ವರದಿ : ಶಂಭು, ಮೆಗಾಮೀಡಿಯಾ ನ್ಯೂಸ್, ಹುಬ್ಬಳ್ಳಿ ಬ್ಯೂರೋ. ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳು ವೇಗವಾಗಿ ಬೆಳೆಯುತ್ತಿರುವ ನಗರಗಳಾಗಿದ್ದು, ಜನಸಂಖ್ಯೆಯ ಅನುಗುಣವಾಗಿ ಹಸಿರು ಜಾಗ ಅಭಿವೃದ್ಧಿಪಡಿಸುವುದು ಅವಶ್ಯಕವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಜಗದೀಶ ಶೆಟ್ಟರ ಹೇಳಿದರು.
ಹು-ಧಾ ಸ್ಮಾರ್ಟ್ ಸಿಟಿ ವತಿಯಿಂದ ನಗರದ ತೋಳನಕೆರೆ ಭಿವೃದ್ಧಿಪಡಿಸಲಾಗುತ್ತಿದ್ದು, 2.5 ಎಕರೆ ವಿಸ್ತೀರ್ಣತೆಯನ್ನು ಹೊಂದಿದ್ದು ಇದರಲ್ಲಿ 1/2 ಎಕರೆ ನಗರ ಅರಣ್ಯ ಮತ್ತು 1/2 ಎಕರೆ ಟ್ರೀಪಾರ್ಕ್ ಹಾಗೂ 1/2 ಎಕರೆ ಔಷಧೀಯ ಗಿಡಮೂಲಿಕೆ ಮತ್ತು 1/2 ಎಕರೆ ತೆರೆದ ಜಾಗವಾಗಿರುತ್ತದೆ ಎಂದರು.
ಭಾರತೀಯ ಪರಂಪರೆಯಲ್ಲಿ ಔಷಧಿ ಗಿಡಮೂಲಿಕೆ ಸಸ್ಯಗಳಿಗೆ ಪ್ರಾಮುಖ್ಯತೆ ಪಡೆದಿದ್ದು ಈ ನಿಟ್ಟಿನಲ್ಲಿ 1/2 ಎಕರೆ ಜಾಗೆಯಲ್ಲಿ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ ಮತ್ತು ಒಳಗಡೆ ರಸ್ತೆ ಡಾಂಬರೀಕರಣಗೊಳಿಸಲಾಗುವುದು ಎಂದರು.
15 ನೇ ಹಣಕಾಸು ಯೋಜನೆಯಡಿ 38 ಲಕ್ಷ ಅಭಿವೃದ್ಧಿ ಕಾಮಗಾರಿಯನ್ನು ಹಾಗೂ ಮಹಾನಗರ ಪಾಲಿಕೆ ಸಾಮಾನ್ಯ ನಿಧಿಯಿಂದ 30 ಲಕ್ಷ ಕಾಮಗಾರಿಯನ್ನು ಹೊಂದಲಾಗಿದೆ. ರೋಟರಿ ಸಂಸ್ಥೆಯಿಂದ 33 ಲಕ್ಷ ಮತ್ತು ವಾಕಿಂಗ್ ಟ್ರ್ಯಾಕ್, ಬೀದಿ ದೀಪ ಮೂಲಭೂತ ಸೌಕರ್ಯಕ್ಕಾಗಿ 130 ಲಕ್ಷ ರೂ. ಅಭಿವೃದ್ಧಿಪಡಿಸಲು ಪಾಲಿಕೆ ಯೋಜಿಸಿದೆ. ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡು ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಅರಣ್ಯ ಪ್ರದೇಶವು ಜೀವ ಸಂಕುಲಗಳಿಗೆ ಆಸರೆಯಾಗಲಿದ್ದು, ದೇಶ-ವಿದೇಶದಿಂದ ವಿವಿಧ ಬಗೆಯ ಪಕ್ಷಿಗಳು ಬರುವಂತೆ ಆಗಬೇಕು ಎಂದು ಆಶಿಸಿದರು. ಹಸಿರು ವರ್ಣದಿಂದ ಸ್ಥಳೀಯ ಜನರ ಮತ್ತು ಮಕ್ಕಳ ಭೌತಿಕ, ಮಾನಸಿಕ ಅಭಿವೃದ್ಧಿಗೆ ಸಹಾಯಕಾರಿಯಾಗಲಿದೆ ಎಂದರು.
Click this button or press Ctrl+G to toggle between Kannada and English