- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಮಯ ಪ್ರಜ್ಞೆಯಿಂದ ಪ್ರಾದೇಶಿಕ ಸಮಿತಿಗಳ ಕಾರ್ಯಕ್ರಮಗಳು ನಡೆಯಲಿ – ಚಂದ್ರಹಾಸ ಕೆ. ಶೆಟ್ಟಿ

Munmbai bunts Sangha [1]ಮುಂಬಯಿ : ಪ್ರಾದೇಶಿಕ ಸಮಿತಿಗಳ ಉದ್ದೇಶ ಆ ಪ್ರದೇಶದ ಸಮಾಜ ಬಾಂಧವರಿಗೆ ಸಂಘದ ಸೌಲಭ್ಯಗಳು ಯೋಜನೆಗಳು ಅವರ ಮನೆ ಬಾಗಿಲಿಗೆ ತಲಪುವಂತಾಗಲು. ಪ್ರತಿಯೊಬ್ಬರಿಗೂ ಸಮಯದ ಮಹತ್ವವಿದೆ. ಪ್ರಾದೇಶಿಕ ಸಮಿತಿಗಳ ಕಾರ್ಯಕ್ರಮಗಳು ಅರ್ಥಪೂರ್ಣವಾಗಬೇಕಾದರೆ ಅಂತಹ ಕಾರ್ಯಕ್ರಮಗಳ ಸಮಯದ ಚೌಕಟ್ಟಿನೊಳಗಿರಬೇಕು ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ ಯವರು ಅಭಿಪ್ರಾಯಪಟ್ಟರು.

ಮಾ. 9 ರಂದು ಕೃಷ್ಣ ಪೇಲೇಸ್ ಹೋಟೇಲಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ಜರಗಿದ ಬಂಟರ ಸಂಘ ಮುಂಬಯಿಯ

ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಪದ ಹಸ್ತಾಂತರ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷ ಪ್ರಸ್ತುತ ಸಂಘದ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರ್ ಅವರ ಅವಧಿಯಲ್ಲಿ ಈ ಪರಿಸರದ ಸಮಾಜ ಬಾಂಧವರನ್ನು ಸಮರ್ಥವಾಗಿ ಒಗ್ಗೂಡಿಸಿದ್ದಾರೆ. ಕೋರೋನಾ ಸಮಯದಲ್ಲೂ ಆರ್ಥಿಕ ನೆರವು ಒದಗಿಸುವಲ್ಲಿ ಶ್ರಮಿಸಿದ್ದಾರೆ. ನೂತನ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಯವರಿಗೆ ಸಂಘದಲ್ಲಿ ವಿವಿಧ ಹುದ್ದೆಯಲ್ಲಿದ್ದು ಉತ್ತಮ ಅನುಭವವನ್ನು ಹೊಂದಿದ್ದಾರೆ. ನಮ್ಮ ಕೆಲಸ ಕಾರ್ಯಗಳೇ ಮಾತುಗಳಾಗಬೇಕು ಎನ್ನುವ ಸಿದ್ದಾಂತದಲ್ಲಿ ಪ್ರಾದೇಶಿಕ ಸಮಿತಿಯು ಉನ್ನತ ಮಟ್ಟಕ್ಕೇರಲಿ ಎಂದರು.

Munmbai bunts Sangha [2]ವೇದಿಕೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಕೋಶಾಧಿಕಾರಿ ಸಿ.ಎ. ಹರೀಶ್ ಶೆಟ್ಟಿ, ಜೊತೆ ಕೋಶಾಧಿಕಾರಿ ಮುಂಡಪ್ಪ ಎಸ್ ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ, ಮುದ್ರಾಡಿ, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರ್, ಉಪಕಾರ್ಯಧ್ಯಕ್ಷ ಶಿವಪ್ರಸಾದ್ ಶೆಟ್ಟಿ , ಸಂಚಾಲಕ ಡಾ| ಅರುಣೋದಯ ರೈ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ ಕಾಶಿಮೀರ, ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಕೋಶಾಧಿಕಾರಿ ಉದಯ ಶೆಟ್ಟಿ ಪೆಲತ್ತೂರು, ಜೊತೆ ಕೋಶಾಧಿಕಾರಿ, ದಾಮೋಧರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಕೆ. ಶೆಟ್ಟಿ ಕುತ್ಯಾರು ಉಪಸ್ಥಿತರಿದ್ದರು.

ಪದ ಹಸ್ತಾಂತರದ ನಂತರ ನೂತನ ಕಾರ್ಯಾಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಯವರು ನೂತನ ಸಮಿತಿಯ ಹೆಸರನ್ನು ವಾಚಿಸಿದರು.

ಅಧಿಕಾರವನ್ನು ಸ್ವೀಕರಿಸಿ ಮಾತನಾಡಿದ ಶಿವಪ್ರಸಾದ್ ಶೆಟ್ಟಿ ಯವರು ಸದಸ್ಯರ ಸಹಕಾರದಿಂದ ಪ್ರಾದೇಶಿಕ ಸಮಿತಿಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತೇನೆ. ಸದಸ್ಯರ ಬೆಂಬಲದಿಂದ ಸಂಘದಲ್ಲಿಯೂ ವಿವಿಧ ಜವಾಬ್ಧಾರಿಯನ್ನು ನಿರ್ವಹಿಸಿರುವೆನು, ಸಂಘದ ಎಲ್ಲಾ ಯೋಜನೆಗಳು ಈ ಪರಿಸರದ ಜನರಿಗೆ ಸಿಗುವಂತಾಗಲು ಶ್ರಮಿಸಿತ್ತೇನೆ ಎಂದರು.

Munmbai bunts Sangha [3]ಉಪಕಾರ್ಯಧ್ಯಕ್ಷ – ಉದಯ ಶೆಟ್ಟಿ ಪೆಲತ್ತೂರು, ಕಾರ್ಯದರ್ಶಿ – ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಕೋಶಾಧಿಕಾರಿ : ದಾಮೋಧರ ಶೆಟ್ಟಿ, ಜೊತೆ ಕಾರ್ಯದರ್ಶಿ – ಶಂಕರ್ ಶೆಟ್ಟಿ, ಜೊತೆ ಕೋಶಾಧಿಕಾರಿ – ರಮೇಶ್ ಶೆಟ್ಟಿ ಸಿದ್ದಕಟ್ಟೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ – ಶ್ರೀಮತಿ ಶಾಲಿನಿ ಸತೀಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಂದರ್ಶ ಶೆಟ್ಟಿ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಗೊಂಡ ಉಪಸಮಿಗಳ ವಿವರ ಹೀಗಿದೆ.

ಸಲಹಾ ಸಮಿತಿ ಕಾರ್ಯಾಧ್ಯಕ್ಷರು – ಭಾಸ್ಕರ ಶೆಟ್ಟಿ ಕಾಶಿಮೀರಾ ಮಹಿಳಾ ವಿಭಾಗದ ಸಲಹಾ ಕಾರ್ಯಾಧ್ಯಕ್ಷೆ – ಶ್ರೀಮತಿ ಅಮಿತಾ ಕೆ. ಶೆಟ್ಟಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ – ಭಾಸ್ಕರ ಶೆಟ್ಟಿ – ಶಾರದಾ ಕ್ಲಾಸೆಸ್. ವೈದ್ಯಕೀಯ ಸಮಿತಿ – ಡಾ| ಭಾಸ್ಕರ ಶೆಟ್ಟಿ (ದೀಪಕ್ ಹಾಸ್ಪಿಟಲ್) ಕ್ರೀಡಾ ಸಮಿತಿ – ರಾಜೇಶ್ ಶೆಟ್ಟಿ ತೆಕ್ಟ್ರಾರ್, ಸಾಹಿತ್ಯ ಹಾಗೂ ಸಾಂಸ್ಕೃತಿಕ ವಿಭಾಗ – ರಾಜೇಶ್ ಶೆಟ್ಟಿ .ಸದಸ್ಯ ನೋಂದಾವಣಿ ವಿಭಾಗ – ಬಾಬಾ ಪ್ರಸಾದ್ ಅರಸ . ವಿವಾಹ ನೋಂದಾವಣೆ- ಸುಭಾಷ್ ಶೆಟ್ಟಿ.. ಪ್ರಸಾರ ಹಾಗೂ ತಾಂತ್ರಿಕ ವಿಭಾಗ – ವೈ.ಟಿ. ಶೆಟ್ಟಿ ಹೆಜಮಾಡಿ .ಕ್ಯಾಟರಿಂಗ್ ವಿಭಾಗ – ಅಶೋಕ್ ಶೆಟ್ಟಿ (ಎಂ. ಟಿ. ಎನ್. ಎಲ್) , ಭಜನಾ ಸಮಿತಿ- ವಿಜಯ ಶೆಟ್ಟಿ ಮೂಡು ಬೆಳ್ಳೆ. ಇ. ಉದ್ಯೋಗ ವಿಭಾಗ – ಸಾಯಿ ಪ್ರಸಾದ್ ಪೂಂಜ.

ಸಲಹಾ ಸಮಿತಿ ಸದಸ್ಯರುಗಳು : ರವೀಂದ್ರನಾಥ ವಿ. ಶೆಟ್ಟಿ, ಹರೀಶ್ ಕುಮಾರ ಶೆಟ್ಟಿ, ಶಿವರಾಮ ಶೆಟ್ಟಿ, ಡಾ| ಅರುಣೋದಯ ರೈ, ಡಾ| ಎನ್. ಎ. ಹೆಗ್ಡೆ ರಾಜೇಶ್ ಶೆಟ್ಟಿ (ತುಂಗಾ ಹಾಸ್ಪಿಟಲ್), ಸಚ್ಚಿದಾನಂದ ಶೆಟ್ಟಿ ಮುನ್ನಲಾಯ ಗುತ್ತು.

ಮಹಿಳಾ ವಿಭಾಗ ಸಲಹಾ ಸಮಿತಿ ಸದಸ್ಯೆಯರು : ಸುಮಂಗಲ ಕಣಂಜಾರು, ಸುಗುಣ ಶೆಟ್ಟಿ, ಜಯಶ್ರೀ ಶೆಟ್ಟಿ ನಯನ ಶೆಟ್ಟಿ, ಅನುಸೂಯ ಶೆಟ್ಟಿ ಸುನೀತ ಶೆಟ್ಟಿ.

Munmbai bunts Sangha [4]ಯುವ ವಿಭಾಗ ಸಮಿತಿ ಸದಸ್ಯರು: ವೃಷಭ ಶೆಟ್ಟಿ, ಸುಶಾಂತ್ ಶೆಟ್ಟಿ, ನಿಧಿ ಶೆಟ್ಟಿ ಕಲ್ಪಕ್ ಶೆಟ್ಟಿ, ನಿರೀಕ್ಷಾ ಶೆಟ್ಟಿ, ಶ್ರುತಿ ದಿವಾಕರ್ ಶೆಟ್ಟಿ.

ಶಿಕ್ಷಣ ಮತ್ತು ಸಮಾಜ ಕಲ್ಯಾಣ : ಜಗದೀಶ ಶೆಟ್ಟಿ (ಸೀಗಲ್), ವೇಣುಗೋಪಾಲ ಶೆಟ್ಟಿ, ಕವಿತಾ ಹೆಗ್ಡೆ, ವೀಣಾ ಅರಸ.

ವೈದ್ಯಕೀಯ ಸಮಿತಿ ಸದಸ್ಯರುಗಳು :

ಡಾ| ಪ್ರತಾ ಗೌರೀಶ್ ಶೆಟ್ಟಿ, ಡಾ| ಸತೀಶ್ ಶೆಟ್ಟಿ, ಡಾ| ಗೌರೀಶ್ ಶೆಟ್ಟಿ, ಡಾ| ಸನತ್ ಎ. ಹೆಗ್ಡೆ, ಡಾ| ಸ್ವರೂಪ ರೈ.

ಕ್ರೀಡಾ ಸಮಿತಿ ಸದಸ್ಯರುಗಳು : ಶ್ರೀಮತಿ ಹಿತಾ ಶೆಟ್ಟಿ, ಅಮಿತಾ ಭಾಸ್ಕರ ಶೆಟ್ಟಿ, ಪ್ರಸನ್ನ ಶೆಟ್ಟಿ

ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಸಮಿತಿ ಸದಸ್ಯರುಗಳು : ಶ್ರೀಮತಿ ಸಂಧ್ಯಾ ಶೆಟ್ಟಿ, ಕರುಣಾಕರ ಶೆಟ್ಟಿ ಕುಕ್ಕುಂದೂರು, ದಿವಾಕರ ಶೆಟ್ಟಿ ಪೊಸ್ರಾಲ್.

ಸದಸ್ಯ ನೊಂದಾವಣಿ ಸಮಿತಿ ಸದಸ್ಯರುಗಳು : ಗಣೇಶ ಶೆಟ್ಟಿ

ಕ್ಯಾಟರಿಂಗ್ ವಿಭಾಗದ ಸಮಿತಿ ಸದಸ್ಯರುಗಳು : ಗುಣಪಾಲ ಶೆಟ್ಟಿ ಕುಕ್ಕುಂದೂರು, ಸುರೇಶ ಶೆಟ್ಟಿ ಪಯ್ಯಾರ್ .

ಭಜನಾ ಸಮಿತಿಯ ಸದಸ್ಯರುಗಳು : ಶಾಲಿನಿ ಆರ್, ಶೆಟ್ಟಿ ಪ್ರೇಮ ಲೋಕೆಶ್ ಶೆಟ್ಟಿ, ವಸಂತಿ ಅಶೋಕ ಶೆಟ್ಟಿ

ಕಾರ್ಯಕ್ರಮವನ್ನು ಬಾಬಾಪ್ರಸಾದ್ ಅರಸ್ ಕುತ್ಯಾರು ನಿರ್ವಹಿಸಿದರು. ಕೋವಿಡ ನಿಯಮದಂತೆ ಸಭೆಯು ನಡೆಯಿತು. ಅದ್ದೂರಿಯ ಕಾರ್ಯಕ್ರಮ ನಡೆಸದೆ ಸಾಮಾನ್ಯ ಕಾರ್ಯಕ್ರಮ ನಡೆಸಿದ್ದು ಸಂಹ್ರಹಿಸಿದ ಮೊತ್ತವನ್ನು ಅನಾರೋಗ್ಯದಲ್ಲಿರುವವರಿಗೆ ಮತ್ತು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಗೆ ನೀಡಲಾಯಿತು.

ನೂತನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು ಧನ್ಯವಾದ ಸಮರ್ಪಿಸಿದರು.

ವರದಿ : ಈಶ್ವರ ಎಂ ಐಲ್

ಚಿತ್ರ : ದಿನೇಶ್ ಕುಲಾಲ್