- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

9ನೇ ತರಗತಿ ವಿದ್ಯಾರ್ಥಿನಿಯ ಬೆತ್ತಲೆ ಚಿತ್ರವನ್ನು ಪಡೆದು ಬ್ಲಾಕ್ ಮೇಲ್ ಮಾಡಿದ ವ್ಯಕ್ತಿ !

mohammed Aman [1]ಉಜಿರೆ : ಸ್ನೇಹಿತೆಯ  ಮೂಲಕ ಪರಿಚಯವಾದ ಬೆಂಗಳೂರು ಮೂಲದ 9ನೇ ತರಗತಿ ವಿದ್ಯಾರ್ಥಿನಿಯ ಬೆತ್ತಲೆ ಚಿತ್ರವನ್ನು ಪಡೆದುಕೊಂಡು ಉಜಿರೆಯ ವ್ಯಕ್ತಿಯೊಬ್ಬ ಬ್ಲಾಕ್ ಮೇಲ್ ಮಾಡುತ್ತಿರುವುದಲ್ಲದೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿಯನ್ನು ಉಜಿರೆಯ ಟಿ.ಬಿ. ಕ್ರಾಸ್ ನಿವಾಸಿ ಮಹಮ್ಮದ್ ಅಮನ್ ಎಂದು ಹೇಳಲಾಗಿದೆ.

ಈತ  ದೂರವಾಣಿ ಮೂಲಕ ಸಂಪರ್ಕಿಸಿ ಸ್ನೇಹ ಬೆಳೆಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಮೀನಿನ ವ್ಯಾಪಾರಿಯೊಬ್ಬರ ಪುತ್ರನಾಗಿರುವ ಈತ ತನ್ನ ಸ್ನೇಹಿತೆಯ ಮುಖಾಂತರ 9ನೇ ತರಗತಿ ವಿದ್ಯಾರ್ಥಿನಿಯ ಪರಿಚಯ ಮಾಡಿಕೊಂಡನು.  ಬಳಿಕ ಹೇಗೋ ಮರಳುಮಾಡಿ ಆಕೆಯ ಬೆತ್ತಲೆ ಚಿತ್ರವನ್ನು ಪಡೆದುಕೊಂಡು ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ. ನೀನು ನನ್ನೊಂದಿಗೆ ಹೊರಗೆ ತಿರುಗಾಡಲು ಬರಬೇಕು. ಇಲ್ಲದಿದ್ದರೆ ಫೋಟೋ ವೈರಲ್ ಮಾಡುವುದಾಗಿ ಈತ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.

ಈ ವಿಷಯ ಅಪ್ರಾಪ್ತೆ ಬಾಲಕಿಯ ಮನೆಯವರಿಗೆ ತಿಳಿದು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.