- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೋಟೆಕಾರಿನಿಂದ ಬಾಕ್ರಬೈಲುಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಲಾರಿ ವಶ

cows [1]ಕೊಣಾಜೆ : ಕೋಟೆಕಾರಿನಿಂದ ಬಾಕ್ರಬೈಲುಗೆ ಜಾನುವಾರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರ ಸಂಜೆ  ಮುಡಿಪು ಸಮೀಪ‌ ನಡೆದಿದೆ.

ಕೋಟೆಕಾರಿನಿಂದ ಬಾಕ್ರಬೈಲುಗೆ ಜಾನುವಾರನ್ನು ಲಾರಿಯಲ್ಲಿ ಕೊಂಡೊಯ್ಯುತ್ತಿದ್ದ ವೇಳೆ ಕೊಣಾಜೆ ಪೊಲೀಸರು ಆಗಮಿಸಿ ಲಾರಿ ವಶಪಡಿಸಿಕೊಂಡಿದ್ದಾರೆ‌.

ಈ ಬಗ್ಗೆ ಕೊಣಾಜೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.