಆತನ ಜಾತಿ ವ್ಯಕ್ತಿತ್ವಗಳು ಮುಖ್ಯವಲ್ಲ ಕಲಾವಿದನನ್ನು ಈರೀತಿ ಅಭಿನಂದಿಸಿ ಗೌರವಿಸಿದಾಗ ಮತ್ತಷ್ಟು ಕಲಾವಿದರಿಗೆ ಪೇರಣೆ ಆಗುತ್ತದೆ ಮತ್ತು ಹೊಸ ಹೊಸ ಕಲಾವಿದರು ಬೆಳೆದುಬರಲು ಸಾಧ್ಯವೆಂದು ಡಾ. ಶಂಕರ್ ಶೆಟ್ಟಿ ನುಡಿದರು

ಸಮಾರಂಭವನ್ನು ಜ್ಯೋತಿಷಿ ವಿದ್ವಾನ್ ಪುರೋಹಿತರಾದ ರಾಧಾಕೃಷ್ಣ ಭಟ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಆಶೀರ್ವಚನದ ಮಾತುಗಳನ್ನಾಡುತ್ತಾ ಮಧ್ವಾಚಾರ್ಯರ ಕರೆಗೆ ಉಡುಪಿಗೆ ಧರೆಗಿಳಿದು ಬಂದ ಕೃಷ್ಣ. ಉಡುಪಿ ಎಂದರೆ ಕೃಷ್ಣನ ನಾಡು ಚಹರೆಗಳ ನಾಡು ಕಲೆ-ಸಾಹಿತ್ಯ ರಂಗಕಲೆ ಗಳ ಬಿಡು. ಜಗತ್ತಿಗೆ ದ್ವೈತಸಿದ್ಧಾಂತವನ್ನು ಸರ್ವ ಗುಣಗಳನ್ನು ಹೊಂದಿರುವ ಗುಣ ಪಾಲರು ಉಡುಪಿಯಲ್ಲಿ ಜನಿಸಿ ಕಲಾಕ್ಷೇತ್ರದಲ್ಲಿ ಸಾಧನೆಗಳ ಹಾದಿಯಲ್ಲಿ ನಡೆದು ಅವರ ಇಂದು ಅಭಿನಂದಿಸಿ ಗ್ರಂಥದ ಮೂಲಕ ಸಾಧನೆಯನ್ನು ಉಳಿಸುವ ಕೆಲಸ ಮಾಡಿರುವುದು ನಿಜವಾಗಿ ಅರ್ಥಪೂರ್ಣವಾಗಿದೆ ಎಂದು ನುಡಿದರು

Gunapala ಸಮಾರಂಭದ ಮುಖ್ಯ ಅತಿಥಿಯಾಗಿ ಮಹಾರಾಷ್ಟ್ರ ಕನ್ನಡಿಗ ಕಲಾವಿದರ ಪರಿಷತ್ ಇದರ ಅಧ್ಯಕ್ಷರಾದ ಡಾ. ಸುರೇಂದ್ರಕುಮಾರ್ ಹೆಗ್ಡೆ ಕಲಾ ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ ಆದರೆ ಅವಕಾಶಗಳು ಸಿಗುವುದು ಕಡಿಮೆ ಮುಂಬೈ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿದ ನಗರವಾಗಿದೆ. ಕಲೆ ಸಾಹಿತ್ಯವೆಂದರೆ ಅವರಿಗೆ ಅಪಾರ ಗೌರವ. ಆದರೆ ಅವರ ಬದುಕಿನಲ್ಲಿ ಕಷ್ಟಗಳು ಬಂದಾಗ ಯಾರು ಅವರಿಗೆ ಆಶ್ರಯ ನೀಡಿಲ್ಲ ಎಂಬ ಬೇಸರ ಅವರಲ್ಲಿಲ್ಲ ಯಾಕೆಂದರೆ ಅಭಿಮಾನಿಗಳು ಮಾತ್ರ ಅವರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ .ಕಲಾವಿದನಿಗೆ ಆತನ ಪ್ರತಿಭೆಗೆ ಪ್ರೋತ್ಸಾಹ ವೆಂದರೆ ಅದು ಚಪ್ಪಾಳೆ ಅದರಿಂದಲೇ ಆತ ಬೆಳೆಯುತ್ತಾ ಹೋಗುತ್ತಾನ. ಈ ಪರಿಸರದಲ್ಲಿ ಗುಣಪಾಲ್ ಉಡುಪಿ ಯವರನ್ನು ಎಲ್ಲಾ ಸಮಾಜದವರು ಗೌರವಿಸಿದ್ದಾರೆ. ಉಡುಪಿ ಗುಣಪಾಲ್ ಅವರಲ್ಲಿ ಸಂಪತ್ತು ಇರಬಹುದು ಆದರೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ ಆದ್ದರಿಂದ ಅವರ ಬದುಕು ಸಾರ್ಥಕವಾಗಿದೆ ಎಂದು ನುಡಿದರು

ದೇವಾಡಿಗ ಸಂಘದ ಮಾಜಿ ಅಧ್ಯಕ್ಷರಾದ ಹಿರಿಯಡ್ಕ ಮೋಹನ್ ದಾಸ್ ಮಾತನಾಡುತ್ತಾ ದೇವಾಡಿಗ ಸಮಾಜಕ್ಕೆ ಅಭಿಮಾನ ಮತ್ತು ಗೌರವ ತಂದಿರುವ ಉಡುಪಿ ಗುಣಪಾಲ ರವರ ಜೀವನದ ಬದುಕು ಸಾರ್ಥಕವಾಗಿದೆ. ಅವರ ಪ್ರತಿಭೆಗೆ ಸದಾ ಸಂಘ ಪ್ರೋತ್ಸಾಹ ನೀಡುತ್ತಾ ಬಂದಿದೆ ಮುಂದಿನ ದಿನಗಳಲ್ಲಿ ಅವರ ಕಲಾಜೀವನಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಿಗುವಂತಾಗಲಿ ಎಂದು ನುಡಿದರು

ಮುಖ್ಯ ಅತಿಥಿ ದೇವಾಡಿಗ ಸಂಘದ ಅಧ್ಯಕ್ಷರಾದ ರವಿ ಎಸ್ ದೇವಾಡಿಗ ತನ್ನ ಅನಿಸಿಕೆಯನ್ನು ತಿಳಿಸುತ್ತಾ ಗುಣಪಾಲ್ ಅವರನ್ನು ದೇವಾಡಿಗ ಸಮಾಜದ ಪರವಾಗಿ ಅಭಿನಂದಿಸಲು ಅಭಿಮಾನವಾಗುತ್ತದೆ ನಮ್ಮ ಸಮಾಜದ ಕೀರ್ತಿಯನ್ನು ಎತ್ತರಕ್ಕೆ ಬೆಳೆಸಿದ ಮಹಾನ್ ಕಲಾವಿದನಿಗೆ ಅಭಿಮಾನಿಗಳು ನೀಡಿದ ಗೌರವದಲ್ಲಿ ನಮ್ಮನ್ನು ಸೇರಿಸಿಕೊಂಡಿರುವುದು ಸಂತೋಷ ತಂದಿದೆ ಅವರ ಎಲ್ಲಾ ಸೇವಗಳ ಸೇವಾ ಕಾರ್ಯಗಳಿಂದ ನಮ್ಮ ಪ್ರೋತ್ಸಾಹವಿದೆ ಎಂದು ನುಡಿದರು

ಮೊಗವೀರ ಮಹಾಜನ ಸಂಘ ಬಗ್ವಾಡಿ ಮುಂಬಯಿ ಇದರ ಮಾಜಿ ಅಧ್ಯಕ್ಷರಾದ ಗೋಪಾಲ್ ಎಸ್ ಪುತ್ರನ್ ಮಾತನಾಡುತ್ತಾ ಗುಣಪಾಲ ಹೆಸರಲ್ಲೇ ಎಲ್ಲವೂ ಅಡಕವಾಗಿದೆ ಎಲ್ಲರನ್ನು ಸಮಾನವಾಗಿ ನೋಡಿಕೊಂಡು ಅವರು ಬೆಳೆದವರು. ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಂಘ ಇವರ ಪ್ರತಿಭೆಯನ್ನು ಗುರುತಿಸಿ ಅಭಿನಯ ಚಕ್ರವರ್ತಿ ಎಂಬ ಬಿರುದು ನೀಡಿ ಗೌರವಿಸಿದೆ. ಅಭಿಮಾನಿಗಳು ನೀಡಿದ ಗೌರವ ಅವರ ಕಲಾ ಬದುಕಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ನುಡಿದರು

ಹೆಗ್ಗದ್ದೆ ಪ್ರಕಾಶನ ಬೆಂಗಳೂರು ಇದರ ಮಾಲಕರಾದ ಸಂದೀಪ್ ಹೆಗ್ಗೆದ್ದೆ ತನ್ನ ಅಭಿಪ್ರಾಯ ತಿಳಿಸುತ್ತಾ ಈ ಒಂದು ಪುಸ್ತಕ ಹೊರಬರುವುದಕ್ಕೆ ಒಂದು ವರ್ಷಗಳು ತೆಗೆದುಕೊಂಡಿದೆ ಈ ಪುಸ್ತಕದ ವನ್ನು ಓದಿದಾಗ ಇದರಲ್ಲಿ ಕಲಾವಿದನ ಹೊಗಳಿಕೆಯ ಮಾತುಗಳು ಮಾತ್ರ ಇದೆ ಎಂದು ಅನಿಸಬಹುದು ಆದರೆ ನಮ್ಮ ಬದುಕಿಗೆ ಮಾರ್ಗದರ್ಶನ ವಾಗುವ ಕೃತಿಯಾಗಿದೆ ಗುಣಪಾಲ ಉಡುಪಿಯವರು ಹೊಸ ಪ್ರಯತ್ನದಿಂದ ಕಲಾ ಬದುಕನ್ನು ಸಾಗಿಸಿ ಕೊಂಡವರು ಅವರ ಜೀವನ ಕೃತಿ ನಮಗೆಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ನುಡಿದರು

ವೇದಿಕೆಯಲ್ಲಿ ಹಿರಿಯ ಸಾಹಿತಿ .ಲೇಖಕ. ಡಾ ವಿಶ್ವನಾಥ್ ಕಾರ್ನಾಡ್ .ಸಾಹಿತಿ ಲತಾ ಸಂತೋಷ್ ಶೆಟ್ಟಿ. ಲಲಿತ ಗುಣಪಾಲ್ ಉಡುಪಿ ಉಪಸ್ಥರಿದ್ದರು

ಕೃತಿ ಪರಿಚಯವನ್ನು ಕವಿ ಲೇಖಕ ಗೋಪಾಲ ತ್ರಾಸಿಯವರು ಮಾಡಿದರು.

ಕಾರ್ಯಕ್ರಮವನ್ನು ರವಿಹೆಗಡೆ ಹೆರ್ಮುಂಡೆ ನಿರೂಪಿಸಿದರು ನಮ್ಮ ಜವನೇರ್ ಮಿರ ಭಯಂದರ್ ಅಧ್ಯಕ್ಷ ಮೂಡಬಿದ್ರಿ ಚೇತನ್ ಶೆಟ್ಟಿ ಧನ್ಯವಾದ ನೀಡಿದರು

ಉಡುಪಿ ಗುಣಪಾಲ ಅಭಿನಂದನಾ ಗ್ರಂಥ ಇದರ ಸಂಪಾದಕಿ ಲತಾ ಸಂತೋಷ್ ಶೆಟ್ಟಿಯವರು ಮಾತನಾಡುತ್ತಾ ಕಲಾಸೇವೆಯಲ್ಲಿ ಬದುಕನ್ನು ಕಟ್ಟಿದ ಗುಣಪಾಲ ರವರ ಕಳೆಯನ್ನು ರೀತಿಯಲ್ಲಿ ಪ್ರೀತಿಸಿದವರು ಅವರು ಕಾಲದ ಮರೆಯಲ್ಲಿ ಮರೆಯಾಗದಂತೆ ಆಗಬೇಕು ಎನ್ನುವ ಅಭಿಮಾನಿಗಳು ಈ ಗ್ರಂಥವನ್ನು ಹೊರತಂದಿದ್ದಾರೆ ಇದರಲ್ಲಿ ಬಹಳ ವಿದ್ವಾಂಸರು ಬರೆದಿರುವ ಬರಹಗಳಿಗೆ ಅದೇ ರಂಗ ಗುಣ ದರ್ಶನವಾಗಿದೆ ಹಿಂದೆ ದಿವಂಗತ ಸಂಜೀವ ಶೆಟ್ಟಿ ಅವರು ಈ ಗ್ರಂಥವನ್ನು ಹೊರತರಬೇಕು ಎಂದು ನನ್ನಲ್ಲಿ ಹೇಳಿದ್ದ ರು ಅದು ಈಗ ಸಾರ್ಥಕವಾಯಿತು ಈ ಗ್ರಂಥದಲ್ಲಿ ಕಲಾವಿಧಾನ ಬದುಕಿನ ಚಿತ್ರಣವಿದೆ ಎಂದು ನುಡಿದರು

ಅಭಿನಂತನಾ ಬಾಷಣವನ್ನು ಶಿಕ್ಷಕಿ ಅಮೃತ ಎ ಶೆಟ್ಟಿಯವರು ಮಾಡಿದರು.

ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಯ ವತಿಯಿಂದ ಕಲಾವಿದರಿಂದ ಅವರ ಅಭಿಮಾನಿಗಳಿಂದ ಮತ್ತು ದೇವಾಡಿಗ ಸಂಘ ಮುಂಬಯಿ ವತಿಯಿಂದ ಬಹುಮುಖ ಪ್ರತಿಭೆಯ ಹಿರಿಯ ಕಲಾವಿದ ಉಡುಪಿ ಗುಣಪಾಲ ರನ್ನು ಅಭಿನಂದಿಸಲಾಯಿತು

ಸಮಾರಂಭದಲ್ಲಿ ಸಮಿತಿಯ ಉಪಾಧ್ಯಕ್ಷ ಗೋಪಾಲ ಕೃಷ್ಣ ಗಾಣಿಗ, ಸಂಚಾಲಕರಾದ ಎ. ಕೆ. ಹರೀಶ್, ಪ್ರಧಾನ ಕಾರ್ಯದರ್ಶಿ ಚೇತನ್ ಶೆಟ್ಟಿ, ಮೂಡಬಿದಿರೆ, ಜೊತೆ ಕಾರ್ಯದರ್ಶಿ ಗುಣಕಾಂತ ಕರ್ಜೆ, ಕೋಶಾಧಿಕಾರಿ ಗಣೇಶ್ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು

ಪ್ರಾರಂಭದಲ್ಲಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆದರೆ ಮಹಿಳೆಯರಿಂದ ಕೋರೋಣ ದ ಬಗ್ಗೆ ಜಾಗೃತಿಗೊಳಿಸುವ ಕಿರು ನಾಟಕ ಪ್ರದರ್ಶನಗೊಂಡಿತು

ಅಭಿಮಾನಿಗಳ ಅಭಿಮಾನಕ್ಕೆ ಹೃದಯ ತುಂಬಿಬಂದಿದೆ ಉಡುಪಿ ಗುಣಪಾಲ್
” ಅಭಿಮಾನಿಗಳು ನೀಡಿದ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಕಲಾರಂಗದ ಭೀಷ್ಮ ಬಿರುದಾಂಕಿತ ಉಡುಪಿ ಗುಣಪಾಲ್ ರವರು ಕಲಾವಿದನಿಗೆ ಅಭಿಮಾನಿಗಳೇ ದೇವರು ಗಳಾಗಿದ್ದಾರೆ ಅವರ ಚಪ್ಪಾಳೆಗಳು ಆತನಿಗೆ ಪ್ರೋತ್ಸಾಹ ವಾಗುತ್ತದೆ ನಾನು ಸಾಹಿತ್ಯವಾಗಲಿ. ಯಕ್ಷಗಾನ ವಾಗಲಿ ನಾಟಕವಾಗಲಿ. ಕರಾಟೆ ಕಲೆಯಾಗಲಿ ಎಲ್ಲವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವಾರೂಪದಲ್ಲಿ ಸೇವೆ ಮಾಡಿದ್ದೇನೆ ನನ್ನ ಕಲಾಸೇವೆ ಹಿಂದೆ ಪತ್ನಿ ನಾಟ್ಯ ವಿದುಷಿ ಲಲಿತಾ ರವರ ಪ್ರೋತ್ಸಾಹವಿದೆ ಅವಳು ನಾಟ್ಯ ಪ್ರವೀಣೆ ಶಾರದೆ ನೆಲೆನಿಂತ ಶೃಂಗೇರಿಯ ಊರಿನವಳು ನನಗೆ ಕಲಾಜೀವನಕ್ಕೆ ಶಾರದೆಯ ಆಶೀರ್ವಾದಕ್ಕೆ ಇದು ಕೂಡ ಪ್ರೇರಣೆಯಾಗಿದೆ. ನನ್ನನ್ನು ಬಹಳಷ್ಟು ಸಾಹಿತಿಗಳು ಕಲಾವಿದರು ಸಂಪರ್ಕದಲ್ಲಿ ಇರಿಸಿಕೊಂಡವರು ನಾನು ಅವರಿಂದ ಕಲಿತದ್ದು ಬಹಳಷ್ಟಿದ.. ಕಲಾವಿದನಲ್ಲಿ ಎಂದು ಹಮ್ ಇರಬಾರದು. ನನ್ನ ಅಭಿಮಾನಿಗಳು ಅಭಿಮಾನದಿಂದ ನೀಡಿರುವ ಅಭಿನಂದನೆ ನನ್ನ ಜೀವನವನ್ನು ಸಾರ್ಥಕ ಗೊಳಿಸಿದೆ ಅಭಿನಂದನೆಯನ್ನು ಶಿಕ್ಷಣತಜ್ಞ ಡಾ. ಸಂಜೀವ ಶೆಟ್ಟಿ ಮತ್ತು ನನ್ನ ಯಕ್ಷಗಾನದ ಗುರು ಬಡಗುತಿಟ್ಟಿನ ಹಿರಿಯ ಹಾಸ್ಯಕಲಾವಿದ ನಾಗಯ್ಯ ಶೆಟ್ಟಿ ವಡೃ ಅವರಿಗೆ ಸಮರ್ಪಿಸಿದ್ದೇನೆ

ವರದಿ : ಈಶ್ವರ ಎಂ ಐಲ್
ಚಿತ್ರ : ದಿನೇಶ್ ಕುಲಾಲ್

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English