ತವರಿನಿಂದ ಹಣ ಹಾಗೂ ಬೈಕ್‍ ಕೊಡಿಸುವಂತೆ ಪೀಡಿಸುತ್ತಿದ್ದ ಪತಿ, ಮದ್ವೆಯಾಗಿ 8 ತಿಂಗಳಲ್ಲೇ ಪತ್ನಿಆತ್ಮಹತ್ಯೆ

4:55 PM, Friday, March 19th, 2021
Share
1 Star2 Stars3 Stars4 Stars5 Stars
(No Ratings Yet)
Loading...

Hajiraದಾವಣಗೆರೆ : ವ್ಯಾಪಾರ ಮಾಡಲು ತವರಿನಿಂದ ಹಣ ತರಲು ಪೀಡಿಸುತ್ತಿದ್ದ ಪತಿಯ ಕಾಟ ತಾಳಲಾರದೆ  ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ದಾವಣಗೆರೆಯ ಬಂಬೂ ಬಜಾರ್ ನ ಮನೆಯೊಂದರಲ್ಲಿ ನಡೆದಿದೆ.

ಬಿಬೀ ಅಜೀರಾ (19) ಆತ್ಮಹತ್ಯೆಗೀಡಾದ ಗೃಹಿಣಿ. ಈಕೆ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಬಿಬೀ ಅಜಿರಾ-ಇಮ್ರಾನ್ ಮದುವೆಯಾಗಿ 8 ತಿಂಗಳಷ್ಟೆ ಕಳೆದಿತ್ತು. ಅಜಿರಾ ಕುಟುಂಬಸ್ಥರು 1ಲಕ್ಷ ರೂ ನಗದು, 3 ತೊಲೆ ಚಿನ್ನಾಭರಣ ಕೊಟ್ಟು ಮದುವೆ ಮಾಡಿ ಕೊಟ್ಟಿದ್ದರು. ಆದರೆ ಇತ್ತೀಚಿಗೆ ಪತಿ ಹಾಗೂ ಮನೆಯವರು ವ್ಯಾಪಾರ ಮಾಡಲು ತವರಿನಿಂದ ಹಣ ಹಾಗೂ ಬೈಕ್‍ಗೆ ಪೀಡಿಸುತ್ತಿದ್ದರು. ಇದರಿಂದ ಮನನೊಂದು ಅಜೀರಾ ತವರು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಸದ್ಯ ಘಟನೆ ಸಂಬಂಧ ನ್ಯಾಯಕ್ಕಾಗಿ ಅಜೀರಾ ಕುಟುಂಬಸ್ಥರು ಆಗ್ರಹಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತಹಸೀಲ್ದಾರ್ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ಸಂಬಂಧ ದಾವಣಗೆರೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English