- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದೊಡ್ಡ ಕೊಂಬಿನ ಜಿಂಕೆ ದಾಳಿ ಗೊಳಗಾಗಿದ್ದ ವ್ಯಕ್ತಿ ಸಾವು

deer [1]ಕೋಟ :  ಮೋಟಾರುಬೈಕ್‌ನಲ್ಲಿ ಹೋಗುತಿದ್ದಾಗ ರಸ್ತೆಯ ಹಾಡಿಯಿಂದ ದೊಡ್ಡ ಕೊಂಬಿನ ಎರಡು ಜಿಂಕೆಗಳು ಹಠಾತ್ತನೆ  ಮೈಮೇಲೆ ಬಿದ್ದಾಗ, ಮೋಟಾರು ಸೈಕಲ್ ಸಮೇತ ರಸ್ತೆ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರಾಮ (22) ಎಂಬ ಯುವಕ ರವಿವಾರ ಮನೆಯಲ್ಲಿ ಮೃತಪಟ್ಟಿದ್ದಾರೆ.

ಕಳೆದ ಡಿ.28ರಂದು ಸಂಜೆ 7:10ರ ಸುಮಾರಿಗೆ ಸಾಬರಕಟ್ಟೆ ಯಿಂದ ಕಾರ್ಜಳ್ಳಿ ಕಡೆಗೆ ರಾಮ ಅವರ ಮೈಮೇಲೆ ಬಿದ್ದ ಜಿಂಕೆಗಳು ಕಾಡಿನಲ್ಲಿ ಮರೆಯಾದರೂ, ರಸ್ತೆ ಬಿದ್ದು ಗಾಯಗೊಂಡಿದ್ದ ಅವರನ್ನು ಕೂಡಲೇ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಯಲ್ಲಿರುತ್ತಾ ಅವರು ಜ.9ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಬಂದಿದ್ದು, ನಿನ್ನೆ ಆರೋಗ್ಯ ಬಿಗಡಾ ಯಿಸಿದ್ದರಿಂದ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದೆಗ ಮೃತಪಟ್ಟಿರು ವುದಾಗಿ ವೈದ್ಯರು ಘೋಷಿಸಿದರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.