- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಸ್‌ಡಿಪಿಐ ಮುಖಂಡನ ಬಂಧನ

sdpi [1]ಉಳ್ಳಾಲ : ಅಪ್ರಾಪ್ತ ಬಾಲಕಿಯ ಮೇಲೆ  ಅತ್ಯಾಚಾರ ಯತ್ನ ನಡೆಸಿದ್ದಕ್ಕಾಗಿ ಉಳ್ಳಾಲ ವಲಯದ  ಎಸ್‌ಡಿಪಿಐ ಅಧ್ಯಕ್ಷ ನೊಬ್ಬನನ್ನು ಪೋಕ್ಸೊ ಕಾಯಿದೆಯಡಿ ಉಳ್ಳಾಲ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಪ್ರಕರಣ ದಾಖಲಾಗಿ ತಲೆಮರೆಸಿಕೊಂಡಿದ್ದ ಎಸ್‌ಡಿಪಿಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಸಿದ್ದೀಖ್ ಉಳ್ಳಾಲ್ (43)  ಬಂಧಿತ ಆರೋಪಿ.

ಸಹಾಯದ ನೆಪದಲ್ಲಿ ಮಹಿಳೆಯ  ಮನೆಗೆ ಭೇಟಿ ನೀಡುತ್ತಿದ್ದ ಸಿದ್ದೀಖ್ 15ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದ. ಮಹಿಳೆಯ ಪತಿ ತೊರೆದಿದ್ದು, ಆಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಈ ಬಗ್ಗೆ ಮಹಿಳೆ ಜ.19 ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸುವ ಸಂದರ್ಭ ಮಹಿಳೆಗೆ ಎಸ್‌ಡಿಪಿಐ ಉಳ್ಳಾಲದ ಮುಖಂಡರು ಬೆದರಿಕೆಯನ್ನು ಹಾಕಿದ ಪ್ರಕರಣವೂ ಉಳ್ಳಾಲ ಠಾಣೆಯಲ್ಲಿದೆ.

ಪೋಕ್ಸೊ ಕಾಯಿದೆಯಡಿ ಮತ್ತು ಬೆದರಿಕೆಯೊಡ್ಡಿದ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಸಿದ್ದೀಖ್ ತಲೆಮರೆಸಿಕೊಂಡಿದ್ದು, ಶನಿವಾರ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.