- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಜಾಲ್ : ಬಾವಿಗೆ ಬಿದ್ದ ಸ್ಕೂಟರ್ ಸವಾರರು, ಓರ್ವ ಮೃತ್ಯು

Ajith [1]ಮಂಗಳೂರು : ಬಜಾಲ್ ಸಮೀಪದ  ಪಕ್ಕಲಡ್ಕ ಎಂಬಲ್ಲಿ ಬಾವಿಯ ತಡೆಗೋಡೆಗೆ ಸ್ಕೂಟರ್ ಡಿಕ್ಕಿ ಹೊಡೆದು ಸವಾರರು ಬಿದ್ದು ಓರ್ವ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.

ಇಬ್ಬರು ಸವಾರರ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದ್ದು ಆತನನ್ನು  ಎಮ್ಮೆಕೆರೆ ನಿವಾಸಿ ಅಜಿತ್ (22) ಎಂದು ಗುರುತಿಸಲಾಗಿದೆ.

ಅಜಿತ್ ಸೋಮವಾರ ಬಜಾಲ್ನ ಉಲ್ಲಾಸ್ ನಗರದ ತನ್ನ ಸಂಬಂಧಿಕರ ಮನೆಗೆ ಬರುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ರಾತ್ರಿ ವೇಳೆಗೆ ಸ್ಕೂಟರ್ ಸವಾರ ನಿಯಂತ್ರಣ ಕಳೆದುಕೊಂಡು  ರಸ್ತೆ ಪಕ್ಕದಲ್ಲೇ ಇದ್ದ ಬಾವಿ ಆವರಣಕ್ಕೆ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿದ್ದ ಇಬ್ಬರು ಬಿದ್ದಿದದ್ದಾರೆ ಎನ್ನಲಾಗಿದೆ. ಆ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದೆ. ಸ್ಕೂಟರ್ ಮತ್ತು ಎರಡು ಹೆಲ್ಮೆಟ್ ಬಾವಿಯ ಬಳಿ ಕಂಡು ಬಂದಿದೆ.

ಅಪಘಾತಕ್ಕಿಡಾದ ಸ್ಕೂಟರ್ ಬಾವಿಯ ಮೇಲ್ಭಾಗದಲ್ಲೇ ಪತ್ತೆಯಾಗಿದೆ. ಘಟನೆಯ ಸಂದರ್ಭ ಸವಾರರು ಬಾವಿಯೊಳಗೆ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.