- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅವ್ಯವಹಾರ ; ತನಿಖೆಯು ಪಾರದರ್ಶಕವಾಗಿಸಲು ಆಗ್ರಹ

Dharmika Maha Sangha [1]ಉಡುಪಿ  : ಸರಕಾರವು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅವ್ಯವಹಾರಗಳ ಬಗ್ಗೆ ಕೂಡಲೇ ತನಿಖೆ ಮಾಡಲು ನೀಡಿದ ಆದೇಶಕ್ಕೆ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಅಭಿನಂದನೆಗಳನ್ನು ವ್ಯಕ್ತಪಡಿಸುತ್ತದೆ. ಆದರೆ ಕೇವಲ ಒಂದು ದಿನದ ತನಿಖೆಯಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಅವ್ಯವಹಾರಗಳ ಪೂರ್ಣ ತನಿಖೆ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಮಾನ್ಯ ಸಚಿವರು ಕೂಡಲೇ ಸಕಾರಾತ್ಮಕ ಕೃತಿ ಮಾಡಿದ್ದು ನಿಜವಾಗಿ ಸ್ತುತ್ಯಾರ್ಹವಾಗಿದ್ದು, ಈ ಬಗ್ಗೆ ಮಾನ್ಯ ಧಾರ್ಮಿಕ ದತ್ತಿ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರಿಗೂ ನಾವು ಅಭಿನಂದನೆಯನ್ನು ಸಲ್ಲಿಸುತ್ತೇವೆ ಎಂದು ದೆವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವಕ್ತಾರರಾದ ಶ್ರೀ. ಗುರುಪ್ರಸಾದ ಗೌಡ ಅವರು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ. ಗೌಡ ಅವರು ಮುಂದೆ ಮಾತನಾಡುತ್ತಾ, ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಈಗಾಗಲೇ ಈ ಪ್ರಕರಣದ ಸಂಬಂಧ ಮಾನ್ಯ ದತ್ತಿ ಇಲಾಖೆಯ ಆಯುಕ್ತರು ಬೆಂಗಳೂರು ಮತ್ತು ಮಾನ್ಯ ಧಾರ್ಮಿಕ ದತ್ತಿ ಇಲಾಖೆಯ ಸಚಿವರಲ್ಲಿ ದೂರನ್ನು ದಾಖಲಿಸಲಾಗಿದ್ದು, ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘವು ಕೂಡ ಈ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಭಾಗಿಯಾಗುವಂತೆ ಅವಕಾಶ ನೀಡಬೇಕು ಎಂದು ಕೇಳಿಕೊಳ್ಳುತ್ತೇವೆ. ತನಿಖೆಯು ಪಾರದರ್ಶಕವಾಗಿರಬೇಕು ಮತ್ತು ಅವ್ಯವಹಾರ ಮಾಡಿದ ಭ್ರಷ್ಟ ಅಧಿಕಾರಿಗಳು ಒಂದೇ ದಿನದಲ್ಲಿ ಈ ಪ್ರಕರಣದಿಂದ ಕ್ಲೀನ್ ಚೀಟ್ ಆಗಿ ಹೊರಬರುವುದನ್ನು ತಡೆಯಲು, ಈ ತನಿಖೆಯಲ್ಲಿ ಭಕ್ತರ ಸಹಭಾಗವು ಅಷ್ಟೇ ಮಹತ್ವದ್ದಿದೆ. ಹಾಗಾಗಿ ಎಲ್ಲಾ ಆಯಾಮಗಳಿಂದ ತನಿಖೆಯಾಗಲು ಭಕ್ತರು ಸಹಭಾಗ ಮಾಡಬೇಕು ಎಂದು ಆಗ್ರಹಿಸಿದರು.

ಮಧುಸೂದನ ಅಯಾರ್,  ದಿನೇಶ ಎಂ. ಪಿ, ಶ್ರೀನಿವಾಸ, ಚಂದ್ರ ಮೊಗೇರ, ವಿಜಯ ಕುಮಾರ ಉಪಸ್ಥಿತರಿದ್ದರು