- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಧ್ವನಿವರ್ಧಕ ಬಳಸಿ ಅಜಾನ್ ಕೂಗುವುದರ ವಿರುದ್ಧ ಕೂಡಲೇ ಕ್ರಮ ಜರುಗಿಸಿ

 Ajan [1]ಮಂಗಳೂರು  : ಧಾರ್ಮಿಕ ಸ್ಥಳಗಳಲ್ಲಿ ಕಾನೂನುಬಾಹಿರ ಧ್ವನಿವರ್ಧಕ ಬಳಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಚ್ಚ ನ್ಯಾಯಾಲಯದ ತೀರ್ಪು
ತೀರ್ಪು ಸ್ವಾಗತಾರ್ಹ, ರಾಜ್ಯ ಸರ್ಕಾರವು ಕೂಡಲೇ ಕ್ರಮ ಜರುಗಿಸಬೇಕು ಎಂದು  ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠವು ಧಾರ್ಮಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸಿ ಧ್ವನಿವರ್ಧಕ ಬಳಕೆ ಮಾಡುವುದರ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪೋಲಿಸ್ ಇಲಾಖೆಗೆ ನಿರ್ದೇಶನ ನೀಡಿರುವುದು ಅತ್ಯಂತ ಮಹತ್ವದ ನಿರ್ಣಯವಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ರಾಜ್ಯದಲ್ಲಿ ಹೆಚ್ಚಿನ ನಗರ, ಹಳ್ಳಿ, ಹೋಬಳಿಗಳಲ್ಲಿ ದಿನದಲ್ಲಿ ಐದು ಬಾರಿ ಅನಧಿಕೃತವಾಗಿ ಕರ್ಣಕರ್ಕಶವಾದ ಧ್ವನಿವರ್ಧಕ ಬಳಸಿ ಅಜಾನ್ ಕೂಗಲಾಗುತ್ತದೆ. ಇದು ರೋಗಿಗಳು, ವಯಸ್ಕರರು ಹಾಗೂ ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಅಡಚಣೆಗಳನ್ನು ತರುತ್ತದೆ. ಜನರು ಪ್ರತಿದಿನ ಇದನ್ನು ಸಹಿಸುವುದು ಕಷ್ಟಕರವಾಗಿದೆ.  ಬಹುತೇಕ ಕಡೆಗಳಲ್ಲಿ ಇದರ ಬಗ್ಗೆ ಆಡಳಿತಕ್ಕೆ ಮನವಿ ನೀಡಿದರೂ, ಏನೂ ಕ್ರಮ ಜರುಗಿಸಿಲ್ಲ. ಇಂದು ಉಚ್ಚ ನ್ಯಾಯಾಲಯವೇ ಆದೇಶ ನೀಡಬೇಕಾಯಿತು. ಇನ್ನಾದರೂ ಸರ್ಕಾರವು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ಕೂಡಲೇ ಜಾರಿಗೆ ತರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.