ರಾಯಚೂರು : ಮಾರ್ಚ್ 14 ರಿಂದ 20ರವರೆಗೆ ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ಗುರುವೈಭವೋತ್ಸವ ಹಿನ್ನೆಲೆ ಸಪ್ತರಾತ್ರೋತ್ಸವ ಸಂಭ್ರಮ ನಡೆಯಲಿದೆ.
ಶ್ರೀ ಗುರು ರಾಘವೇಂದ್ರ ಸ್ವಾಮಿ ಗುರುವೈಭವೋತ್ಸವ ಹಿನ್ನೆಲೆ 7 ದಿನ ಕಾಲ ಶ್ರೀಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಾರ್ಚ್ 15ಕ್ಕೆ ಶ್ರೀ ಗುರು ರಾಘವೇಂದ್ರ ಸ್ವಾಮೀಜಿಗಳ 400ನೇ ಪಟ್ಟಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾರ್ಚ್ 20 ರಂದು ರಾಯರ ವರ್ಧಂತಿ ಉತ್ಸವ ನಡೆಯಲಿದೆ.
ಇಂದು ಅಭಯ ಆಂಜನೇಯ ಸ್ವಾಮಿ ವಿಗ್ರಹದ ಬಳಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ನಾಳೆ ಮಾರ್ಚ್ 15 ರಂದು ಬೆಳಗಿನ ಜಾವ 32 ಅಡಿ ಎತ್ತರದ ಆಂಜನೇಯ ಸ್ವಾಮಿ ವಿಗ್ರಹ ಉದ್ಘಾಟನೆ ನಡೆಯಲಿದೆ. ಇದು ಈ ಬಾರಿ ಉತ್ಸವದ ವಿಶೇಷವಾಗಿದೆ.
ಸಪ್ತರಾತ್ರೋತ್ಸವ ಹಿನ್ನೆಲೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಗುರುವೈಭವೋತ್ಸವ ಹಿನ್ನೆಲೆ ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ರಾಯರ ಮಠಕ್ಕೆ ಹರಿದು ಬರುತ್ತಿದೆ.
Click this button or press Ctrl+G to toggle between Kannada and English