- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹೆಣ್ಣು ಕೊಟ್ಟ ಮಾವನ ಕಪಾಳ ಕ್ಕೊಡೆದು ಸಾಯಿಸಿದ ಅಳಿಯ

Shiek Aboobakkar [1]ಕಾರ್ಕಳ :  ಹತ್ತು ದಿನದ ಹಿಂದೆ ಮಗಳನ್ನು ಮದುವೆಯಾಗಿದ್ದ ಅಳಿಯನೊಬ್ಬ ಮಾವನ ಕಪಾಳಕ್ಕೆ ಬಾರಿಸಿದ್ದೇ ಅಲ್ಲದೆ ಮರ್ಮಾಂಗಕ್ಕೂ ತುಳಿದು ಸಾಯಿಸಿದ ಘಟನೆ ಬಂಗ್ಲೆಗುಡ್ಡೆಯ  ಹಂಚಿಕಟ್ಟೆ ಫ್ಲಾಟ್ ಒಂದರಲ್ಲಿ ನಡೆದಿದೆ.

ಕ್ಷುಲಕ ಕಾರಣದಿಂದ ಉಂಟಾದ ಜಗಳದಲ್ಲಿ ಶೇಖ್ ಅಬೂಬಕ್ಕರ್ (57) ಜೀವ ಕಳೆದುಕೊಂಡವರು.

ಶೇಖ್ ಅಬೂಬಕ್ಕರ್ ಹಾಗೂ ಅವರ ಅಳಿಯ ತೌಫಿಕ್ ನಡುವೆ ಡಿಸೆಂಬರ್ 31ರ ರಾತ್ರಿ 8.00ಗಂಟೆಗೆ ಫ್ಲಾಟ್‌‌ನಲ್ಲಿ  ಜಗಳ ಏರ್ಪಟ್ಟಿತ್ತು. ಮಾತಿಗೆ ಮಾತು ವಿಕೋಪಕ್ಕೆ ತಿರುಗಿದಾಗ ತೌಫಿಕ್ ತನ್ನ ಮಾವ ಶೇಖ್ ಅಬೂಬಕ್ಕರ್‌‌ನ ಎಡ ಕೆನ್ನೆಗೆ ಹೊಡೆದು ಬಲವಾಗಿ ದೂಡಿ ಹಾಕಿದ್ದರಿಂದ ನೆಲಕ್ಕೆ ಬಿದ್ದರು. ಎದ್ದೇಳುವ ಸ್ಥಿತಿಯಲ್ಲಿ ಇಲ್ಲದ ಶೇಖ್ ಅಬೂಬಕ್ಕರ್ ಅವರ ಮಮಾಂಗಕ್ಕೆ ತೌಫಿಕ್ ಕಾಲಿನಿಂದ ತುಳಿದಿದ್ದನು ಎನ್ನಲಾಗಿದೆ.

ಶೇಖ್ ಅಬೂಬಕ್ಕರ್ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಶೇಖ್ ಅಬೂಬಕ್ಕರ್ ಜನವರಿ 1ರ ತಡರಾತ್ರಿ ಮೃತಪಟ್ಟಿ ಪಟ್ಟಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತೌಫಿಕ್ ನನ್ನು ಪೊಲೀಸರು ಬಂಧಿಸಿದ್ದಾರೆ