- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ಆರಂಭಿಸಲು ರೈಲ್ವೇ ಸಚಿವರಿಗೆ ತು.ರ.ವೇ ಮನವಿ

trv [1]ಮಂಗಳೂರು :  2020 ಮಾರ್ಚ್‍ನಲ್ಲಿ ಕೊರೋನಾ ನಿಮಿತ್ತ ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ರದ್ದು ಮಾಡಿದ್ದನ್ನು ಮತ್ತೆ ಆರಂಭಿಸಲು ತುಳುನಾಡ ರಕ್ಷಣಾ ವೇದಿಕೆ ರೈಲ್ವೆ ಸಚಿವರಿಗೆ ಮನವಿ ಮಾಡಿದೆ.

ಮಂಗಳೂರು – ಕಣ್ಣೂರು ಪ್ಯಾಸೆಂಜರ್ ರೈಲು ವಿದ್ಯಾರ್ಥಿಗಳು, ಜನಸಾಮಾನ್ಯರ ಆಶ್ರಯ ಕೇಂದ್ರವಾಗಿತ್ತು. ಪ್ರಸ್ತುತ ಕರ್ನಾಟಕಲ್ಲಿ ಶಾಲಾ ಕಾಲೇಜುಗಳು ಆರಂಭಗೊಂಡು ತರಗತಿ ಪುನರಾರಂಭಗೊಂಡಿದೆ. ಕಾಸರಗೋಡಿನ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳ ದುಬಾರಿ ಖರ್ಚನ್ನು ಭರಿಸಲು ಅಸಾಧ್ಯವಾದ ಕಾರಣ ನೂರಾರು ಸಂಖ್ಯೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸವೇ ಮೊಟಕುಗೊಂಡ ಸ್ಥಿತಿಯಲ್ಲಿದೆ. ಅದೇ ರೀತಿ ಬಡ ಕಾರ್ಮಿಕರಿಗೆ ಸಹ ಇದರಿಂದಾಗಿ ಕಷ್ಟವಾಗುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದೆ.

ಶೀಘ್ರದಲ್ಲಿಯೇ ಸಮಸ್ಯೆಗೆ ಪರಿಹಾರ ಮಾಡದಿದ್ದಲ್ಲಿ ಸಾರ್ವಜನಿಕರನ್ನು ಒಟ್ಟು ಸೇರಿ ಪ್ರತಿಭಟನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅನಿವಾರ್ಯವಗುತ್ತದೆ ಎಂದು  ಜಿಲ್ಲಾಧಿಕಾರಿ ಮುಖಾಂತರ ರೈಲ್ವೇ ಸಚಿವರಿಗೆ ಮನವಿ ನೀಡಿ ತುಳುನಾಡ ರಕ್ಷಣಾ ವೇದಿಗೆ ನಿಯೋಗ ಜರುಗಿಸುವಂತೆ  ಜಿಲ್ಲಾಧಿಕಾರಿ ಮುಖಾಂತರ ರೈಲ್ವೇ ಸಚಿವರಿಗೆ ಮತ್ತು ಮಂಗಳೂರು ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್‍ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದೆ.

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳಾದ ಮೋಹನ್ ಮೆಂಡನ್ ಕದ್ರಿ ಶಿವಭಾಗ್, ಭಾಸ್ಕರ ಕಾಸರಗೋಡು, ಹರೀಶ್ ಶೆಟ್ಟಿ ಶಕ್ತಿನಗರ, ಜ್ಞಾನೆಶ್ ಬಿಕರ್ನಕಟ್ಟೆ, ರೋನಾಲ್ಡ್ ಡಿಸೋಜ, ಮುನೀರ್ ಮುಕ್ಕಚೇರಿ, ಜೋಸೆಫ್ ಲೋಬೋ, ರೋಶನ್ ಡಿಸೋಜ ಶೇಡಿಗುರಿ, ಕ್ಲೀಟಸ್ ಲೋಬೋ ಅಳಕೆ, ವಿವಿಎನ್ ಡಿಸೋಜ ಉರ್ವ, ಗೋಲ್ಡಾನ್ ಫಾರೂಕ್, ಅಝೀಝ್ ಉಳ್ಳಾಲ್ ಮೊದಲಾದವರು ನಿಯೋಗದಲ್ಲಿದ್ದರು.