- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಿನ ಕುಲಾಲ ಭವನದ ಲೋಕಾರ್ಪಣೆಗೆ ಎಲ್ಲರೂ ಕೈಜೋಡಿಸೋಣ – ದೇವದಾಸ ಎಲ್ ಕುಲಾಲ್

Kulala Sangha [1]ಮುಂಬಯಿ : ನಗರದ ಹಿರಿಯ ಜಾತೀಯ ಸಂಸ್ಥೆ ಕುಲಾಲ ಸಂಘ ಮುಂಬಯಿ ಯ 9೦ನೇ ವಾರ್ಷಿಕ ಮಹಾಸಭೆಯು ಮಾ. 21ರಂದು ಥಾಣಾ ಘೋಡ್ ಬಂದರ್ ಒವಲ್ ಕೋರ್ಟ್ ಯಾರ್ಡ್ ಹೋಟೇಲ್ ಬಳಿಯ ಸಂಘದ ಸ್ವಂತ ನಿವೇಶನದಲ್ಲಿ ಸಂಘದ ಅಧ್ಯಕ್ಷ ದೇವದಾಸ ಎಲ್ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯು ಸರಕಾರದ ಕೋವಿಡ್ ನಿಯಮಾಗಳಿಗೆ ಅನುಗುಣವಾಗಿ ಕನಿಷ್ಠ ಸದಸ್ಯರನ್ನೊಳಗೊಂಡು, ಸದಸ್ಯರ ಅನುಕೂಲಕ್ಕಾಗಿ ಯೂಟ್ಯೂಬ್ ಮೂಲಕ ವರ್ಚುವಲ್ ಸಭೆಯನ್ನು ನಡೆಸಲಾಗಿದ್ದು ಅನೇಕ ಸದಸ್ಯರು ತಾವು ಇದ್ದಲ್ಲೇ ಈ ಸಭೆಯಲ್ಲಿ ಭಾಗವಹಿಸಿದ್ದರು.

ಕುಲಾಲ ಸಂಘದ ಅಧ್ಯಕ್ಷ ದೇವದಾಸ ಎಲ್ ಕುಲಾಲ್ ಅವರು 90 ನೇ ವಾರ್ಷಿಕ ಮಹಾಸಭೆಯನ್ನು ವೇದಿಕೆಯಲ್ಲಿದ್ದ ಇತರ ಗಣ್ಯರೊಂದಿಗೆ ದೀಪ ಬೆಳಗಿಸಿ ಪ್ರಾರ್ಥನೆಯೊಂದಿಗೆ ಮಹಾಸಭೆಗೆ ಚಾಲನೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದೇವದಾಸ ಎಲ್ ಕುಲಾಲ್ ಅವರು ಮಾತನಾಡುತ್ತಾ ಕಳೆದ 40 ವರ್ಷಗಳ ಕಾಲ ನಿರಂತರವಾಗಿ ಈ ಸಂಘದಲ್ಲಿ ಕೆಲಸ ಮಾಡುವ ಬಾಗ್ಯ ನನಗೆ ಸಿಕ್ಕಿದೆ. ಅದರೊಂದಿಗೆ ನಮ್ಮ ಕುಲಾಲ ಭವನ ಮಂಗಳೂರು ಹಾಗೂ ಘೋಡ್ ಬಂದರ್ ಯೋಜನೆಯು ನಿಮ್ಮೆಲ್ಲರ ಸಹಕಾರದಿಂದ ಅವಧಿಯಲ್ಲಿ ನಡಯುತ್ತಿದೆ. ಲಾಕ್ ಡೌನ ಸಂಧರ್ಭದಲ್ಲಿನ ಹೆಲ್ಪ್ ಲೈನ್ ಗೆ ಸಹಕರಿಸಿದ ಎಲ್ಲರಿಗೂ ನನ್ನ ಕೃತಜ್ನತೆಗಳು. ಅನೇಕರಿಗೆ ನಮ್ಮ ಸಂಘವು ವೈದ್ಯಕೀಯ ಹಾಗೂ ಶೈಕ್ಷಣೀಕ ಸಹಾಯವನ್ನು ನೀಡಿದೆ. ಕೊರೋನಾ ಸಂಧರ್ಭದಲ್ಲಿ ದಾನಿಗಳ ಸಹಾಯದಿಂದ ಅನೇಕರಿಗೆ ನಮ್ಮ ಸಂಘ ವು ಸಹಕರಿಸಿದೆ. ಮಂಗಳೂರಿನಲ್ಲಿ ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಕುಲಾಲ ಭವನದ ಲೋಕಾರ್ಪಣೆಗೆ ಎಲ್ಲರೂ ಕೈಜೋಡಿಸೋಣ. ಎಂದು ನುಡಿದ ಅವರು ಮಂಗಳೂರಿನ ಕುಲಶೇಖರದ ವೀರನಾರಾಯಣ ದೇವಸ್ಥಾನದ ಮುಂಬಯಿ ಸಮಿತಿ ರಚಿಸಿ ಮುಂಬಯಿಯ ಸಹಕಾರವು ನೀಡುವಲ್ಲಿ ನಾವು ಸಹಕರಿಸೋಣ. ನಮ್ಮ ಸಮಾಜದ ಆರ್ಥಿಕ ಸಂಸ್ಥೆ ಜ್ಯೊತಿ ಕ್ರೆಡಿಟ್ ಸೊಸೈಟಿಗೆ ನಿಮ್ಮ ಸಹಕಾರವಿರಲಿ. ಹೆಚ್ಚಿನವರಿಗೆ ಈ ಸಭೆಗೆ ಬರಲಾಗದಿದ್ದರೂ ಯೂಟ್ಯೂಬ್ ಇದರಲ್ಲಿ ಬಾಗವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

Kulala Sangha [2]ಗೌರವ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಅವರು ಸಂಘದ ವಾರ್ಷಿಕ ವರದಿ ಹಾಗೂ ಗತ ಮಹಾಸಭೆಯ ವರದಿಯನ್ನು ಮಂಡಿಸಿದರೆ , ಗೌ. ಕೋಶಾಧಿಕಾರಿ ಜಯ ಅಂಚನ್ ಪರವಾಗಿ ಗೌರವ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಲೆಕ್ಕ ಪತ್ರವನ್ನು ಸಭೆಯ ಮುಂದಿಟ್ಟರು. ಸಭೆಯಲ್ಲಿದ್ದ ಸದಸ್ಯರು ಅದನ್ನು ಅನುಮೋದಿಸಿದರು.

ಮಂಗಳೂರಿನ ಕುಲಾಲ ಭವನದ ಯೋಜನೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ರಾಷ್ಟೀಕೃತ ಬ್ಯಾಂಕೊಂದರಿಂದ ದೊಡ್ಡ ಮೊತ್ತದ ಸಾಲವನ್ನು ಪಡೆಯಲು ಮಹಾಸಭೆಯಲ್ಲಿ ಅನುಮತಿಯನ್ನು ಪಡೆಯಲಾಯಿತು. ಈ ಬಗ್ಗೆ ಸಂಘದ ಘಟನೆಯಲ್ಲಿ ಸೂಕ್ತ ತಿದ್ದುಪಡಿ ಮಾಡುದರೊಂದಿಗೆ ಸಂಪೂರ್ಣ ವಿವರವನ್ನು ಪ್ರಧಾನ ಕಾರ್ಯದರ್ಶಿಯವರು ಸಭೆಯಲ್ಲಿ ಮಂಡಿಸಿದರು.

ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದತ್ತು ಸ್ವೀಕಾರ ನಡೆಯಿತು. 19 ಮಕ್ಕಳನ್ನು ಸ್ಥಳೀಯ ಸಮಿತಿಯವರು ದತ್ತು ಸ್ವೀಕಾರ ಪಡೆದಿದ್ದು ಗೌ. ಕೋಶಾಧಿಕಾರಿ ಜಯ ಅಂಚನ್ ಈ ಬಗ್ಗೆ ಮಾಹಿತಿಯಿತ್ತರು.

ಈ ಸಂದರ್ಭದಲ್ಲಿ ವರದಿ ವರ್ಷದಲ್ಲಿ ಸಂಘದ ಮಂಗಳೂರಿನ ಕುಲಾಲ ಭವನಕ್ಕೆ ಧನ ಸಹಾಯವಿತ್ತ ಹಾಗೂ ಕುಲಾಲ ಭವನಕ್ಕೆ ಪ್ರಾಯೋಜಕರಾಗಿ 50 ಲಕ್ಷ ರೂಪಾಯಿ ನೀಡಿ ಸಹಕರಿಸಿದ ಸುನಿಲ್ ಆರ್ ಸಾಲ್ಯಾನ್ ದಂಪತಿ, 25 ಲಕ್ಷ ದೇಣಿಗೆಯನ್ನು ಘೋಷಿಸಿದ ಗಿರೀಶ್ ಬಿ. ಸಾಲ್ಯಾನ್ ದಂಪತಿ ಇವರನ್ನು ಸನ್ಮಾನಿಸಲಾಯಿತು.

ಅಲ್ಲದೆ 10 ಲಕ್ಷ ದೇಣಿಗೆಯನ್ನು ನೀಡಿದ ವಿಶ್ವನಾಥ ಬಂಗೇರ ತವರೂರಲ್ಲಿ ಇದ್ದ ಕಾರಣ ಅವರ ಅನುಪಸ್ಥಿತಿಯಲ್ಲಿ ಅವರ ಹೆಸರನ್ನು ಅಧ್ಯಕ್ಷರು ಈ ಸಂದರ್ಭದಲ್ಲಿ ಹೇಳಿದರು. ಮಾತ್ರವಲ್ಲದೆ ಕುಲಾಲ ಭವನಕ್ಕೆ 5ಲಕ್ಷ ರೂಪಾಯಿ ದೇಣಿಗೆಯಿತ್ತ ಜಗದೀಶ್ ಆರ್. ಬಂಜನ್, ಮಮತಾ ಎಸ್. ಗುಜರನ್, ಜಯರಾಜ್ ಪಿ. ಸಾಲ್ಯಾನ್. ನಂದಕುಮಾರ್ ದಂಪತಿ ಧಾಣಾ. ಎಲ್ಲಾ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನಮ್ಮಲ್ಲಿ ಬಲಿಷ್ಟವಾದ ಕಾರ್ಯಕರ್ತರಿದ್ದಾರೆ. ಕೋರೋನಾ ಕಾಲದಲ್ಲೂ ಈ ತನಕ ಆಗದ ಸಮಾಜ ಪರ ಕೆಲಸ ಸಂಘದ ಲ್ಲಿ ಮತ್ತು ಸಮಿತಿಯಿಂದ ಆಗಿದೆ. ನಾವೆಲ್ಲರೂ ಮನಸ್ಸನ್ನು ಒಗ್ಗಟ್ಟಾಗಿರಿಸಿ ಕ್ರೀಯಾಶೀಲರಾಗೋಣ. ಸಂಘಕ್ಕೆ ನೂರು ತುಂಬುವ ಸಂದರ್ಭದಲ್ಲಿ ಜ್ಯೋತಿ ಕ್ರೆಡಿಟ್ ಸೊಸೈಟಿಗೆ 50 ವರ್ಷ ಆಗಲಿದೆ. ಇದನ್ನು ಅದ್ದೂರಿಯಿಂದ ಆಚರಿಸೋಣ. ಮುಂದಿನ ಹತ್ತು ವರ್ಷಗಳು ನಮಗೆ ಬಹಳ ಮಹತ್ವಪೂರ್ಣವಾಗಿದೆ. ಮುಂದಿನ ವರ್ಷಗಳಲ್ಲಿ ಸೊಸೈಟಿಯ ಇನ್ನೂ ಕೆಲವು ಶಾಖೆಗಳಾಗಬೇಕಾಗಿದೆ. ನಮ್ಮ ಜ್ಯೋತಿ ಕ್ರೆಡಿಟ್ ಸೊಸೈಟಿಯ ಬಲಿಷ್ಟವಾಗಿದೆ. ಇದಕ್ಕೆ ನಿಮ್ಮೆಲ್ಲರ ಹೆಚ್ಚಿನ ಸಹಕಾರವನ್ನು ಬಯಸುತ್ತಿರುವೆನು. ಸಂಘದ ಎಲ್ಲಾ ಯೋಜನೆಗಳು ನಮ್ಮ ಸಮಾಜದ ಮುಂದಿನ ಪೀಳಿಗೆಗೆ ಪ್ರಯೋಜನಕಾರಿಯಾಗುವುದು ಎನ್ನುತ್ತಾ ಧನ ಸಹಾಯದೊಂದಿಗೆ ಮನಸ್ಸಿನ ಸಹಾಯವಿರಲಿ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಉಪಾಧ್ಯಕ್ಷ, ರಘು ಮೂಲ್ಯ ಮಾತನಾಡುತ್ತಾ ಇಂದಿನ ಈ ಪರಿಸ್ಥಿತಿಯಲ್ಲಿ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಈ ಸಭೆಯನ್ನು ಸಮಯಕ್ಕೆ ಸರಿಯಾಗಿ ನಡೆಸುವಂತೆ ಮಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು. ಲಾಕ್ ಡೌನ್ ಸಂಧರ್ಭದಲ್ಲಿ ಸಮಾಜ ಬಾಂಧವರಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ನತೆ ಸಲ್ಲಿಸಿದರು. ಮಂಗಳೂರು ಕುಲಶೇಖರದ ವೀರನಾರಾಯಣ ದೇವಸ್ಥಾನದ ಜೀರ್ಣೋದ್ದಾರದ ಬಗ್ಗೆ ಮುಂಬಯಿ ಪೇಜಾವರ ಮಠದಲ್ಲಿ ಮಾ. 11 ರಂದು ಸಮಾಲೋಚನ ಸಭೆ ನಡೆಸಲಿದ್ದು ಸಮಾಜ ಬಾಂಧವರು ಈ ಸಭೆಯಲ್ಲಿ ಉಪಸ್ಥಿತರಿರಬೇಕಾಗಿ ವಿನಂತಿಸಿದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್ ಮಾತನಾಡುತ್ತಾ ಈ ಕೋರೋನಾ ಸಮಯದಲ್ಲಿ ಪರಿವಾರದವರು ಎಲ್ಲರೂ ಮನೆಯಲ್ಲಿದ್ದು ಕಳೆದ ಒಂದು ವರ್ಷದಿಂದ ಮಹಿಳೆಯರು ಮನೆಯಲ್ಲಿದ್ದು ಮಾಡಿದ ಸೇವೆ ಹಾಗೂ ಪುರುಷರು ಸಂಘದ ಕೆಲಸದಲ್ಲಿ ಕ್ರೀಯಾಶೀಲರಾಗಿರಲು ಅವರ ಹಿಂದೆ ಇದ್ದು ಪ್ರೋತ್ಸಾಹ ನೀಡುತ್ತಿರುವ ಮಹಿಳೆಯರ ಬಗ್ಗೆ ಅಭಿನಂದನೆ ಸಲ್ಲಿಸುತ್ತಾ, ಕುಲಾಲ ಭವನಕ್ಕೆ ಇನ್ನೂ ಪ್ರತೀ ಮನೆ ಮನೆಗೆ ಹೋಗಲು ಅಸಾದ್ಯವಾಗಿದ್ದು ಎಲ್ಲರೂ ಸಹಕರಿಸಬೇಕೆಂದರು.

ಅಮೂಲ್ಯದ ಉಪಸಂಪಾದಕರಾದ ಆನಂದ ಬಿ. ಮೂಲ್ಯ ಅವರು ಅಮೂಲ್ಯ ಪತ್ರಿಕೆಯ ಬಗ್ಗೆ ಮಾತನಾಡುತ್ತಾ ಎಲ್ಲರೂ ಅಮೂಲ್ಯ ಪತ್ರಿಕೆಯ ಸದಸ್ಯರಾಗಬೇಕು ಪ್ರತಿಯೊಂದು ಮನೆಗೆ ಈ ಪತ್ರಿಕೆಯು ತಲಪುವಂತಾಗಬೇಕು ಎಂದು ವಿನಂತಿಸಿದರು. ಪತ್ರಿಕೆಗೆ ಜಾಹೀರಾತು ನೀಡಿದವರಿಗೆ ಹಾಗೂ ವಿವಿಧ ರೀತಿಯಲ್ಲಿ ಸಹಕರಿಸಿದವರಿಗೆ ಅವರು ಕೃತಜ್ನತೆ ಸಲ್ಲಿಸಿದರು.

ನ್ಯಾಯವಾದಿ ಉಮಾನಾಥ್ ಮೂಲ್ಯ ಮಾತನಾಡುತ್ತಾ ಸಂಘದ ಅಧ್ಯಕ್ಷರಾದ ದೇವದಾಸ್ ಕುಲಾಲ್ ಅವರ ತಂಡ ಸಮರ್ಥವಾಗಿ ಸಂಘವನ್ನು ಮುನ್ನಡೆಸುತ್ತಿದೆ ಅವರು ರೂಪಿಸಿಕೊಂಡಿರುವ ಎಲ್ಲಾ ಯೋಜನೆಗಳನ್ನು ಶೀಘ್ರಗತಿಯಲ್ಲಿ ಪೂರೈಸುತ್ತಿದ್ದಾರೆ. ಊರಿನಲ್ಲಿ ಮತ್ತು ಮುಂಬೈಯಲ್ಲಿ ನಿರ್ಮಾಣವಾಗುವ ಕಾರ್ಯಗಳು ಸಮರ್ಥ ರೀತಿಯಲ್ಲಿ ನಡೆಯುತ್ತಿದೆ ಎಂದು ಅಭಿನಂದಿಸಿದರು.

ಪತ್ರಕರ್ತ ಬೊಕ್ಕ ಪಟ್ನ ದಿನೇಶ್ ಬಿ ಕುಲಾಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ ಪ್ರಾದೇಶಿಕ ಹಾಗೂ ಉಪಸಮಿತಿಯವರು ಸಮಾಜ ಅಭಿವೃದ್ದಿ ಬಗ್ಗೆ ಮಾಡಿದ ಸಾಧನೆ ಬಗ್ಗೆ ಇಂತಹ ಸಭೆಯಲ್ಲಿ ತಿಳಿಸುದರೊಂದಿಗೆ ತಮ್ಮ ಪ್ರದೇಶದ ಜನರ ಸಮಸ್ಯೆಯನ್ನು ತಿಳಿಸುವಂತಾಗಬೇಕು. ಮಂಗಳೂರಿನ ವೀರ ನಾರಾಯಣ ಕ್ಷೇತ್ರದ ಜೀರ್ಣೋದ್ದಾರದ ಬಗ್ಗೆ ಎಪ್ರಿಲ್ ತಿಂಗಳ 11 ರಂದು ಮುಂಬಯಿಯಲ್ಲಿ ನಡೆಯಲಿರುವ ಸಭೆಗೆ ತಾವೆಲ್ಲರೂ ಆಗಮಿಸಿ ಮುಂಬಯಿಯ ನಮ್ಮವರು ಅದಕ್ಕೆ ಬೇಕಾದ ಸಹಕಾರವನ್ನು ನೀಡಬೇಕು ಎನ್ನುತ್ತಾ ಶ್ರೀ ಕ್ಷೇತ್ರದ ಬಗ್ಗೆ ವಿವರವನ್ನು ನೀಡಿದರು.

ಕಾರ್ಯಕಾರಿ ಸಮಿತಿಯ ಸದಸ್ಯ ಸುನಿಲ್ ಆರ್ ಸಾಲ್ಯಾನ್ ಮಾತನಾಡುತ್ತಾ ಸಂಘದ ಕಾರ್ಯಕಾರಿ ಸಮಿತಿಗೆ ಸೇರ್ಪಡೆಗೊಂಡ ನಂತರ ನನಗೆ ಸಂಘದ ಕರ್ತವ್ಯದ ಕೆಲಸಗಳು ಬಗ್ಗೆ ಅರಿವಾಗಿದೆ. ಸಮಾಜದ ಮೇಲೆ ಅಭಿಮಾನ ವಿರಿಸಿ ಕೆಲಸ ಮಾಡುವ ಎಲ್ಲರನ್ನು ಅಭಿನಂದಿಸುವ ಕೆಲಸ ಆಗಬೇಕು ಎಂದು ನುಡಿದರು.

ಸದಸ್ಯ ನೋ ದಾಣಿಕೆಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಮುಲ್ಯ ಮಾತನಾಡುತ್ತಾ ಸಂಘದ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಆಗಬೇಕು ಮುಂದೆ ಈ ಸಂಘವನ್ನು ಯುವಸಮುದಾಯ ಮುನ್ನನಡೆಸುವಂತಾಗಬೇಕು ಎಂದು ನುಡಿದರು

ಸಂಘದ ಜೊತೆ ಕೋಶಾಧಿಕಾರಿ ಸುನಿಲ್ ಕೆ ಕುಲಾಲ್, ಸದಸ್ಯರುಗಳಾದ ಡಿ. ಐ. ಮೂಲ್ಯ, ಪಿ ಶಂಕರ ಮೂಲ್ಯ, ಶೀನ ಜಿ ಮೂಲ್ಯ, ಸಂಜೀವ ಎನ್ ಬಂಗೇರ, ಎಲ್ ಆರ್ ಮೂಲ್ಯ, ನ್ಯಾ. ಉಮಾನಾಥ ಕೆ ಮೂಲ್ಯ, ಆನಂದ ಕೆ ಕುಲಾಲ್, , ಆನಂದ ಬಿ ಮೂಲ್ಯ, ಜೈರಾಜ್ ಪಿ ಸಾಲ್ಯಾನ್, ಸುಂದರ ಎನ್ ಮೂಲ್ಯ, ಸುನಿಲ್ ಆರ್ ಸಾಲ್ಯಾನ್, ಶೇಖರ ಬಿ ಮೂಲ್ಯ, ರೇಣುಕ ಎಸ್ ಸಾಲ್ಯಾನ್, ಸಾಮಾಜಿಕ ಹಾಗೂ ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕೆ ಕುಲಾಲ್, ಸದಸ್ಯ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಪಿ ಶೇಖರ ಮೂಲ್ಯ, ಸ್ಟೂಡೆಂಟ್ಸ್ ಕೌನ್ಸಿಲ್ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್ ಬಂಗೇರ, , ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಶೀನ ಜಿ ಮೂಲ್ಯ, ಮೀರಾರೋಡ್ – ವಿರಾರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಂದರ್ ಕೆ ಮೂಲ್ಯ, ಠಾಣೆ – ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಡಿ ಐ ಮೂಲ್ಯ, ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ವಾಸು ಎಸ್ ಬಂಗೇರ, ಚರ್ಚ್ ಗೇಟ್ – ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಸತೀಶ್ ಬಂಗೇರ, ಸಿ ಎಸ್ ಟಿ – ಮುಲೂಂಡ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಂದರ್ ಎನ್ ಮೂಲ್ಯ, ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ದಿವಂಗತ ಡಾಕ್ಟರ್ ಎಚ್ ಎಂ ಸುಬ್ಬಯ್ಯ ಸ್ಕಾಲರ್ಶಿಪ್. ಶಾಂತ ಸುಬ್ಬಯ್ಯ ಸ್ಕಾಲರ್ಶಿಪ್. ಡಾಕ್ಟರ್ ಎಚ್ ಎಂ ಸುಬ್ಬಯ್ಯ ಮೆಮೋರಿಯಲ್ ಎಜುಕೇಶನ್ ರೋಲಿಂಗ್ ಸಿಲ್ಡ್.. ಕುಲಾಲ ರತ್ನ ದಿವಂಗತ ಬಂಟ್ವಾಳ ಬಾಬು ಸಾಲ್ಯಾನ್ ರೋಲಿಂಗ್ ಸಿಲ್ಡ್ . ದಿವಂಗತ ಸುಂದರ ಕರ್ಮರನ್ ಮೆಮೋರಿಯಲ್ ರೋಲಿಂಗ್ ಸಿಲ್ಡ್. ನೀಡಲಾಯಿತು

ಕೊನೆಯಲ್ಲಿ ಸಂಘದ ಜೊತೆ ಕಾರ್ಯದರ್ಶಿ ಉಮೇಶ್ ಬಂಗೇರ ಅಭಾರ ಮನ್ನಿಸಿದರು. ಬಳಿಕ ಪ್ರೀತಿ ಭೋಜನ ನಡೆಯಿತು.

ವರದಿ : ಈಶ್ವರ ಎಂ. ಐಲ್
ಚಿತ್ರ : ದಿನೇಶ್ ಕುಲಾಲ್