- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಟವಾಡುತ್ತಿದ್ದ ಮಗು ಸೀಮೆ ಎಣ್ಣೆ ಸೇವಿಸಿ ಮೃತ್ಯು

Ruthik [1]ಕಾಸರಗೋಡು : ಮನೆಯಲ್ಲಿ ಆಟವಾಡುತ್ತಿದ್ದ ಮಗು ಸೀಮೆ ಎಣ್ಣೆ ಸೇವಿಸಿದ ಪರಿಣಾಮ ಮೃತಪಟ್ಟ ದಾರುಣ ಘಟನೆ ಉದುಮದಲ್ಲಿ ನಡೆದಿದೆ.

ಉದುಮ ಏರೋಲ್‌ನ ದಾಸ್ ಮತ್ತು ರೇಣುಕಾ ದಂಪತಿ ಪುತ್ರ ಋತಿಕ್ ಮೃತಪಟ್ಟ ಮಗು.

ಬಾಟಲಿಯಲ್ಲಿದ್ದ ಸೀಮೆಎಣ್ಣೆಯನ್ನು ಸೇವಿಸಿದ್ದು , ಮಗು ಅಸ್ವಸ್ಥವಾಗಿ ಬಿದ್ದಿದ್ದು ಸಮೀಪ ಸೀಮೆ ಎಣ್ಣೆ ತುಂಬಿದ್ದ ಬಾಟಲಿ ಪತ್ತೆಯಾಗಿತ್ತು. ತಕ್ಷಣ ಮಗುವನ್ನು ಉದುಮದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಬಳಿಕ ವೈದ್ಯರ ಸಲಹೆಯಂತೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.