- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪತ್ರಕರ್ತನಾದವನಿಗೆ ಸಂಪಾದನೆ ಮಾಡಲು ಸಾಕಷ್ಟು ದಾರಿಗಳಿವೆ : ಪ್ರಕಾಶ್ ಡಿ.ರಾಂಪೂರ್

Alvas Journalism [1]ಮೂಡುಬಿದ್ರೆ :  `ಒಬ್ಬ ಪತ್ರಕರ್ತನಾದವನಿಗೆ ಸಂಪಾದನೆ ಮಾಡಲು ಸಾಕಷ್ಟು ದಾರಿಗಳಿವೆ. ಆದರೆ ನೀತಿಯುತವಾದ ಮಾರ್ಗವನ್ನು ಆಯ್ಕೆ ಮಾಡುವುದು ಪತ್ರಕರ್ತನ ಜವಾಬ್ದಾರಿ. ಒಬ್ಬ ಪತ್ರಕರ್ತನಾದವನ ವ್ಯಕ್ತಿತ್ವ, ವಿಶ್ವಾಸರ್ಹತೆ ಅವನು ಆಯ್ಕೆ ಮಾಡಿಕೊಳ್ಳುವ ದಾರಿಯ ಮೇಲೆ ಅವಲಂಬಿತವಾಗಿರುತ್ತದೆ’ ಎಂದು ಬೆಂಗಳೂರು ಪಬ್ಲಿಕ್ ಟಿವಿ ವರದಿಗಾರ ಹಾಗೂ ಆಳ್ವಾಸ್ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ ಪ್ರಕಾಶ್ ಡಿ.ರಾಂಪೂರ್ ಹೇಳಿದರು.

ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ಸ್ನಾತಕೋತ್ತರ ವಿಭಾಗವು ಆಯೋಜಿಸಿದ್ದ “ಅಲ್ಯುಮಿನಿ ಲೆಕ್ಚರ್” ಕರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಮಾಧ್ಯಮ ಲೋಕದಲ್ಲಿ ಹೆಚ್ಚಿನ ಸ್ಪರ್ಧೆಯಿದೆ. ಇಲೆಕ್ಟ್ರಾನಿಕ್ ಮೀಡಿಯಾಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಕಾಲೇಜು ಮಟ್ಟದಲ್ಲಿಯೇ ಕಲಿತುಕೊಂಡರೆ ವೃತ್ತಿ ಜೀವನ ಸುಗಮವಾಗಿರುತ್ತದೆ. ಪತ್ರಕರ್ತರಿಗೆ ಮೂರು “ಸಿ”ಗಳಾದ ಕಮ್ಯೂನಿಕೇಶನ್, ಕಂಟೆಂಟ್ ಹಾಗೂ ಕ್ವಾಂಟೆಕ್ಟ್ಗಳು ಹೆಚ್ಚು ಉಪಯೋಗಕಾರಿಯಾಗಿದ್ದು, ಇವು ಅವನಲ್ಲಿ ಯಾವುದೇ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪಬ್ಲಿಕ್ ಟಿವಿಯ ಹಿರಿಯ ವೀಡಿಯೋ ಜರ್ನಲಿಸ್ಟ್ ಬೀರೇಶ್ ಮಾಧ್ಯಮ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳು ಹಾಗೂ ಅವುಗಳನ್ನು ಎದುರಿಸಬಹುದಾದ ತಂತ್ರಗಳನ್ನು ತಿಳಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ತನಿಖಾ ವರದಿಗಾರಿಕೆ, ಸ್ಟಿಂಗ್ ಆಪರೇಶನ್ಸ್, ಮಾನನಷ್ಟ ಮೊಕದ್ದಮೆ, ವರದಿಗಾರರಿಗಿರುವ ಕಾನೂನಾತ್ಮಕ ಚೌಕಟ್ಟು, ಭಾμÁ ಶುದ್ಧತೆ ಮೊದಲಾದ ವಿಷಯಗಳ ಕುರಿತ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಂಪನ್ಮೂಲ ವ್ಯಕ್ತಿಗಳು ಉತ್ತರಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಹಾಗೂ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.